ಕಳೆದ 30 ವರ್ಷಗಳಿಂದಲೂ ಟ್ವೆಲ್ವ್ ಟೆಂಪಲ್ ಟೀಮ್ ಒಂದು ರಹಸ್ಯವಾದ, ಅತ್ಯಂತ ಪುರಾತನ ಕಾಲದ ನಿಧಿಯ ಶೋಧ ನಡೆಸುತ್ತಿದೆ. ಅವರು ಅನೇಕ ಪುರಾತತ್ವ ಶಾಸ್ತ್ರಜ್ಞರು, ಇತಿಹಾಸಕಾರರು, ಪುರಾತನ ಸಾಮ್ರಾಜ್ಯಗಳ ಬಗ್ಗೆ ಸಂಶೋಧನೆ ಮಾಡಿರುವವರ ಬೆನ್ನ ಹಿಂದೆ ಬಿದ್ದಿದ್ದಾರೆ.
ಅವರೆಲ್ಲರಿಂದಲೂ ’ ಫಿನ್‌ಲ್ಯಾಂಡಿನಲ್ಲಿ ಅಡಗಿರುವ ವಿಶ್ವದಲ್ಲೇ ಅತಿದೊಡ್ಡ ನಿಧಿ’ಯ ಬಗ್ಗೆ ಏನೇ ಮಾಹಿತಿ ಸಿಕ್ಕರೂ ಕೆದಕಿ ಜಾಲಾಡುತ್ತಿದ್ದಾರೆ.
ಈ ನಿಧಿಯ ಹೆಸರು ’ ಲೆಮ್ಮಿನ್‌ಕೇನೆನ್ ನಿಧಿ ರಾಶಿ’ ಎಂದು.
ಅವರ ಒಟ್ಟು 34 ವರ್ಷಗಳ ಶ್ರಮ, 1 ಲಕ್ಷ ಗಂಟೆಗಳ ಭೂಮಿಯ ಉತ್ಖನನವು ಈಗ ಫಲ ನೀಡುವುದು ಖಾತ್ರಿಯಾಗಿದೆ.
ಧಾರಾವಾಹಿಯ ಈ ದೃಶ್ಯ ನೋಡಿ ಬಿದ್ದು ಬಿದ್ದು ನಗ್ತಿದ್ದಾರೆ ಜನ….!
ಸುಮಾರು 50 ಸಾವಿರ ವಜ್ರಗಳು, ಮುತ್ತು ರತ್ನಗಳು, ಚಿನ್ನದ ಗಟ್ಟಿಗಳು, ಅತ್ಯಮೂಲ್ಯವಾದ ಪ್ರಾಚೀನ ವಸ್ತುಗಳ ಸಂಗ್ರಹವೇ ಈ ಲೆಮ್ಮಿನ್‌ಕೇನೆನ್ ನಿಧಿ ರಾಶಿ.
1987ರಿಂದಲೂ 12 ಜನ ತಜ್ಞರು, ಸಾಹಸಿಗರ ತಂಡ ನಿಧಿಯ ಹಿಂದೆ ಬಿದ್ದಿದೆ. ಪ್ರತಿ ದಿನ 6 ಗಂಟೆಗಳ ಕಾಲ ಈ ತಂಡವು ನಿಧಿಯ ಶೋಧಕ್ಕಾಗಿಯೇ ಮೀಸಲಿಟ್ಟಿದೆ. ಒಂದೇ ಒಂದು ದಿನ ಕೂಡ ರಜೆ ಪಡೆದಿಲ್ಲ.
BIG BREAKING: ಪವರ್ ಸ್ಟಾರ್ ಪುನೀತ್ ಗೆ ಸ್ಯಾಂಡಲ್ ವುಡ್ ನಮನ; ನ. 16 ರಂದು ಬೃಹತ್ ಕಾರ್ಯಕ್ರಮ
ಅವರ ಅಗಾಧವಾದ ಶೋಧದ ಫಲವಾಗಿ ನಿಧಿಯ ರಾಶಿಯು ಫಿನ್‌ಲ್ಯಾಂಡಿನ ರಾಜಧಾನಿ ಹೆಲ್‌ಸಿಂಕಿಯ ಪೂರ್ವದಲ್ಲಿ 20 ಮೈಲಿಗಳ ದೂರದಲ್ಲಿ ’ಸಿಬ್ಬೊಸ್‌ವರ್ಗ್’ ಎಂಬ ಗುಹೆಗಳ ಸಂಕೀರ್ಣದಲ್ಲಿ ನಿಧಿಯ ರಾಶಿ ಇರುವುದು ಖಾತ್ರಿಪಟ್ಟಿದೆ.
ಸಿಪೂ ಎಂಬ ಪ್ರದೇಶದಲ್ಲಿ ಒಂದು ಭೂಗತವಾದ ಮಂದಿರವಿದೆ. ಅದರಲ್ಲಿ ನಿಧಿಯನ್ನು ಅಡಗಿಸಿಡಲಾಗಿದೆ. ಈ ನಿಧಿಯ ಒಟ್ಟಾರೆ ಮೌಲ್ಯವು 1.5 ಲಕ್ಷ ಕೋಟಿ ರೂ. ಆಗಲಿದೆ ಎಂದು ಉತ್ಖನನ ತಂಡದ ನೇತೃತ್ವ ವಹಿಸಿರುವ ಲಾರ್ ಬಾಕ್ ಹೇಳಿದ್ದಾರೆ. ಅವರ ವಂಶಸ್ಥರೇ ಅಡಗಿಸಿಟ್ಟ ನಿಧಿ ಅದು ಎಂದು ಅವರು ಘೋಷಿಸಿಕೊಂಡಿದ್ದಾರೆ!