ನಿಮ್ಮ ಸಾಕುಪ್ರಾಣಿಗೆ ಆಹಾರ ನೀಡುವುದು ನಿಮ್ಮ ಆಯ್ಕೆ ಮತ್ತು ನಿರ್ಧಾರ. ಆದರೆ, ಪಶುವೈದ್ಯರು ಮತ್ತು ಪ್ರಾಣಿ ಆಹಾರ ತಜ್ಞರ ಸಲಹೆಯು ಅವುಗಳನ್ನು ದೀರ್ಘಕಾಲ ಆರೋಗ್ಯಕರ ಮತ್ತು ಸಂತೋಷವಾಗಿಡಲು ಸಹಾಯ ಮಾಡುತ್ತದೆ.
ಒಂದು ವೇಳೆ ನೀವು ಯುನೈಟೆಡ್ ಕಿಂಗ್ ಡಂ ನಲ್ಲಿ ನಾಯಿಯ ಮಾಲೀಕರಾಗಿದ್ದರೆ, ನಿಮ್ಮ ಪ್ರೀತಿಯ ಸಾಕುಪ್ರಾಣಿಗಾಗಿ ಮಾಂಸ ಮುಕ್ತ ಆಹಾರವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀವು ಹೊಂದಿರುವುದಿಲ್ಲ.
ವರದಿಗಳ ಪ್ರಕಾರ, ಯುಕೆಯಲ್ಲಿ ಸಾಕುಪ್ರಾಣಿ ಮಾಲೀಕರಿಗೆ ತಮ್ಮ ನಾಯಿಗಳನ್ನು ಸಸ್ಯಾಹಾರಿ ಆಹಾರ ಹಾಕದಂತೆ ಎಚ್ಚರಿಕೆ ನೀಡಲಾಗಿದೆ. ತಮ್ಮ ಸಾಕುಪ್ರಾಣಿಗಳಿಗೆ ಇಂತಹ ಆಹಾರವು ದಂಡ ಅಥವಾ ಜೈಲುವಾಸಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.
ಯುಕೆಯ ಪ್ರಾಣಿ ಕಲ್ಯಾಣ ಕಾಯಿದೆಯು, ಜನರು ತಮ್ಮ ಸಾಕುಪ್ರಾಣಿಗಳು ತಮ್ಮ ಪೌಷ್ಠಿಕಾಂಶದ ಅಗತ್ಯಗಳನ್ನು ಪೂರೈಸುವ ಸೂಕ್ತ ಆಹಾರ ಪಡೆಯುವುದನ್ನು ಖಾತ್ರಿಪಡಿಸಬೇಕೆಂದು ಸೂಚಿಸಿದೆ.
ಇನ್ನು ಕಾನೂನು ಕೇವಲ ಆಹಾರಕ್ಕೆ ಸೀಮಿತವಾಗಿಲ್ಲ. ಮಾಲೀಕರು ತಮ್ಮ ಸಾಕುಪ್ರಾಣಿಗಳು ಸುರಕ್ಷಿತ ಮತ್ತು ಸೂಕ್ತವಾದ ವಾತಾವರಣದಲ್ಲಿ ವಾಸಿಸುವಂತೆ ನೋಡಿಕೊಳ್ಳಬೇಕು. ಯಾವುದೇ ರೀತಿಯ ನೋವು ಮಾಡಬಾರದು, ನೋವಿನಿಂದ ಅದನ್ನು ರಕ್ಷಿಸಬೇಕು ಎಂದು ಹೇಳಲಾಗಿದೆ.
ಒಂದು ವೇಳೆ ಸಾಕು ಪ್ರಾಣಿ ಮಾಲೀಕರು ಮೇಲೆ ತಿಳಿಸಿದ ನಿಯಮಗಳನ್ನು ಉಲ್ಲಂಘಿಸಿದರೆ, ಆತ ಅಥವಾ ಆಕೆ 20,000 ಪೌಂಡ್ ವರೆಗೆ ದಂಡ ಅಥವಾ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.