
ತಮ್ಮ ನಿದೇರ್ಶನದ ’ಅಂತಿಮ್’ ಚಿತ್ರದ ಶೂಟಿಂಗ್ ನ ಕೊನೆಯ ಭಾಗದ ವೇಳೆ ಮಹೇಶ್ ಮಾಂಜ್ರೇಕರ್ ಗೆ ಕ್ಯಾನ್ಸರ್ ಇರುವ ವಿಚಾರ ತಿಳಿದು ಬಂದಿದೆ. ಇದರ ನಡುವೆಯೂ ಶೂಟಿಂಗ್ ಮುಂದುವರೆಸಿದ್ದಾರೆ ಮಾಂಜ್ರೇಕರ್.
ತಮ್ಮ ಚಿತ್ರದ ಟ್ರೇಲರ್ ಬಿಡುಗಡೆಗೆ ಆಗಮಿಸಿದ ಮಹೇಶ್ ಬಗ್ಗೆ ಚಿತ್ರ ನಟರಾದ ಸಲ್ಮಾನ್ ಖಾನ್ ಹಾಗೂ ಆಯುಶ್ ಶರ್ಮಾ ಪ್ರಮುಖ ಆಕರ್ಷಣೆಯಾಗಿದ್ದರು. ಈ ವೇಳೆ ಮಾತನಾಡಿದ ಸಲ್ಮಾನ್ ಖಾನ್, “ಅವರು ನಮಗೆ ಮುಂಚೆಯೇ ತಿಳಿಸಿರಲಿಲ್ಲ. ಶೂಟಿಂಗ್ನ ಭಾಗವನ್ನು ಮುಗಿಸಿದ ಕೂಡಲೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ” ಎಂದಿದ್ದಾರೆ.
ಬಿಟಿಎಸ್ ಚಾಲಕರಾಗಿದ್ದ ಸ್ನೇಹಿತನಿಗೆ ʼದಾದಾ ಸಾಹೇಬ್ ಫಾಲ್ಕೆʼ ಪ್ರಶಸ್ತಿ ಅರ್ಪಿಸಿದ ಸೂಪರ್ ಸ್ಟಾರ್
ಕ್ಯಾನ್ಸರ್ ವಿರುದ್ಧದ ತಮ್ಮ ಹೋರಾಟದ ನಡುವೆಯೇ ಶೂಟಿಂಗ್ ಮಾಡಿದ ಕುರಿತು ಮಾತನಾಡಿದ ಮಾಂಜ್ರೇಕರ್, “ನಾನು 35 ಕೆಜಿ ಕಡಿಮೆಯಾಗಿದ್ದೇನೆ. ಅಂತಿಮ್ನ ಕೊನೆಯ ಹಂತದ ಚಿತ್ರೀಕರಣದ ಸಂದರ್ಭದಲ್ಲಿ ನನಗೆ ಕ್ಯಾನ್ಸರ್ ಇರುವುದು ಕಂಡು ಬಂದಿದೆ. ಆದರೆ ಇಂದು ನಾನು ಕ್ಯಾನ್ಸರ್ ಮುಕ್ತನಾಗಿದ್ದೇನೆ,” ಎಂದಿದ್ದಾರೆ.
BIG NEWS: ಕನ್ನಡದ ‘ಅಕ್ಷಿ’ಗೆ ಅತ್ಯುತ್ತಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ರಜನಿಕಾಂತ್ ಗೆ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ
“ಕಿಮೋಥೆರಪಿ ನನ್ನ ಮೇಲೆ ಪ್ರಭಾವ ಬೀರದೇ ಇದ್ದಿದ್ದು ನನ್ನ ಅದೃಷ್ಟ. ಶೂಟಿಂಗ್ ಸಂದರ್ಭದಲ್ಲಿ ನಾನು ಕಿಮೋಥೆರಪಿಗೆ ಒಳಗಾಗಿದ್ದೆ. ಬಳಿಕ ನಾನು ಶಸ್ತ್ರ ಚಿಕಿತ್ಸೆಗೆ ಒಳಗಾದೆ. ಕೆಲಸದ ಮೇಲಿನ ಬದ್ಧತೆ ನನ್ನನ್ನು ಹಾಗೆ ಸೆಳೆಯಿತು. ನನಗೆ ಕ್ಯಾನ್ಸರ್ ಇದೆ ಎಂದು ಅರಿತ ಮೇಲೆ ನನಗೆ ಶಾಕ್ ಆಗಲಿಲ್ಲ. ಬಹಳಷ್ಟು ಮಂದಿಗೆ ಕ್ಯಾನ್ಸರ್ ಇದ್ದು, ಹೋರಾಟ ಮಾಡಿ ಬದುಕುಳಿದು ಬಂದ ವಿಚಾರ ನನಗೆ ಗೊತ್ತಿದೆ,” ಎಂದಿದ್ದಾರೆ ಮಹೇಶ್.