ಇತ್ತೀಚಿನ ದಿನಗಳಲ್ಲಿ ಎನ್‌ಎಫ್‌ಟಿ ಚರ್ಚೆಯಲ್ಲಿದೆ. ಇದು ಕೇವಲ ಟೋಕನ್ ಅಲ್ಲ. ಗಳಿಸಲು ಮತ್ತು ಹೂಡಿಕೆ ಮಾಡಲು ಉತ್ತಮ ಆಯ್ಕೆಯಾಗಿದೆ. ಎನ್ ಎಫ್ ಟಿಗಳನ್ನು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗುತ್ತದೆ. ಎನ್ ಎಫ್ ಟಿ ಡಿಜಿಟಲ್ ಸಂಗ್ರಹದ ಖರೀದಿದಾರರು, ಶಾಶ್ವತವಾಗಿ ಆ ಆಸ್ತಿಗಳ ಮಾಲೀಕರಾಗಿ ಉಳಿಯಬಹುದು.
ಎನ್ ಎಫ್ ಟಿ ಅಂದರೆ ನಾನ್ ಫಂಗಬಲ್ ಟೋಕನ್. ಎನ್ ಎಫ್ ಟಿ, ಬಿಟ್‌ಕಾಯಿನ್ ಅಥವಾ ಇತರ ಕ್ರಿಪ್ಟೋಕರೆನ್ಸಿಗಳಂತೆಯೇ ಕ್ರಿಪ್ಟೋ ಟೋಕನ್ ಆಗಿದೆ. ಇಬ್ಬರು ವ್ಯಕ್ತಿಗಳು ಬಿಟ್‌ಕಾಯಿನ್‌ಗಳನ್ನು ಹೊಂದಿದ್ದರೆ, ಅವರು ಅವುಗಳನ್ನು ವಿನಿಮಯ ಮಾಡಿಕೊಳ್ಳಬಹುದು.
ವರ್ಚುವಲ್ ಆಟಗಳಿಂದ ಕಲಾಕೃತಿಯವರೆಗೆ ಎಲ್ಲದಕ್ಕೂ ಇದನ್ನು ಬಳಸಬಹುದು. ಎನ್ ಎಫ್ ಟಿ ಗಳನ್ನು ಪ್ರಮಾಣಿತ ಮತ್ತು ಸಾಂಪ್ರದಾಯಿಕ ವಿನಿಮಯ ಕೇಂದ್ರಗಳಲ್ಲಿ ವ್ಯಾಪಾರ ಮಾಡಲಾಗುವುದಿಲ್ಲ. ಇವುಗಳನ್ನು ಡಿಜಿಟಲ್ ಮಾರುಕಟ್ಟೆಗಳಲ್ಲಿ ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು.
ಪೇಂಟಿಂಗ್, ಪೋಸ್ಟರ್, ಆಡಿಯೋ ಅಥವಾ ವೀಡಿಯೊವನ್ನು ಡಿಜಿಟಲ್ ಜಗತ್ತಿನಲ್ಲಿ ಸಾಮಾನ್ಯ ವಸ್ತುಗಳಂತೆ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಇದಕ್ಕೆ ಪ್ರತಿಯಾಗಿ ಎನ್ ಎಫ್ ಟಿಎಸ್ ಎಂಬ ಡಿಜಿಟಲ್ ಟೋಕನ್ ಸಿಗುತ್ತದೆ. ಎನ್ ಎಫ್ ಟಿ ರಚಿಸಲು, ಮೊದಲು ಆನ್‌ಲೈನ್ ವ್ಯಾಲೆಟ್ ರಚಿಸಬೇಕು. ಇದರಲ್ಲಿ ಎನ್ ಎಫ್ ಟಿಎಸ್ ಇಟ್ಟುಕೊಳ್ಳಬಹುದು.
ಕ್ರಿಪ್ಟೋ ಸಂಗ್ರಹಿಸಿಟ್ಟುಕೊಳ್ಳಲು ಖಾಸಗಿ ಕೀ ಬೇಕಾಗುತ್ತದೆ. ಅದಿಲ್ಲದೆ ನೀವು ಎನ್ ಎಫ್ ಟಿ ಟೋಕನ್ ಗೆ ಪ್ರವೇಶ ಮಾಡಲು ಸಾಧ್ಯವಾಗುವುದಿಲ್ಲ. ವ್ಯಾಲೆಟನ್ನು MetaMask ಗೆ ಲಿಂಕ್ ಮಾಡಬೇಕು. ನಂತರ ಸ್ವಂತ ಎನ್ ಎಫ್ ಟಿ ರಚಿಸಬಹುದು.nftically.com. ನಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ.