alex Certify ಫೋಟೋ ಟ್ವೀಟ್‌ ಮಾಡಿದ ವರದಿಗಾರನ ಕಾಲೆಳೆದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋಟೋ ಟ್ವೀಟ್‌ ಮಾಡಿದ ವರದಿಗಾರನ ಕಾಲೆಳೆದ ನೆಟ್ಟಿಗರು

ಸಿಒಪಿ 26 ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನವು ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಅಕ್ಟೋಬರ್ 31 ರಂದು ಪ್ರಾರಂಭವಾಗಿದ್ದು, ನವೆಂಬರ್ 12 ರಂದು ಮುಕ್ತಾಯಗೊಳ್ಳಲಿದೆ. ಇದರಲ್ಲಿ ವಿಶ್ವದ ಅನೇಕ ನಾಯಕರು ಭಾಗವಹಿಸುತ್ತಿದ್ದಾರೆ. ಶೃಂಗಸಭೆಯ ವರದಿಗಾಗಿ ಹಲವಾರು ಸುದ್ದಿ ವಾಹಿನಿ, ನ್ಯೂಸ್ ಪೇಪರ್ ಪತ್ರಕರ್ತರು ಕೂಡ ಜಮಾಯಿಸಿದ್ದಾರೆ.

ಆದರೆ, ಖ್ಯಾತ ಸುದ್ದಿ ವಾಹಿನಿಯು ಅತ್ಯಂತ ಪ್ರಸಿದ್ಧ ಆಂಕರ್‌ಗಳಲ್ಲಿ ಒಬ್ಬರನ್ನು ತಪ್ಪಾದ ಸ್ಕಾಟಿಷ್ ನಗರಕ್ಕೆ ಕಳುಹಿಸಿದೆ ಎಂದು ನೆಟ್ಟಿಗರು ಅಪಹಾಸ್ಯ ಮಾಡಿದ್ದಾರೆ. ಸಿಎನ್ಎನ್ ಆಂಕರ್ ವುಲ್ಫ್ ಬ್ಲಿಟ್ಜರ್ ಅವರು ಶೃಂಗಸಭೆಯನ್ನು ವರದಿ ಮಾಡಲು ಎಡಿನ್‌ಬರ್ಗ್‌ನಲ್ಲಿರುವುದಾಗಿ ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ.

ಕೆ -ಸೆಟ್ ಫಲಿತಾಂಶ ಪ್ರಕಟ: 4779 ಮಂದಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ

ವುಲ್ಫ್ ಅವರು ಎಡಿನ್‌ಬರ್ಗ್ ಕ್ಯಾಸಲ್‌ನೊಂದಿಗೆ ತಾತ್ಕಾಲಿಕ ಸ್ಟುಡಿಯೋದಲ್ಲಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು, ವುಲ್ಫ್ ವರದಿ ಮಾಡುತ್ತಿರುವ ಸ್ಥಳದಿಂದ ಪಶ್ಚಿಮಕ್ಕೆ 62 ಕಿ.ಮೀ. ದೂರ ಅಂದ್ರೆ ಗ್ಲಾಸ್ಗೋದಲ್ಲಿ ನಡೆಯುತ್ತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಗ್ಲಾಸ್ಗೋದಲ್ಲಿ ತುಂಬಾ ಜನರು ಕಾರ್ಯನಿರತವಾಗಿದ್ದು, ಎಲ್ಲರಿಗೂ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಿಲ್ಲ ಹೀಗಾಗಿ ಹೆಚ್ಚಿನ ಪತ್ರಕರ್ತರು ಎಡಿನ್‌ಬರ್ಗ್ ನಲ್ಲಿರುವುದಾಗಿ ಹೇಳಲಾಗಿದೆ.

— Wolf Blitzer (@wolfblitzer) November 1, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...