ಡ್ರಗ್ ಪ್ರಕರಣ ಸಂಬಂಧ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಲೇ ಎನ್ಸಿಪಿ ನಾಯಕ ನವಾಬ್ ಮಲ್ಲಿಕ್ ಸುದ್ದಿಯಾಗುತ್ತಲೇ ಇದ್ದಾರೆ. ಎನ್ಸಿಬಿ ವಿರುದ್ಧ ಇಂದು ಮತ್ತೊಮ್ಮೆ ಆಕ್ರೋಶ ಹೊರಹಾಕಿದ ನವಾಬ್, ಆರೋಪಿಯ ಅಪರಾಧವು ಸಾಬೀತಾಗದೇ ಆ ವ್ಯಕ್ತಿಯನ್ನು ಜೈಲಿನಲ್ಲಿಡೋದು ಅನ್ಯಾಯವಾಗಿದೆ. ಎರಡು ದಿನಗಳ ಹಿಂದೆ ವಿಶೇಷ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿದೆ. ನಿನ್ನೆ ಮೂವರು ಜಾಮೀನು ಪಡೆದು ಹೊರ ಬಂದಿದ್ದಾರೆ. ನನ್ನ ಪ್ರಕಾರ ಇವರಿಗೆ ಮೊದಲೇ ಜಾಮೀನು ನೀಡಬಹುದಿತ್ತು. ಆದರೆ ಎನ್ಸಿಬಿ ಯಾವಾಗಲೂ ಪ್ರಕರಣಗಳನ್ನು ಕ್ಲಿಷ್ಟಕರ ಮಾಡಿಬಿಡುತ್ತದೆ. ಕೇಸ್ನ್ನು ಕಠಿಣ ಗೊಳಿಸಲೆಂದೇ ಎನ್ಸಿಬಿ ಸುಳ್ಳು ಹೇಳುತ್ತೆ. ಈ ಮೂಲಕ ಆರೋಪಿಗಳು ಹೆಚ್ಚಿನ ದಿನಗಳ ಕಾಲ ಜೈಲಿನಲ್ಲಿಯೇ ಕೊಳೆಯುವಂತೆ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ.
ನಿನ್ನೆಯವರೆಗೂ ಮುಂಬೈ ಪೊಲೀಸರ ಬಳಿ ಭದ್ರತೆ ಕೇಳುತ್ತಿದ್ದ ಸಮೀರ್ ವಾಂಖೆಡೆ ನಿನ್ನೆ ಹೈಕೋರ್ಟ್ಗೆ ತೆರಳಿ ಮುಂಬೈ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದಿದ್ದಾರೆ. ಈ 8 ದಿನಗಳಲ್ಲಿ ಮುಂಬೈ ಪೊಲೀಸರ ಮೇಲೆ ನಂಬಿಕೆ ಕಳೆದುಕೊಳ್ಳಲು ಕಾರಣ ಏನಿರಬಹುದು..? ಬಹುಶಃ ಅನೇಕ ವಿಚಾರಗಳಿಂದ ಅವರಿಗೆ ಈ ಭಯ ಹುಟ್ಟಿರಬಹುದು ಎಂದು ವ್ಯಂಗ್ಯವಾಡಿದ್ರು.
ವಾಂಖಡೆ ಖಾಸಗಿ ಜೀವನಕ್ಕೆ ನವಾಬ್ ಧಕ್ಕೆ ಉಂಟು ಮಾಡಿದ್ದಾರೆ ಎಂಬ ಆರೋಪನ್ನೂ ಇದೇ ವೇಳೆ ತಳ್ಳಿ ಹಾಕಿದ ಅವರು, ನಾನು ಮೊದಲ ಹೆಂಡತಿಯ ಫೋಟೋ ರಿಲೀಸ್ ಮಾಡಿದ್ದೆ. ಅನೇಕರು ನನ್ನ ಬಳಿ ಈ ಫೋಟೋ ರಿಲೀಸ್ ಮಾಡಿದ್ದೇಕೆ ಎಂದು ಕೇಳಿದ್ದರು..? ರಾತ್ರಿ 2 ಗಂಟೆ ಸುಮಾರಿಗೆ ನನಗೆ ಎಲ್ಲಿಂದಲೂ ಫೋಟೋ ಸಿಕ್ಕಿತ್ತು. ಈ ಚಿತ್ರದಲ್ಲಿರುವ ವ್ಯಕ್ತಿಯೇ ಈ ಫೋಟೋವನ್ನು ಸಾರ್ವಜನಿಕಗೊಳಿಸಿ ಎಂದು ಹೇಳಿದ್ದರು ಎಂದಿದ್ದಾರೆ.
ವಾಂಖೆಡೆಯನ್ನು ಬಳಸಿ ಮಹಾರಾಷ್ಟ್ರ ಸರ್ಕಾರಕ್ಕೆ ಕಳಂಕ ತರುವ ಪ್ರಯತ್ನ ಇದಾಗಿದೆ ಎಂದು ನಾನು ಮೊದಲ ದಿನದಿಂದಲೇ ಹೇಳುತ್ತಾ ಬಂದಿದ್ದೇನೆ. ರಿಯಾ ಚಕ್ರವರ್ತಿಯಿಂದ ಆರಂಭಿಸಿ ವಾಂಖೆಡೆ ಬಾಲಿವುಡ್ ತಾರೆಯರಿಗೆ ಸಮನ್ಸ್ ನೀಡಿದ್ದು ಬಿಟ್ಟರೆ ಕಳೆದ 1 ವರ್ಷದಲ್ಲಿ ಯಾರನ್ನೂ ಬಂಧಿಸಿಲ್ಲ. ಪ್ರಕರಣದಲ್ಲಿ ಆರೋಪಿಯ ದೋಷ ಕಂಡುಬಂದರೆ ಅವರನ್ನು ಬಂಧಿಸಬೇಕು. ಆದರೆ ಇಲ್ಲಿ ಪ್ರಕರಣದ ಹೆಸರಲ್ಲಿ ಸುಲಿಗೆ ನಡೆಯುತ್ತಿದೆ. ಹಾಲಿ ಸರ್ಕಾರ ಹಾಗೂ ಬಾಲಿವುಡ್ನ್ನು ಮುಂಬೈನಿಂದ ಎತ್ತಂಗಡಿ ಮಾಡಲು ಬಿಜೆಪಿ ಮಾಡಿದ ಪ್ಲಾನ್ ಇದಾಗಿದೆ. ಬಾಲಿವುಡ್ ಗಣ್ಯರಿಗೆ ತೊಂದರೆ ಕೊಟ್ಟರೆ ಬಾಲಿವುಡ್ ಮುಂಬೈನಿಂದ ತೆರಳುತ್ತದೆ. ಬಳಿಕ ಉತ್ತರ ಪ್ರದೇಶದಲ್ಲಿ ಬಾಲಿವುಡ್ನ್ನು ತಳವೂರಿಸಿ ಹೊಸ ಫಿಲಂ ಸಿಟಿ ನಿರ್ಮಿಸಬಹುದು ಎಂಬ ಷಡ್ಯಂತ್ರವನ್ನಿಟ್ಟು ಇದನ್ನೆಲ್ಲ ಮಾಡಲಾಗ್ತಿದೆ ಎಂದಿದ್ದಾರೆ.