alex Certify BIG NEWS: ʼಕನ್ನಡಕ್ಕಾಗಿ ನಾವುʼ ಅಭಿಯಾನಕ್ಕೆ ಚಾಲನೆ; ‘ಬಾರಿಸು ಕನ್ನಡ ಡಿಂಡಿಮವ’; ವಿಮಾನ ನಿಲ್ದಾಣ, ಮೆಟ್ರೋದಲ್ಲಿಯೂ ಮೊಳಗಿದ ಕನ್ನಡ ಕಲರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ʼಕನ್ನಡಕ್ಕಾಗಿ ನಾವುʼ ಅಭಿಯಾನಕ್ಕೆ ಚಾಲನೆ; ‘ಬಾರಿಸು ಕನ್ನಡ ಡಿಂಡಿಮವ’; ವಿಮಾನ ನಿಲ್ದಾಣ, ಮೆಟ್ರೋದಲ್ಲಿಯೂ ಮೊಳಗಿದ ಕನ್ನಡ ಕಲರವ

ಬೆಂಗಳೂರು: ಕನ್ನಡ ರಾಜ್ಯೋತ್ಸವಕ್ಕೆ ಕೆಲವು ದಿನಗಳು ಬಾಕಿ ಇದ್ದರೂ ಇಂದಿನಿಂದಲೇ ಸಂಭ್ರಮಾಚರಣೆ ಆರಂಭವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಠವಾಗಿ ಆಚರಿಸಲಾಗುತ್ತಿದ್ದು, ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ʼಗೊರಕೆʼ ಸಮಸ್ಯೆಯಿಂದ ಬಳಲುತ್ತಿದ್ದೀರಾ…? ಹಾಗಾದ್ರೆ ಇಲ್ಲಿದೆ ನಿಮಗೊಂದಿಷ್ಟು ಟಿಪ್ಸ್

ವಿಧಾನಸೌಧದ ಮೆಟ್ಟುಲುಗಳ ಮೇಲೆ ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಸಾಮೂಹಿಕ ಗೀತ ಗಾಯನದ ಮೂಲಕ ಸಚಿವ ಸುನೀಲ್ ಕುಮಾರ್ ಚಾಲನೆ ನೀಡಿದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿಂತು ಸಾವಿರಾರು ಗಾಯಕರು ಕನ್ನಡದ ಪ್ರಸಿದ್ದ ಮೂರು ಹಾಡುಗಳಾದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ ಹಾಡುಗಳಿಗೆ ದ್ವನಿಯಾದರು.

ಆರ್ಯನ್‌ ಖಾನ್‌ ಡ್ರಗ್ಸ್​​ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್…! ಪ್ರಮುಖ ಸಾಕ್ಷಿ ಕೆ.ಪಿ. ಗೋಸಾವಿ ಅರೆಸ್ಟ್

ಸಾಮೂಹಿಕ ಗೀತ ಗಾಯನ ಕಾರ್ಯಕ್ರಮದಲ್ಲಿ ಸಚಿವ ಸುನೀಲ್ ಕುಮಾರ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.

ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ವಿಮಾನ ನಿಲ್ದಾಣ, ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲೂ ಸಹಸ್ರ ಕಂಠ ಗೀತ ಗಾಯನ ನಡೆಯಲಿದೆ. ಇನ್ನು ಮೆಟ್ರೋದ ಎಲ್ಲಾ ರೈಲು ನಿಲ್ದಾಣಗಳಲ್ಲಿಯೂ ಸುಗಮ ಸಂಗೀತ ಗಾಯನ ತಂಡಗಳು ಈ ಮೂರು ಗೀತೆಗಳಿಗೆ ದ್ವನಿಯಾಗಲಿದ್ದಾರೆ. ಒಟ್ಟಾರೆ ಈಬಾರಿ ಕನ್ನಡ ರಾಜ್ಯೋತ್ಸವವನ್ನು ವಿನೂತನವಾಗಿ ಕನ್ನಡಕ್ಕಾಗಿ ನಾವು ಎಂಬ ಅಭಿಯಾನದ ಮೂಲಕ ಆಚರಿಸಲಾಗುತ್ತಿದ್ದು, ನಾಡಿನಾದ್ಯಂತ 5 ಲಕ್ಷಕ್ಕೂ ಹೆಚ್ಚು ಜನರು ಸಾಮೂಹಿಕ ಗೀತ ಗಾಯನದ ಮೂಲಕ ಅಭಿಯಾನಕ್ಕೆ ಬೆಂಬಲ ನೀಡುತ್ತಿರುವುದು ವಿಶೇಷ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...