ಚೀನಾದಲ್ಲಿ ಜನ್ಮ ತಾಳಿದ ಕೊರೊನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ವಿಚಾರ ಮಾಸುವ ಮುನ್ನವೇ ಡ್ರ್ಯಾಗನ್ ರಾಷ್ಟ್ರದಲ್ಲಿ ಮತ್ತೊಮ್ಮೆ ಕೋವಿಡ್ ಸೋಂಕು ಸದ್ದು ಮಾಡುತ್ತಿದೆ. ಹೌದು..! ಚೀನಾದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಪರಿಣಾಮವಾಗಿ ವೀನಾ 100ಕ್ಕೂ ಅಧಿಕ ವಿಮಾನಗಳನ್ನು ರದ್ದು ಮಾಡಿದೆ. ಶಾಲೆಗಳನ್ನು ಬಂದ್ ಮಾಡಲಾಗಿದ್ದು ಕೊರೊನಾ ಪರೀಕ್ಷೆಯ ವೇಗವನ್ನು ಹೆಚ್ಚಿಸಲಾಗಿದೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ’ಟೆಸ್ಟ್ ಡ್ರೈವ್ ’ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಡಿಟೇಲ್ಸ್
ಇತರೆ ದೇಶಗಳು ಕೊರೊನಾ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸರಾಗಗೊಳಿಸಲು ಯತ್ನಿಸುತ್ತಿದ್ದರೂ ಬೀಜಿಂಗ್ನಲ್ಲಿ ಮಾತ್ರ ಕಠಿಣ ಲಾಕ್ಡೌನ್ ಹಾಗೂ ಗಡಿಗಳನ್ನು ಬಂದ್ ಮಾಡಿದ ಪರಿಣಾಮವಾಗಿ ಶೂನ್ಯ ಕೋವಿಡ್ ಪ್ರಕರಣ ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಚೀನಾದಲ್ಲಿ ಸತತ ಐದನೇ ದಿನವು ಹೊಸ ಪ್ರಕರಣವು ದಾಖಲಾಗಿದ್ದು ಹೆಚ್ಚಾಗಿ ಉತ್ತರ ಹಾಗೂ ವಾಯುವ್ಯ ಪ್ರದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಹೆಚ್ಚಾಗಿ ಪ್ರವಾಸದಲ್ಲಿ ಭಾಗಿಯಾಗಿದ್ದ ವೃದ್ಧರನ್ನೇ ಈ ಬಾರಿ ಸೋಂಕು ಟಾರ್ಗೆಟ್ ಮಾಡಿದೆ.
ನೋಕಿಯಾ ಹೊಸ ಫೋನ್ ಜೊತೆ ಸಿಗ್ತಿದೆ ಜಿಯೋದ ಈ ಆಫರ್
ಹೀಗಾಗಿ ಸ್ಥಳೀಯ ಸರ್ಕಾರಗಳು ಕೊರೊನಾ ಪರೀಕ್ಷೆಯ ಸಂಖ್ಯೆಗೆ ಚುರುಕುಮುಟ್ಟಿಸಿದೆ. ಪ್ರವಾಸಿ ತಾಣಗಳು, ಶಾಲೆಗಳು ಹಾಗೂ ಮನರಂಜನಾ ಸ್ಥಳಗಳನ್ನು ಬಂದ್ ಮಾಡಲಾಗಿದೆ. ವಿಮಾನ ನಿಲ್ದಾಣಗಳಲ್ಲಿ 100ಕ್ಕೂ ಅಧಿಕ ವಿಮಾನಗಳ ಯಾನವನ್ನು ಸ್ಥಗಿತಗೊಳಿಸಲಾಗಿದೆ.