ಕೇರಳದ ಪಥನಂತಿಟ್ಟ ಜಿಲ್ಲೆಯ ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಚಿಥಿರ ಅಟ್ಟತಿರುನಾಳ್ ಹಬ್ಬದ ಪ್ರಯುಕ್ತ ಇಂದಿನಿಂದ ಪುನಾರಂಭಗೊಂಡಿದೆ. ಕೋವಿಡ್ 19 ಮಾರ್ಗಸೂಚಿ ಹಿನ್ನೆಲೆ ದೇಗುಲಕ್ಕೆ ಭೇಟಿ ನೀಡಲು ಇಚ್ಛಿಸುವ ಭಕ್ತಾದಿಗಳು ಮುಂಚಿತವಾಗಿಯೇ ಸ್ಲಾಟ್ ಬುಕ್ಕಿಂಗ್ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಅಲ್ಲದೇ ದೇಗುಲಕ್ಕೆ ಭೇಟಿ ನೀಡುವ ಭಕ್ತಾದಿಗಳು ಕೋವಿಡ್ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದಿರುವುದು ಕಡ್ಡಾಯವಾಗಿದೆ. ಇನ್ನೂ ಕೊರೊನಾ ಲಸಿಕೆಯ ಪಡೆಯದವರು ಅಥವಾ ಕೇವಲ 1 ಡೋಸ್ ಲಸಿಕೆಯನ್ನು ಸ್ವೀಕರಿಸಿದವರು ಕೋವಿಡ್ ನೆಗೆಟಿವ್ ವರದಿಯನ್ನು ತೋರಿಸತಕ್ಕದ್ದು.
ಟಿ-20 ವಿಶ್ವಕಪ್: ಟೀಂ ಇಂಡಿಯಾದಿಂದ ಹೊರ ಬೀಳಲಿದ್ದಾರೆ ಈ ಆಟಗಾರರು….?
ಅಕ್ಟೋಬರ್ನಲ್ಲಿ ಪ್ರವಾಹದ ಪರಿಸ್ಥಿತಿಯಿಂದಾಗಿ ಬುಕ್ಕಿಂಗ್ ಮಾಡಿದರೂ ದೇಗುಲಕ್ಕೆ ಪ್ರವೇಶ ಪಡೆಯಲು ಸಾಧ್ಯವಾಗದೇ ಹೋದವರಿರೂ ಅನುಮತಿ ನೀಡಲಾಗಿದೆ.
ಹರಿವರಾಸನದ ಧಾರ್ಮಿಕ ವಿಧಿ ವಿಧಾನಗಳ ಬಳಿಕ ರಾತ್ರಿ 9 ಗಂಟೆಗೆ ಶಬರಿಮಲೆ ದೇಗುಲವು ಬಂದ್ ಆಗಲಿದೆ. ಮಾಸಿಕ ಪೂಜೆಯ ಬಳಿಕ ಶಬರಿಮಲೆ ದೇವಸ್ಥಾನವು ವಾರ್ಷಿಕ ಮಂಡಲಂ ಮಕರವಿಳಕ್ಕು ಉತ್ಸವಕ್ಕಾಗಿ ನವೆಂಬರ್ 15ರಂದು ಮತ್ತೆ ತೆರೆಯಲಿದೆ.