alex Certify ತುರ್ತು ಸಹಾಯವಾಣಿಗೆ ಕರೆ ಮಾಡಿದ ಪುಟ್ಟ ಕಂದನ ಬೇಡಿಕೆ ಏನಿತ್ತು ಗೊತ್ತಾ…? ಕ್ಯೂಟ್‌ ಆಗಿದೆ ಈ ಸಂಭಾಷಣೆಯ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುರ್ತು ಸಹಾಯವಾಣಿಗೆ ಕರೆ ಮಾಡಿದ ಪುಟ್ಟ ಕಂದನ ಬೇಡಿಕೆ ಏನಿತ್ತು ಗೊತ್ತಾ…? ಕ್ಯೂಟ್‌ ಆಗಿದೆ ಈ ಸಂಭಾಷಣೆಯ ವಿಡಿಯೋ

ಪೊಲೀಸರಿಗೆ ಬರುವ ತುರ್ತು ಕರೆಗಳಲ್ಲಿ ಎಲ್ಲವೂ ಸೀರಿಯಸ್ ಆಗಿರುವುದಿಲ್ಲ. ಇಲ್ಲೊಬ್ಬ ಪುಟಾಣಿ ಕ್ಯೂಟ್ ಕಾರಣವೊಂದಕ್ಕೆ ತುರ್ತು ಸಹಾಯವಾಣಿಗೆ ಕರೆ ಮಾಡಿ ತನ್ನ ಆಟಿಕೆಗಳ ಸಂಗ್ರಹವನ್ನು ಬಂದು ನೋಡಲು ಕೋರಿ ಪೊಲೀಸರಿಗೆ ಫೋನ್ ಮಾಡಿದ್ದಾನೆ.

ನ್ಯೂಜ಼ಿಲೆಂಡ್‌‌ ಈ ನಾಲ್ಕು ವರ್ಷದ ಪೋರ ತನ್ನ ಆಟಿಕೆಗಳ ಸಂಗ್ರಹವನ್ನು ಬಂದು ನೋಡಲು ಸಾಧ್ಯವೇ ಎಂದು ಕೋರಿ ಪೊಲೀಸರಿಗೆ ಕರೆ ಮಾಡಿದ್ದಾನೆ. ಮಗುವಿನ ಈ ಕರೆಯನ್ನು ಸಮಾಧಾನವಾಗಿಯೇ ಉತ್ತರಿಸಿದ ಅಧಿಕಾರಿ, ಆತನ ಮನವಿಯನ್ನು ಪುರಸ್ಕರಿಸಿ, ಆಟಿಕೆಗಳು ಕೂಲ್ ಆಗಿವೆ ಎಂದಿದ್ದಾರೆ.

ಮಗು ಹಾಗೂ ಸಹಾಯವಾಣಿ ಅಧಿಕಾರಿಯ ಕರೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿದೆ. ಪೊಲೀಸ್ ಅಧಿಕಾರಿಯೊಂದಿಗೆ ಕಾರಿನ ಹುಡ್ ಮೇಲೆ ಕುಳಿತ ಮಗುವಿನ ಚಿತ್ರವೊಂದನ್ನು ಪೋಸ್ಟ್ ಮಾಡಿರುವ ಪೊಲೀಸ್ ಇಲಾಖೆ, ಈ ಆಡಿಯೋ ತುಣುಕು ಶೇರ್‌ ಮಾಡಿಕೊಂಡಿದೆ.

ಬೆರಗಾಗಿಸುವಂತಿದೆ 1 ವರ್ಷದ ಕಂದನ ತಿಂಗಳ ಗಳಿಕೆ…!

“ನಾನು ನಿಮಗೆ ಏನನ್ನೋ ಹೇಳಲೇ? ನನ್ನ ಬಳಿ ಒಂದಷ್ಟು ಆಟಿಕೆಗಳಿವೆ. ಬಂದು ಅವುಗಳನ್ನೊಮ್ಮೆ ನೋಡಿ,” ಎಂದು ಈ ಪೋರ ಸಹಾಯವಾಣಿಯ ನಿರ್ವಾಹಕರಿಗೆ ಹೇಳಿದ್ದಾನೆ. ಬಳಿಕ ಅಧಿಕಾರಿಯೊಬ್ಬರು ಮರಳಿ ಕರೆ ಮಾಡಿದಾಗ ಈ ಪೋರನ ತಾಯಿ ಫೋನ್ ಸ್ವೀಕರಿಸಿ, ಆ ಕರೆ ತಪ್ಪಾಗಿ ಬಂದಿದೆ ಎಂದು ಖಾತ್ರಿಪಡಿಸಿದ್ದಾರೆ.

ಇದಾದ ಬಳಿಕ ಅಧಿಕಾರಿಯೊಬ್ಬರಿಗೆ ಡಯಲ್ ಮಾಡುವ ನಿರ್ವಾಹಕ, “4 ವರ್ಷದ ಪೋರನೊಬ್ಬ ತನ್ನ ಆಟಿಕೆಗಳನ್ನು ಪೊಲೀಸರಿಗೆ ತೋರಿಸಲು ಇಚ್ಛಿಸುತ್ತಿದ್ದಾನೆ,” ಎಂದಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸದ ಯುನಿಟ್ ಅಧಿಕಾರಿ, “ಯಾ, ನಾನು ಇದನ್ನು ನೋಡುತ್ತೇನೆ,” ಎಂದಿದ್ದಾರೆ.

ನೆಟ್ಟಿಗರನ್ನು ಕಂಗಾಲಾಗಿಸಿದೆ ʼರಸಗುಲ್ಲಾʼದ ಹೊಸ ಅವತಾರ…!

“ಆಟಿಕೆಗಳನ್ನು ತೋರಲೆಂದು ಮಕ್ಕಳು 111ಗೆ ಕರೆ ಮಾಡುವುದನ್ನು ನಾವು ಪ್ರೋತ್ಸಾಹಿಸದೇ ಇದ್ದರೂ, ಇದನ್ನು ಶೇರ್‌ ಮಾಡದೇ ಇರಲಾದರಷ್ಟು ಕ್ಯೂಟ್ ಆಗಿದೆ,” ಎಂದು ಸದರ್ನ್ ಡಿಸ್ಟ್ರಿಕ್ ಪೊಲೀಸ್ ಫೇಸ್ಬುಕ್‌ನಲ್ಲಿ ಬರೆದಿದೆ.

ಪೋರನ ಮನೆಗೆ ಭೇಟಿ ಕೊಟ್ಟ ಪೇದೆ ಕುರ್ಟ್, ಆತನ ಆಟಿಕೆಗಳ ಸಂಗ್ರಹವನ್ನೊಮ್ಮೆ ಗಮನಿಸಿ, 111 ಸಹಾಯವಾಣಿಯ ಸಂಖ್ಯೆಗೆ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರವೇ ಕರೆ ಮಾಡಬೇಕೆಂದು ಆತನ ಹೆತ್ತವರಿಗೆ ತಿಳುವಳಿಕೆ ಕೊಟ್ಟು ಹೋಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...