ರೈಲ್ವೇ ನೇಮಕಾತಿ ಮಂಡಳಿ ಶೀಘ್ರದಲ್ಲೇ ಆರ್ ಆರ್ ಬಿ ಗ್ರೂಪ್ ಡಿ ಪರೀಕ್ಷೆ 2021 ರ ದಿನಾಂಕಗಳನ್ನು ಪ್ರಕಟಿಸಲಿದೆ. ನೇಮಕಾತಿ ಮಂಡಳಿಯು 2019 ರಲ್ಲಿ 1.03 ಲಕ್ಷ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು.
ಈ ಹುದ್ದೆಗೆ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ರೈಲ್ವೇ ನೇಮಕಾತಿ ಮಂಡಳಿಯು, ಪ್ರವೇಶ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸುವ ಮೊದಲು, ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಪಬ್ ನಲ್ಲಿ ಮದ್ಯ ಆರ್ಡರ್ ಮಾಡಿ ಮುಖ ಸುಟ್ಟುಕೊಂಡ ಮಹಿಳೆ…! ಕೋರ್ಟ್ ಮೆಟ್ಟಿಲೇರಿದಾಕೆಗೆ ಕೊನೆಗೂ ಸಿಕ್ತು ಪರಿಹಾರ
ರೈಲ್ವೇ ನೇಮಕಾತಿ ಮಂಡಳಿಯು ಅಭ್ಯರ್ಥಿಗೆ ಪರೀಕ್ಷೆಯ ವೇಳಾಪಟ್ಟಿ ಮತ್ತು ಅದು ನಡೆಯುವ ನಗರವನ್ನು ಪರಿಶೀಲಿಸಲು ಲಿಂಕ್ ಸಕ್ರಿಯಗೊಳಿಸಿದೆ. ಅಡ್ಮಿಟ್ ಕಾರ್ಡ್ ವಿವರಗಳನ್ನು ಪರಿಶೀಲಿಸಲು ಲಿಂಕ್, ಶೀಘ್ರದಲ್ಲೇ ಬಿಡಗಡೆಯಾಗಲಿದೆ. ಪ್ರವೇಶ ಕಾರ್ಡ್ ವಿಭಾಗದಲ್ಲಿ, ಅಭ್ಯರ್ಥಿಯು ತಮ್ಮ ವಿವರಗಳನ್ನು ಪರಿಶೀಲಿಸಬಹುದು. ಅಭ್ಯರ್ಥಿಯು ಯಾವುದೇ ತಪ್ಪನ್ನು ಮಾಡಿದ್ದರೂ, ತಿದ್ದುಪಡಿಗಾಗಿ ಆರ್ ಆರ್ ಬಿಗೆ ಮಾಹಿತಿ ನೀಡಬೇಕು.
ರೈಲ್ವೆ ನೇಮಕಾತಿ ಮಂಡಳಿಯ ಗ್ರೂಪ್ ಡಿ ಪರೀಕ್ಷೆಯು, ಕಂಪ್ಯೂಟರ್ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಪರೀಕ್ಷಾ ಪ್ರಾಧಿಕಾರವು ಸಿಬಿಟಿಯನ್ನು ಏಕ ಅಥವಾ ಬಹು-ಹಂತಗಳಲ್ಲಿ ನಡೆಸುವ ಅಧಿಕಾರ ಹೊಂದಿದೆ. ಆರ್‌ಆರ್‌ಬಿ ಗ್ರೂಪ್ ಡಿ ಪರೀಕ್ಷೆಯನ್ನು ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಚಂಡೀಗಢ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ವಿವಿಧ ಕೇಂದ್ರಗಳಲ್ಲಿ ನಡೆಸಲಾಗುವುದು.
ಅನ್ನದ ಬದಲು ಈಕೆ ತಿನ್ನೋದು ಮಣ್ಣು – ಸುಣ್ಣ….!
ಕೊರೊನಾ ಪರಿಸ್ಥಿತಿಯನ್ನು ಉಲ್ಲೇಖಿಸಿ, ಆರ್ ಆರ್ ಬಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಸ್ಯಾನಿಟೈಜರ್ ಬಳಕೆ ಕಡ್ಡಾಯ. ಆರ್‌ಆರ್‌ಬಿ ಗ್ರೂಪ್ ಡಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಯು 10 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ ಉತ್ತೀರ್ಣರಾಗಿರಬೇಕು. 15 ರಿಂದ 24 ವರ್ಷ ವಯಸ್ಸಿನವರಾಗಿರಬೇಕು. ಮಂಡಳಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಸಡಿಲಿಕೆಯನ್ನು ನೀಡಿದೆ.