ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಹಿಂಪಡೆದ ಬಳಿಕ ಇದೇ ಮೊದಲ ಬಾರಿಗೆ ಗೃಹ ಸಚಿವ ಅಮಿತ್ ಶಾ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಶೇರ್ -ಇ- ಕಾಶ್ಮೀರ್ ಅಂತಾರಾಷ್ಟ್ರೀಯ ಕನ್ವೆನ್ಶನ್ ಕೇಂದ್ರದಲ್ಲಿ ಭಾಷಣ ಮಾಡುವ ಮುನ್ನ ಬುಲೆಟ್ ಪ್ರೂಫ್ ಶೀಲ್ಡ್ನ್ನು ತೆಗೆಯುವ ಮೂಲಕ ಅಮಿತ್ ಶಾ ಎಲ್ಲರ ಗಮನ ಸೆಳೆದಿದ್ದಾರೆ.
ನನ್ನನ್ನು ನಿಂದಿಸಲಾಯಿತು, ಖಂಡಿಸಲಾಯಿತು, ಇಂದು ನಿಮ್ಮೆಲ್ಲರೊಂದಿಗೆ ನಾನು ಪ್ರಾಮಾಣಿಕವಾಗಿ ಮಾತನಾಡಲು ಇಚ್ಛಿಸುತ್ತೇನೆ. ಇದೇ ಕಾರಣಕ್ಕೆ ನಾನು ಬುಲೆಟ್ ಪ್ರೂಫ್ ಶೀಲ್ಡ್ನ್ನು ತೆಗೆದು ಹಾಕಿದ್ದೇನೆ. ಫಾರೂಕ್ ಸಾಬ್ ನನಗೆ ಪಾಕಿಸ್ತಾನದವರ ಜೊತೆ ಮಾತನಾಡಿ ಎಂದು ಸಲಹೆ ನೀಡಿದ್ದರು. ಆದರೆ ನಾನು ಕಣಿವೆ ರಾಜ್ಯದ ಜನರು ಹಾಗೂ ಯುವಕರೊಂದಿಗೆ ಮಾತನಾಡಲು ಬಯಸುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ. ಜಮ್ಮು – ಕಾಶ್ಮೀರದಲ್ಲಿ ಗೃಹ ಸಚಿವ ಅಮಿತ್ ಶಾರ ಮೂರನೇ ದಿನದ ಪ್ರವಾಸ ಇದಾಗಿದೆ.
ಇನ್ನು ಇತ್ತ ಪ್ರಧಾನಿ ಮೋದಿ ಉತ್ತರ ಪ್ರದೇಶದಲ್ಲಿದ್ದು ಆಯುಶ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟಕ್ಚರ್ ಮಿಷನ್ ಅನಾವರಣಗೊಳಿಸಿದ್ದಾರೆ. ಇದರ ಜೊತೆಯಲ್ಲಿ ಉತ್ತರ ಪ್ರದೇಶದಲ್ಲಿ 9 ಮೆಡಿಕಲ್ ಕಾಲೇಜುಗಳ ಉದ್ಘಾಟನೆಯನ್ನೂ ಮಾಡಿದ್ದಾರೆ.