21 ವರ್ಷದ ಪತ್ನಿಯ ಬಳಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿದ 27 ವರ್ಷದ ಪತಿಯು ಆಕೆ ಒಪ್ಪದ ಕಾರಣಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಆಕೆಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ.
ಸುಖ ನಿದ್ರೆಗಾಗಿ ಮಗುವಿನ ಪ್ರಾಣ ಪಣಕ್ಕಿಟ್ಟ ತಾಯಿ..!
ಪ್ರಕರಣ ಸಂಬಂಧ ನಾಗ್ಪುರದ ನಂದನವನ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ದೂರಿನಲ್ಲಿ ಆರೋಪಿಯು ತನಗೆ ಮೊದಲನೇ ಮದುವೆ ಆಗಿರುವ ಬಗ್ಗೆಯೂ ಪತ್ನಿಯ ಬಳಿ ವಿಷಯ ಮುಚ್ಚಿಟ್ಟಿದ್ದ ಎಂದು ಉಲ್ಲೇಖಿಸಲಾಗಿದೆ.
ಕೊಬ್ಬರಿ ಬೆಳೆಗಾರರಿಗೆ ಬಂಪರ್
ದೂರಿನಲ್ಲಿ ಇರುವ ಮಾಹಿತಿಯ ಪ್ರಕಾರ, ನಂದನವನದ ನಿವಾಸಿಯಾದ ಮಹಿಳೆಯು ಗೋಂಡಿಯಾ ನಿವಾಸಿಯಾದ ಆರೋಪಿಯನ್ನು ಮೊದಲ ಬಾರಿಗೆ ಭಿಲಾಯಿ ಎಂಬಲ್ಲಿ ಜನವರಿ ತಿಂಗಳಲ್ಲಿ ಭೇಟಿಯಾಗಿದ್ದರು. ದರ್ಗ್ನಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಆಕೆಗೆ ಆರೋಪಿಯು ತನ್ನ ಮೊದಲನೇ ಮದುವೆಯ ವಿಚಾರವನ್ನು ಹೇಳಿರಲಿಲ್ಲ. ಮೊದಲ ಮದುವೆಯಿಂದ ಆರೋಪಿಯು ಓರ್ವ ಪುತ್ರಿಯನ್ನೂ ಹೊಂದಿದ್ದನು. ಈ ಬಗ್ಗೆ ಎರಡನೆ ಪತ್ನಿಯು ಪ್ರಶ್ನೆ ಮಾಡಲು ಆರಂಭಿಸಿದ ಬಳಿಕ ಆಕೆಯ ಮೇಲೆ ಹಲ್ಲೆ ನಡೆಸಲು ಅರಂಭಿಸಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಭಿಲಾಯಿಗೆ ಮರಳಿದ ಬಳಿಕ ಎರಡನೇ ಪತ್ನಿಗೆ ಇನ್ನಿಲ್ಲದ ಹಿಂಸೆ ನೀಡಿದ್ದ ಆರೋಪಿಯು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ ಎನ್ನಲಾಗಿದೆ. ಅಲ್ಲದೇ ಆಕೆಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಪತಿಯ ಕಾಟದಿಂದ ಬೇಸತ್ತ ಪತ್ನಿಯು ನಂದನವನ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.