ಸದಾ ಒಂದಿಲ್ಲೊಂದು ಕ್ರಿಯಾಶೀಲ ಸಂದೇಶಗಳನ್ನು ನೀಡುತ್ತಾ ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟರ್‌ನಲ್ಲಿ ಭಾರಿ ಸಂಖ್ಯೆಯ ಫಾಲೋವರ್ಸ್‌ಗಳನ್ನು ಹೊಂದಿರುವ ಮುಂಬೈ ಪೊಲೀಸರು ಈ ಬಾರಿ ಸೈಬರ್ ಸೆಕ್ಯೂರಿಟಿ ಬಗ್ಗೆ ಕ್ರಿಯಾಶೀಲವಾಗಿ ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಕಾಳಜಿಗೆ ಬಾಲಿವುಡ್ ಸಿನಿಮಾಗಳ ಜನಪ್ರಿಯ ಡೈಲಾಗ್‌ಗಳು, ಮುಂಬೈ ನಗರದ ಜನಪ್ರಿಯ ಪ್ರದೇಶ-ಸ್ಥಳಗಳ ಹೆಸರುಗಳನ್ನು ಬಳಸಿಕೊಂಡು ಆಗಾಗ್ಗೆ ಪೊಲೀಸರು ಪೋಸ್ಟ್ ಮಾಡಿ ಗಮನ ಸೆಳೆಯುತ್ತಿರುತ್ತಾರೆ. ಮನುಷ್ಯ ಜೀವನಕ್ಕೆ ಬೇಕಿರುವುದು ಒಂದು ಸರಳವಾದ ಗುರಿ ಮಾತ್ರ. ಸಂತೋಷವಾಗಿರಿ ಮತ್ತು ಸೈಬರ್ ಭದ್ರತೆಯಿಂದಿರಿ ಎಂದು ಪೋಸ್ಟ್ ಜತೆಗೆ ಜನರಿಗೆ ಕಿವಿಮಾತು ಕೂಡ ಹೇಳಿದ್ದಾರೆ.
ದಾರಿ ತಪ್ಪಿದರೂ ರಕ್ಷಣಾ ತಂಡದ ಕರೆ ಸ್ವೀಕರಿಸಿರಲಿಲ್ಲ ಭೂಪ…! ನಗು ತರಿಸುತ್ತೆ ಇದರ ಹಿಂದಿನ ಕಾರಣ
ಬಹಳ ಉಪಯುಕ್ತ ಮತ್ತು ಸರಳ ಸಂದೇಶದ ನಾಲ್ಕು ಸಲಹೆಗಳನ್ನು ಈ ಬಾರಿ ಪೊಲೀಸರು ಜನರಿಗೆ ಕೊಟ್ಟಿದ್ದಾರೆ. ’ ಆ್ಯಂಟಿವೈರಸ್ ಎನ್ನುವುದು ಎಲ್ಲವನ್ನೂ ಮಾಯುವಂತೆ ಮಾಡುತ್ತದೆ ’ ಎನ್ನುವುದು ಮೊದಲ ಕಿವಿಮಾತಾಗಿದೆ. ಎರಡನೇಯದು, ’ ಇಂದು ಮತ್ತು ಭವಿಷ್ಯಕ್ಕಾಗಿ ಸದೃಢವಾದ ಪಾಸ್ ವರ್ಡ್‌ಗಳನ್ನು ಇರಿಸಿಕೊಳ್ಳಿರಿ’ ಎನ್ನುವುದಾಗಿದೆ.
ಸ್ವಚ್ಛ ಶೌಚಾಲಯ ಹೊಂದಿರುವವರಿಗೆ ಟಿವಿ, ಮೊಬೈಲ್ ʼಕೊಡುಗೆʼ
ಮೂರನೇಯದು, ಅನಾಮಧೇಯ-ಅಪರಿಚಿತ ಆನ್‌ಲೈನ್ ಮನವಿಯನ್ನು ಸ್ವೀಕರಿಸಲು ಜೀವನ ಬಹಳ ಸಣ್ಣದು. ನಾಲ್ಕನೇಯದು, ಸರಳ ಮತ್ತು ನೆಮ್ಮದಿಯ ಬದುಕಿಗಾಗಿ ನಿಮ್ಮ ಸ್ಕ್ರೀನ್ ಟೈಮ್ (ಕಂಪ್ಯೂಟರ್ ಹಾಗೂ ಮೊಬೈಲ್ ವೀಕ್ಷಣೆ ಸಮಯ) ಇಂತಿಷ್ಟೇ ಎಂದು ನಿಗದಿಪಡಿಸಿಕೊಳ್ಳಿರಿ. ಕುಟುಂಬಸ್ಥರೊಂದಿಗೆ ಚೆನ್ನಾಗಿ ಬೆರೆಯಿರಿ ಎನ್ನುವುದಾಗಿದೆ.
ಒಟ್ಟಿನಲ್ಲಿ ಸಮಾಜಕ್ಕೆ ತಮ್ಮ ಹಿತೋಪದೇಶಗಳನ್ನು ಈಗಿನ ಟ್ರೆಂಡ್ ಮೂಲಕವೇ ನೀಡಿ, ಅವರನ್ನು ಸಂತಸದಿಂದ ಜವಾಬ್ದಾರಿಯುತವಾಗಿ ವರ್ತಿಸಲು ಎಚ್ಚರಿಸುತ್ತಿರುವ ಪೊಲೀಸರ ನಡೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.