ಭಗವಂತ ವಿಷ್ಣು ಹಾಗೂ ಲಕ್ಷ್ಮಿಗೆ ಅತ್ಯಂತ ಪ್ರಿಯವಾದ ತಿಂಗಳು ಕಾರ್ತಿಕ ಮಾಸ. ಕಾರ್ತಿಕ ಮಾಸ, ಅಕ್ಟೋಬರ್ 21ರಿಂದ ಶುರುವಾಗಲಿದ್ದು, ನವೆಂಬರ್ 19ರವರೆಗೆ ಇರಲಿದೆ. ನಿದ್ರೆಯಿಂದ ಏಳುವ ವಿಷ್ಣು, ಭಕ್ತರ ಭಕ್ತಿಯನ್ನು ಆನಂದಿಸುತ್ತಾನೆಂಬ ನಂಬಿಕೆಯಿದೆ. ಈ ತಿಂಗಳು ವಿಷ್ಣುವಿನ ಆರಾಧನೆ ಮಾಡಿದ್ರೆ, ಭಕ್ತರ ಆಸೆ ಈಡೇರುತ್ತದೆ ಎಂಬ ನಂಬಿಕೆಯಿದೆ.
ಹೊಟೇಲ್ ಗೆ ಹೋದವರು ಬರಿಗೈನಲ್ಲಿ ಬರಬೇಡಿ, ಅಲ್ಲಿ ಸಿಗಲಿದೆ ಉಚಿತ ವಸ್ತು
ಕಾರ್ತಿಕ ಮಾಸದಲ್ಲಿ ಕೆಲಸವೊಂದು ಕೆಲಸಗಳನ್ನು ಮಾಡಬಾರದು. ಈ ತಿಂಗಳು ಪವಿತ್ರ ತಿಂಗಳಾದ ಕಾರಣ, ಮಾಂಸ, ಮದ್ಯದ ಸೇವನೆ ಮಾಡಬಾರದು. ಸ್ನಾನ ಮಾಡಿದ ನಂತ್ರ ದೇಹಕ್ಕೆ ಎಣ್ಣೆ ಹಚ್ಚುವ ರೂಢಿಯಿರುವವರು ಈ ತಿಂಗಳು ಅದನ್ನು ಮಾಡಬಾರದು. ಕೇವಲ ನರಕ ಚತುರ್ದಶಿಯಂದು ಮಾತ್ರ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಬೇಕು. ಕಾರ್ತಿಕ ಮಾಸದಲ್ಲಿ ಬ್ರಹ್ಮಚರ್ಯವನ್ನು ಪಾಲಿಸುವುದು ಬಹಳ ಮುಖ್ಯ. ಈ ತಿಂಗಳಿನಲ್ಲಿ ಮಧ್ಯಾಹ್ನ ಮಲಗಬಾರದು.
ಈ ತಿಂಗಳು ಸೂರ್ಯನ ಕಿರಣಗಳಿಗೆ ದೇಹವೊಡ್ಡಬೇಕು. ನೆಲಕ್ಕೆ ಮಲಗಬೇಕು. ಭಗವಂತನ ಜಪ ಮಾಡಬೇಕು. ತಾಯಿ ಲಕ್ಷ್ಮಿ ಈ ತಿಂಗಳು ಭೂಮಿಗೆ ಬರ್ತಾಳೆ. ಹಾಗಾಗಿ ಮನೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಮನೆ ಮುಂದೆ ರಂಗೋಲಿ ಹಾಕಬೇಕು. ಹಾಗೆ ಪ್ರತಿ ದಿನ ಸಂಜೆ ತುಳಸಿಗೆ ದೀಪ ಹಚ್ಚಬೇಕು. ತುಳಸಿ ಪೂಜೆಯನ್ನು ಮಾಡಬೇಕು. ಪ್ರತಿ ದಿನ ಸಂಜೆ ಮನೆಯಲ್ಲಿ ಧೂಪ, ದೀಪ ಬೆಳಗಿ ಪೂಜೆ ಮಾಡಬೇಕು.