alex Certify ಸಾವಿನ ಮನೆ ಬಾಗಿಲು ತಟ್ಟಿ ಬಂದಿದ್ದಾನೆ ಈ ಬಾಲಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನ ಮನೆ ಬಾಗಿಲು ತಟ್ಟಿ ಬಂದಿದ್ದಾನೆ ಈ ಬಾಲಕ…!

ಆ ಸಂಜೆ ಆಸ್ಪ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ನಲ್ಲಿ ಭಾರಿ ಗುಡುಗು-ಮಿಂಚು ಸಹಿತ ಮಳೆ ಬೀಳುತ್ತಿತ್ತು. ಟೆಲೈನ್‌ ರೋಸ್‌ ಎಂಬ 14 ವರ್ಷದ ಬಾಲಕ ಆರಾಮಾಗಿ ಶಾಲೆಗೆ ತೆರಳುತ್ತಿದ್ದ. ಕ್ಷಣದಲ್ಲೇ ಆತನ ಮೈಯಲ್ಲಿ ನೂರಾರು
ವೋಲ್ಟೇಜ್ ಗಟ್ಟಲೇ ಸಾಮರ್ಥ್ಯ‌ದ ವಿದ್ಯುತ್‌ ಪ್ರವಹಿಸಿದಂತಾಯಿತು. ಆತ ಗಾಬರಿಯಿಂದ ಜ್ಞಾನ ತಪ್ಪಿ ಶಾಲೆಯ ಹತ್ತಿರವೇ ಕುಸಿದುಬಿದ್ದ!

ತಿಂಗಳಿಗೆ 5 ಸಾವಿರ ರೂ.ವರೆಗೆ ಪಿಂಚಣಿ: ಅಟಲ್ ಪೆನ್ಷನ್ ಯೋಜನೆ ಖಾತೆದಾರರಿಗೆ ಗುಡ್ ನ್ಯೂಸ್

ಅಸಲಿಗೆ ಆಗಿದ್ದೇನೆಂದರೆ, ಸಿಡಿಲೊಂದು ರೋಸ್‌ ಮೈಯನ್ನು ಹೊಕ್ಕಿ, ಮುಂದೆ ಸಾಗಿತ್ತು. ರೋಸ್‌ ನಡೆದು ಬರುತ್ತಿದ್ದ ದಾರಿಯಲ್ಲಿದ್ದ ಲೋಹದ ಕಂಬವೊಂದಕ್ಕೆ ಬಡಿದ ಸಿಡಿಲು, ಕೂಡಲೇ ಹತ್ತಿರದಲ್ಲಿದ್ದ ರೋಸ್‌ ದೇಹ ಹೊಕ್ಕು ಮುಂದಕ್ಕೆ ಸಾಗಿತ್ತು. ಆತನ ದೇಹದ ಮಾಂಸಗಳು ಕ್ಷಣಕಾಲ ಮರಗಟ್ಟಿದಂತಾಗಿ, ರಕ್ತದ ಸಂಚಾರವು ನಿಂತು, ಚಲಿಸಿದ ಕಾರಣ ಜ್ಞಾನ ತಪ್ಪಿತ್ತು. ಒಂದು ತರಹದಲ್ಲಿ ಸಾವಿನ ಮನೆಯ ಬಾಗಿಲು ತಟ್ಟಿ ವಾಪಸಾಗಿದ್ದ ಎಂತಲೇ ಹೇಳಬಹುದು.

BIG BREAKING: ಒಂದೇ ದಿನ ಮತ್ತೆ 14,348 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲೂ ಭಾರಿ ಏರಿಕೆ

ರೋಸ್‌ಗೆ ಸಿಡಿಲು ಬಡಿಯುವ ಭೀಕರ ಕ್ಷಣವನ್ನು ದೂರ ಕಾರಿನಲ್ಲಿ ಕುಳಿತುಕೊಂಡು ಆತನ ತಾಯಿ ಮಿಶೆಲ್‌ ನೋಡುತ್ತಿದ್ದರು. ಆತ ನೆಲಕ್ಕೆ ಕುಸಿದಾಗ ಓಡಿಹೋಗಿ, ಆತನನ್ನು ಸಂತೈಸಿ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ತಪಾಸಣೆ ನಡೆಸಿ, ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ರೋಸ್‌ ಆರಾಮಾಗಿ ಎದ್ದು ಕುಳಿತ.

BREAKING NEWS: ತಡರಾತ್ರಿ ಮಹತ್ವದ ನಿರ್ಧಾರ, RBI ಗವರ್ನರ್ ಶಕ್ತಿಕಾಂತ್ ದಾಸ್ ಮತ್ತೆ 3 ವರ್ಷಕ್ಕೆ ಮರು ನೇಮಕ

ಇಲ್ಲಿ, ಸಿಡಿಲು ರೋಸ್‌ನ ದೇಹದ ಮೂಲಕ ಭೂಮಿಯನ್ನು ಹೊಕ್ಕಲು ಯತ್ನಿಸಿತ್ತು. ಆದರೆ ಆತನ ಅದೃಷ್ಟ ಚೆನ್ನಾಗಿತ್ತು. ಆತ ಶಾಲೆಯ ನಿಯಮದಂತೆ ಸಮವಸ್ತ್ರದೊಂದಿಗೆ ’ರಬ್ಬರ್‌ ಶೂ ’ಗಳನ್ನು ಧರಿಸಿದ್ದ. ವಿದ್ಯುತ್‌ ಪ್ರವಹಿಸಲು ರೋಸ್‌ನ ದೇಹವು ಅವಕಾಶ ನೀಡಿದರೂ, ರಬ್ಬರ್‌ ಶೂಗಳು ತಡೆದಿದ್ದವು, ಕೂಡಲೇ ಸಿಡಿಲ ವಿದ್ಯುತ್‌ ಶಕ್ತಿ ಸಮೀಪದ ಕಂಬದ ಮೂಲಕವೇ ಭೂಮಿಯನ್ನು ಹೊಕ್ಕು ಮಾಯವಾಗಿತ್ತು.

ಈ ಬಗ್ಗೆ ವೈದ್ಯರು, ಶಾಲೆಯ ವಿಜ್ಞಾನ ವಿಷಯದ ಮುಖ್ಯಸ್ಥರು ವಿವರಿಸಿ, ಮಿಶೆಲ್‌ ಅವರಿಗೆ ಸಾಂತ್ವನ ಹೇಳಿದ್ದಾರೆ. ರಕ್ತದ ಹೆಪ್ಪುಗಟ್ಟುವಿಕೆಯ ಕಲೆಗಳು ಪಾದ ಮತ್ತು ತೋಳುಗಳ ಮೇಲೆ ಕಾಣಿಸಿಕೊಂಡರೂ, ಮೂರೇ ದಿನಗಳಲ್ಲಿ ರೋಸ್‌ ಚೇತರಿಸಿಕೊಂಡ ಬಳಿಕ ಅವು ಕೂಡ ಮಾಯವಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...