ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ 1861 ರಲ್ಲಿ ದೆಹಲಿ ಪೊಲೀಸರು ಸಲ್ಲಿಸಿದ್ದ ಎಫ್ಐಆರ್ ಪ್ರತಿ…! 22-10-2021 4:02PM IST / No Comments / Posted In: Latest News, India, Live News ದೆಹಲಿ ಪೊಲೀಸರು 1861ರಲ್ಲಿ ಸಲ್ಲಿಸಿದ್ದ ಪ್ರಾಥಮಿಕ ತನಿಖಾ ವರದಿ(ಎಫ್ಐಆರ್) ಪ್ರತಿಯೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ ಇದು ದೆಹಲಿ ಪೊಲೀಸರಿಂದ ಮೊದಲ ಬಾರಿಗೆ ಸಲ್ಲಿಕೆಯಾದ ಎಫ್ಐಆರ್ ಆಗಿದ್ದು, ಉರ್ದು ಭಾಷೆಯಲ್ಲಿದೆ. ಥಿಂಕ್ ಟ್ಯಾಂಕ್ ಹಾಗೂ ಸ್ಟ್ರಾಟೆಜಿಕ್ ಕನ್ಸಲ್ಟೆನ್ಸಿ ಡೀಪ್ ಸ್ಟ್ರಾಟ್ ಚೇರ್ ಮನ್ ಯಶೋವರ್ಧನ್ ಆಜಾದ್ ಟ್ವಿಟರ್ನಲ್ಲಿ ಈ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋವನ್ನು 2017ರಲ್ಲಿ ದೆಹಲಿ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದರು. ದೆಹಲಿ ಪೊಲೀಸ್ ಇಲಾಖೆಯ ಇತಿಹಾಸದ ಅಪರೂಪದ ಕ್ಷಣಗಳು ಎಂದು ದೆಹಲಿ ಪೊಲೀಸರು ವರ್ಷಗಳ ಹಿಂದೆ ಈ ಫೋಟೋಗೆ ಶೀರ್ಷಿಕೆ ನೀಡಿದ್ದರು, 1861 ರಲ್ಲಿ ದೆಹಲಿ ಪೋಲೀಸರು ದಾಖಲಿಸಿರುವ ಎಫ್ಐಆರ್ ಪ್ರತಿ ಇದಾಗಿದೆ. ಬೆಲೆಕಟ್ಟಲಾಗದ ಹಾಗೂ ಅಮೂಲ್ಯ ಮಾಹಿತಿ ಇದಾಗಿದೆ ಎಂದು ಆಜಾದ್ ಟ್ವಿಟರ್ನಲ್ಲಿ ಶೀರ್ಷಿಕೆ ನೀಡಿದ್ದಾರೆ. ದಿನಾಂಕ 18-10-1861ರಲ್ಲಿ ಪಾತ್ರೆಗಳು ಹಾಗೂ ಹುಕ್ಕಾ ಕಳ್ಳತನ ಪ್ರಕರಣ ಸಂಬಂಧ ದೆಹಲಿ ಪೊಲೀಸರು ದಾಖಲಿಸಿದ ಮೊಟ್ಟ ಮೊದಲ ಎಫ್ಐಆರ್ ಪ್ರತಿ ಎಂದು ಈ ಫೋಟೋದ ಮೇಲೆ ಬರೆಯಲಾಗಿದೆ. 1861 record of first FIR filed by Delhi police. A priceless piece and a treasured information @CPDelhi pic.twitter.com/m0MRp6Lcpu — Yashovardhan Jha Azad (@yashoazad) October 22, 2021