ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರಿಗೊಂದು ಮಹತ್ವದ ಸುದ್ದಿಯೊಂದಿದೆ. ಅಂಚೆ ಕಚೇರಿ, ಹೊಸ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸೇವೆಯನ್ನು ಆರಂಭಿಸಿದೆ. ಗ್ರಾಹಕರು ಫೋನ್ ಮೂಲಕ ಈ ಸೌಲಭ್ಯ ಪಡೆಯಬಹುದು.
ಈ ಸೇವೆಯ ಮೂಲಕ ಗ್ರಾಹಕರು, ಹೂಡಿಕೆ, ಎಟಿಎಂ ಕಾರ್ಡ್ ಬ್ಲಾಕ್, ಹೊಸ ಕಾರ್ಡುಗಳ ವಿತರಣೆ ಮತ್ತು ಪಿಪಿಎಫ್, ಎನ್ಎಸ್ಸಿ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆಯಬಹುದು. ಇದು ಗ್ರಾಮೀಣ ಪ್ರದೇಶದ ಲಕ್ಷಾಂತರ ಜನರಿಗೆ ನೆರವಾಗಲಿದೆ.
ಈ ಸೇವೆಯನ್ನು ಪಡೆಯಲು ಅಂಚೆ ಕಚೇರಿ, ಟೋಲ್ ಫ್ರೀ ಸಂಖ್ಯೆಯನ್ನು ನೀಡಿದೆ. ಪಿಪಿಎಫ್, ಎನ್ಎಸ್ಸಿ, ಸುಕನ್ಯಾ ಸಮೃದ್ಧಿ ಸೇರಿದಂತೆ ಇತರ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಬಹುದು. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಅಂಚೆ ಕಚೇರಿಯ ಟೋಲ್ ಫ್ರೀ ಸಂಖ್ಯೆ 18002666868 ಗೆ ಕರೆ ಮಾಡಬೇಕು.
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು, ಐವಿಆರ್ ಸೇವೆಯನ್ನು ಸಹ ಪಡೆಯಬಹುದು. ಗ್ರಾಹಕರಿಗೆ ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಮಾಹಿತಿ ಸಿಗಲಿದೆ. ಗ್ರಾಹಕರು ಖಾತೆ ಬ್ಯಾಲೆನ್ಸ್ ಮಾಹಿತಿಯನ್ನು ಕೂಡ ಪಡೆಯಬಹುದು. ಬ್ಯಾಲೆನ್ಸ್ ಚೆಕ್ ಮಾಡಲು 5ನೇ ನಂಬರ್, ಕಾರ್ಡ್ ನಿರ್ಬಂಧಿಸಲು 6ನೇ ನಂಬರ್ ಒತ್ತಬೇಕು. ನಂತರ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಎಟಿಎಂ ಮಾಹಿತಿಗಾಗಿ 3ನ್ನು ಒತ್ತಬೇಕು. ಹೊಸ ಎಟಿಎಂ ಗಾಗಿ ಎರಡನ್ನು ಒತ್ತಬೇಕು. ಕಾರ್ಡಿನ ಪಿನ್ ಬದಲಾಯಿಸಲು ಒಂದನ್ನು ಒತ್ತಬೇಕು.
ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಎನ್ನುವುದು ಧ್ವನಿ ಆಜ್ಞೆಗಳನ್ನು ಹೊಂದಿರುವ ದೂರವಾಣಿ ವ್ಯವಸ್ಥೆಯಾಗಿದೆ. ಇದು ಗ್ರಾಹಕರಿಗೆ ಅನುಕೂಲಕರವಾಗಲಿದೆ.