alex Certify Big News: ಡ್ರೋನ್‌ ಗಳ ಟ್ರಾಫಿಕ್‌ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಡ್ರೋನ್‌ ಗಳ ಟ್ರಾಫಿಕ್‌ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಈಗಾಗಲೇ ಡ್ರೋನ್‌ ಬಳಕೆ ನೀತಿಯನ್ನು ರಚಿಸಿ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ. ಔಷಧಗಳ ಸರಬರಾಜು, ಅಗತ್ಯ ವಸ್ತುಗಳನ್ನು ಗುಡ್ಡಗಾಡು ಪ್ರದೇಶಗಳಿಗೆ ತಲುಪಿಸಲು ವಾಣಿಜ್ಯ ರೂಪದಲ್ಲಿ ಬಳಕೆಗೂ ಷರತ್ತುಗಳ ಅನ್ವಯ ಡ್ರೋನ್‌ ಬಳಸಬಹುದಾಗಿದೆ. ಈ ನಿಟ್ಟಿನಲ್ಲಿ ಮುಂದೆ ಉಂಟಾಗಬಹುದಾದ ಡ್ರೋನ್‌ ಟ್ರಾಫಿಕ್‌ ನಿಯಂತ್ರಣಕ್ಕೂ ಅಗತ್ಯ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರವು ಪ್ರಕಟಿಸಿದೆ.

ರಾಷ್ಟ್ರೀಯ ಮಾನವರಹಿತ ವೈಮಾನಿಕ ಸಾಧನಗಳ (ಯುಎಎಸ್‌) ದಟ್ಟಣೆ ನಿರ್ವಹಣೆ ನೀತಿ ಕಾರ್ಯಸೂಚಿ ಹೆಸರಿನಲ್ಲಿ ಹಲವು ನಿಯಮಗಳನ್ನು ಸರ್ಕಾರ ಘೋಷಿಸಿದೆ.

ಕೃಷಿ, ರಕ್ಷಣಾ ಕ್ಷೇತ್ರ, ಸಾರಿಗೆ, ಗಣಿಗಾರಿಕೆ ಸಂಬಂಧಿತ ವಿವಿಧ ಕೆಲಸಗಳಿಗೆ ಡ್ರೋನ್‌ ಗಳನ್ನು ಸೂಕ್ತ ಪರವಾನಗಿ ಪಡೆದು ಬಳಸಲು ಕೇಂದ್ರ ಸರ್ಕಾರವು ಅವಕಾಶ ಕಲ್ಪಿಸಿದೆ. ಡ್ರೋನ್‌ ಹಾಗೂ ಅದರ ಉತ್ಪನ್ನಗಳಿಗೆ ಉತ್ಪಾದನೆ ಆಧರಿತ ಪ್ರೋತ್ಸಾಹ ಧನ (ಪಿಎಲ್‌ಐ) ಕೂಡ ಸರ್ಕಾರ ಹಿಂದೆಯೇ ಘೋಷಣೆ ಮಾಡಿದೆ.

ಸ್ವಚ್ಛ ಶೌಚಾಲಯ ಹೊಂದಿರುವವರಿಗೆ ಟಿವಿ, ಮೊಬೈಲ್ ʼಕೊಡುಗೆʼ

ಹೀಗಾಗಿ ಶೀಘ್ರವೇ ಆಕಾಶದಲ್ಲಿ ಹಕ್ಕಿಗಳಂತೆಯೇ ಸಾಮಾನ್ಯವಾಗಿ ಡ್ರೋನ್‌ಗಳ ಹಾರಾಟ ಕಂಡುಬರಲಿದೆ. ಆಹಾರ ಸರಬರಾಜು ಮತ್ತು ಔಷಧ ಸರಬರಾಜು ಕ್ಷೇತ್ರದಲ್ಲಿ ಡ್ರೋನ್‌ಗಳ ಹೆಚ್ಚಿನ ಬಳಕೆ ಮೊದಲ ಹಂತದಲ್ಲಿ ಕಾಣಿಸಲಿದೆ. ನಿಧಾನವಾಗಿ ಜನರು ತಮ್ಮ ಖಾಸಗಿ ಡ್ರೋನ್‌ಗಳನ್ನು ಆಕಾಶಕ್ಕೆ ಹಾರಿಸಲಿದ್ದಾರೆ. ಇನ್ನು ಐದು ವರ್ಷಗಳಲ್ಲಿ ಡ್ರೋನ್‌ ಟ್ರಾಫಿಕ್‌ ಎಂಬ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ಸರ್ಕಾರ ಟ್ರಾಫಿಕ್‌ ನಿರ್ವಹಣೆಗೆ ಮುಂದಾಗಿರುವುದು ಬಹಳ ಉತ್ತಮ ಕೆಲಸ ಎಂದು ಡ್ರೋನ್‌ ಫೆಡರೇಷನ್‌ ಆಫ್‌ ಇಂಡಿಯಾ ನಿರ್ದೇಶಕ ಸ್ಮಿತ್‌ ಷಾ ಹೇಳಿದ್ದಾರೆ.

ರಾಜ್ಯದ ಉದ್ಯಮಿಗಳಿಗೆ ಮತ್ತೊಂದು ಶುಭ ಸುದ್ದಿ

ನಾಗರಿಕ ವಿಮಾನಯಾನ ಸಚಿವಾಲಯವು ಈ ಡ್ರೋನ್‌ಗಳ ಹಾರಾಟ ಪರವಾನಗಿ ಸೇರಿದಂತೆ ಸಂಪೂರ್ಣ ನಿಗಾದ ಜವಾಬ್ದಾರಿಯನ್ನು ಹೊತ್ತಿದೆ.

ಇಸ್ರೇಲ್‌ ಹಾಗೂ ಚೀನಾ ನಿರ್ಮಿತ ಡ್ರೋನ್‌ಗಳು ಈಗಾಗಲೇ ವಿಶ್ವದ ಬಹುತೇಕ ರಾಷ್ಟ್ರಗಳ ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ಮೊದಲು ಆಟಿಕೆಗಳ ರೂಪದಲ್ಲಿ ಕಾಣಲಾಗುತ್ತಿದ್ದ ಡ್ರೋನ್‌ಗಳ ಬಳಕೆಯು ಕೊರೊನಾ ಹಾವಳಿ ಸಮಯದಲ್ಲಿ ಗಂಭೀರವಾಗಿ ಜನರಿಗೆ ಮನದಟ್ಟಾಗಿದೆ, ಒಂದು ಪ್ರದೇಶ ಪೂರ್ತಿ ಸ್ಯಾನಿಟೈಸರ್‌ ಸ್ಪ್ರೇ ಮಾಡಲು ಡ್ರೋನ್‌ಗಳನ್ನು ಜಗತ್ತಿನ ವಿವಿಧ ನಗರಗಳಲ್ಲಿ ಬಳಸಲಾಗಿದೆ.

ಅಲ್ಲದೇ ಔಷಧಗಳನ್ನು ಕುಗ್ರಾಮಗಳಿಗೆ ತಲುಪಿಸಿ, ಬಳಿಕ ಕುಳಿತಲ್ಲಿಗೇ ಡ್ರೋನ್‌ಗಳನ್ನು ನಿಯಂತ್ರಕರು ವಾಪಸ್‌ ಕರೆಸಿಕೊಂಡ ಅನೇಕ ನಿದರ್ಶನಗಳನ್ನು ಕಾಣಬಹುದಾಗಿದೆ. ವೈಮಾನಿಕ ಸಾಧನಗಳ ಮೂಲಕ ಸಾರಿಗೆಯೇ ಭವಿಷ್ಯದ ದೊಡ್ಡ ತಾಂತ್ರಿಕ ಕ್ರಾಂತಿ ಎನಿಸುವುದರಲ್ಲಿ ಸಂಶಯವೇ ಇಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...