ಭಾನುವಾರ ನಡೆದ ಐಸಿಸಿ ವರ್ಲ್ಡ್ ಕಪ್ ಟಿ 20 ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಪಾಕಿಸ್ತಾನದ ಮುಂದೆ ಸೋತಿರುವ ಘಟನೆಯನ್ನು ಮರೆಯಲು ಟೀಂ ಇಂಡಿಯಾ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಪಂದ್ಯ ಮುಗಿದು ಮೂರು ದಿನಗಳೇ ಕಳೆದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಪರ – ವಿರೋಧದ ಚರ್ಚೆ ಮುಂದುವರಿದಿದೆ.
10 ವಿಕೆಟ್ಗಳ ಅಂತರದಲ್ಲಿ ಟೀಂ ಇಂಡಿಯಾ ಸೋಲನ್ನು ಕಂಡ ಬಳಿಕ ಟೀಂ ಇಂಡಿಯಾದ ಸಾಕಷ್ಟು ಅಭಿಮಾನಿಗಳು ಮಹಮ್ಮದ್ ಶಮಿ ಆಟದ ಬಗ್ಗೆ ಅಸಮಾಧಾನ ಹೊರಹಾಕ್ತಿದ್ದಾರೆ. ಶಮಿ ವಿರುದ್ಧ ನಡೆಯುತ್ತಿರುವ ಟೀಕೆಗಳು ಸೋಶಿಯಲ್ ಮೀಡಿಯಾದ ಹೊಸ ಟ್ರೆಂಡ್ ಎಂಬಂತೆ ಆಗಿಬಿಟ್ಟಿದೆ. ಶಮಿ ಬೆಂಬಲಕ್ಕೆ ಟೀಂ ಇಂಡಿಯಾದ ಆಟಗಾರರು ನಿಂತಿರುವ ಬೆನ್ನಲ್ಲೇ ಪಾಕ್ ಆಟಗಾರರೂ ಸಹ ಶಮಿಗೆ ಬೆಂಬಲ ಸೂಚಿಸಿದ್ದಾರೆ.
BIG NEWS: ಧಮ್ ಇದ್ರೆ ಒಂದೇ ವೇದಿಕೆ ಮೇಲೆ ಚರ್ಚೆಗೆ ಬನ್ನಿ; ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಬಹಿರಂಗ ಸವಾಲು
ಪಾಕಿಸ್ತಾನ ತಂಡದ ಆರಂಭಿಕ ಆಟಗಾರ, ಮಹಮ್ಮದ್ ರಿಜ್ವಾನ್, ಶಮಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಶಮಿ ಹೇಟರ್ಸ್ಗಳಿಗೆ ನಾಟುವಂತೆ ರಿಜ್ವಾನ್ ಸೋಶಿಯಲ್ ಮೀಡಿಯಾದಲ್ಲಿ ಸುಂದರ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ. ಕ್ರಿಕೆಟ್ ಆಟವು ಜನರನ್ನು ಒಂದು ಮಾಡಬೇಕೇ ಹೊರತು ಒಡೆಯಬಾರದು ಎಂದು ರಿಜ್ವಾನ್ ಹೇಳಿದ್ದಾರೆ.
ದೇಶಕ್ಕಾಗಿ ಹಾಗೂ ತನ್ನ ದೇಶದ ಜನತೆಗಾಗಿ ಒಬ್ಬ ಆಟಗಾರನಿಗೆ ಎದುರಾಗುವ ಒತ್ತಡ, ಹೋರಾಟ ಹಾಗೂ ತ್ಯಾಗವನ್ನು ತುಲನೆ ಮಾಡಲು ಸಾಧ್ಯವಿಲ್ಲ. ಮಹಮ್ಮದ್ ಶಮಿ ಒಬ್ಬ ಸ್ಟಾರ್ ಹಾಗೂ ವಿಶ್ವ ಕ್ರಿಕೆಟ್ ಕಂಡ ಉತ್ತಮ ಬೌಲರ್ ಕೂಡ. ನಿಮ್ಮ ಆಟಗಾರರನ್ನು ಗೌರವಿಸಿ. ಆಟವು ಜನರನ್ನು ಒಂದು ಮಾಡಬೇಕೇ ಹೊರತು ಬೇರೆ ಮಾಡಬಾರದು ಎಂದು ರಿಜ್ವಾನ್ ಟ್ವೀಟಾಯಿಸಿದ್ದಾರೆ.
ಪಂದ್ಯದಲ್ಲಿ 3.5 ಓವರ್ನಲ್ಲಿ 43 ರನ್ ಕೊಟ್ಟಿದ್ದ ಶಮಿ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನ ವ್ಯಕ್ತವಾಗುತ್ತಿದ್ದಂತೆಯೇ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಸಾಕಷ್ಟು ಆಟಗಾರರು ಶಮಿ ಬೆನ್ನಿಗೆ ನಿಂತಿದ್ದರು.