alex Certify ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಲ್ಲೆಗೆ ವಿರೋಧ; ಕಾತ್ಯಾಯಿನಿ ಪೂಜೆ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಲ್ಲೆಗೆ ವಿರೋಧ; ಕಾತ್ಯಾಯಿನಿ ಪೂಜೆ ರದ್ದು

Century-old Katyayini Puja in Bangladesh's Magura suspended in protest against attacks on Hindus - World News

ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಖಂಡಿಸಿ, ಅಲ್ಲಿನ ಮಗುರಾ ಜಿಲ್ಲೆಯಲ್ಲಿ ಶತಮಾನಕ್ಕೂ ಹಳೆಯ ಸಂಪ್ರದಾಯವಾದ ಕಾತ್ಯಾಯಿನಿ ಪೂಜಾ ಸಂಪ್ರದಾಯವನ್ನು ಈ ವರ್ಷ ಮಾಡದೇ ಇರಲು ನಿರ್ಧರಿಸಲಾಗಿದೆ.

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜಾ ಪೆಂಡಾಲ್‌ಗಳ ಮೇಲೆ ಮತಾಂಧರು ನಡೆಸಿದ ಇತ್ತೀಚಿನ ದಾಳಿಗಳಿಂದ ಹಲವರು ಮೃತಪಟ್ಟಿದ್ದಾರೆ.

ಬಿಜೆಪಿ ಸಂಸದರ ಕೆಂಗಣ್ಣಿಗೆ ಗುರಿಯಾದ ಅಮೀರ್‌ ಖಾನ್‌ ಜಾಹೀರಾತು

ಇದನ್ನು ವಿರೋಧಿಸಿ ಮಗುರಾ ನಗರದ ಕಾತ್ಯಾಯಿನಿ ಪೂಜಾ ಮಂಟಪ ಸಮಿತಿಯು ಅಕ್ಟೋಬರ್‌ 18ರಂದು ಸೇರಿದ ಸಭೆಯಲ್ಲಿ ಈ ವರ್ಷದ ಪೂಜೆಯನ್ನು ಮಾಡದೇ ಇರಲು ನಿರ್ಧರಿಸಿದೆ. ಇದೇ ವೇಳೆ ಬಾಂಗ್ಲಾದೇಶ ಪೂಜಾ ಉದ್ಜಪನ್ ಪರಿಷತ್ತಿನ ಸದಸ್ಯರೂ ಸಹ ಮಗುರಾ ಜಿಲ್ಲೆಯ ಈ ಸಭೆಯಲ್ಲಿ ಭಾಗಿಯಾಗಿದ್ದರು.

“ದೇಶದಲ್ಲಿ ನೆಲೆಸಿರುವ ಪ್ರಸಕ್ತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲೆಯಲ್ಲಿ ಎಲ್ಲೂ ಕಾತ್ಯಾಯಿನಿ ಪೂಜೆ ಮಾಡದೇ ಇರಲು ನಾವು ನಿರ್ಧರಿಸಿದ್ದೇವೆ. ಈ ಬಾರಿ ಈ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಲಾಯಿತು,” ಎಂದು ಬಾಂಗ್ಲಾದೇಶ ಪೂಜಾ ಉದ್ಜಪನ್ ಪರಿಷತ್ತಿನ ಮಗುರಾ ಜಿಲ್ಲಾ ಶಾಖೆಯ ಮಹಾ ಕಾರ್ಯದರ್ಶಿ ಬಸುದೇಬ್ ಕುಂಡು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...