ಭಾರೀ ಗಾತ್ರದ ಹಾವೊಂದು ಮಳೆಕಾಡಿನ ಮರದ ನಡುವೆ ಸಿಕ್ಕಿಕೊಂಡಿದ್ದು, ಅದನ್ನು ಕ್ರೇನ್ ಬಳಸಿ ಹೊರತೆಗೆಯಲಾಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡೊಮಿನಿಕಾದಲ್ಲಿ ಈ ಘಟನೆ ಜರುಗಿದೆ. ವಿಡಿಯೋದಲ್ಲಿ ತೋರಲಾದ ಹಾವಿನ ತಳಿ ಯಾವುದೆಂದು ಸ್ಪಷ್ಟವಾಗಿಲ್ಲ. ಆದರೆ ಕೆರಿಬ್ಬಿಯನ್ ದ್ವೀಪದಲ್ಲಿ ಕಂಡುಬರುವ ಬೋವಾ ಕಾನ್‌ಸ್ಟ್ರಿಕ್ಟರ್ ತಳಿಯು 13 ಅಡಿಯಷ್ಟು ಉದ್ದ ಬೆಳೆಯಬಲ್ಲದಾಗಿದೆ.
ಟಿಕ್‌ಟಾಕ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು 79 ದಶಲಕ್ಷ ಮಂದಿ ವೀಕ್ಷಿಸಿದ್ದಾರೆ. ಇದು ಬಹುಶಃ ಜಗತ್ತಿನ ಅತಿ ದೊಡ್ಡ ಹಾವಾಗಿದೆ ಎಂದು ಬಹಳಷ್ಟು ವೀಕ್ಷಕರು ಅಂದಾಜಿಸಿದ್ದಾರೆ.