1. ಸಸ್ಯಗಳಿಂದ ಪಡೆದ AQCH ಎಂಬ ಹೆಸರಿನ ಔಷಧಿಯು ವೈರಸ್ ವಿರೋಧಿ ಗುಣವನ್ನು ಹೊಂದಿದೆ. ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಯಶಸ್ವಿ ಪರೀಕ್ಷೆಯನ್ನು ಕಂಡಿದೆ.
2. ಕಾನ್ಪುರ, ಲಕ್ನೋ, ಆಗ್ರಾ, ಮುಂಬೈ, ಥಾಣೆ, ಪುಣೆ, ಔರಂಗಾಬಾದ್, ಅಹಮದಾಬಾದ್, ಕೋಲ್ಕತ್ತಾ, ಬೆಂಗಳೂರು, ಮಂಗಳೂರು, ಬೆಳಗಾವಿ, ಚೆನ್ನೈ, ಜೈಪುರ, ಚಂಡೀಗಢ, ವಿಶಾಖಪಟ್ಟಣ, ಕಟಕ್, ಕುದ್ರಾ ಹಾಗೂ ನಾಥದ್ವಾರದ ಒಂದೊಂದು ಪ್ರಯೋಗಾಲಯದಲ್ಲಿ ಈ ಔಷಧಿಯ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.
ಮಹಿಳಾ ಬಾಸ್ ಮನೆಯಲ್ಲಿ ವಾಸ ಶುರು ಮಾಡಿದ್ದ ಪತ್ನಿ….! ಬೇಸರಗೊಂಡ ಪತಿ ಮಾಡಿದ್ದೇನು….?
3. ಕಾನ್ಪುರದ ಗಣೇಶ ಶಂಕರ ವಿದ್ಯಾರ್ಥಿ ಮೆಮೋರಿಯಲ್ ಮೆಡಿಕಲ್ ಕಾಲೇಜು, ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿ ಹಾಗೂ ಆಗ್ರಾ ಮೂಲದ ಸರೋಜಿನಿ ನಾಯ್ಡು ಮೆಡಿಕಲ್ ಕಾಲೇಜು ಉತ್ತರ ಪ್ರದೇಶವನ್ನು ಪ್ರತಿನಿಧಿಸಲಿವೆ. ಪ್ರತಿಯೊಂದು ಕೇಂದ್ರದಲ್ಲೂ ಒಟ್ಟು 100 ಮಂದಿ ರೋಗಿಗಳು ಈ ಔಷಧಿಯನ್ನು ಸ್ವೀಕರಿಸಲಿದ್ದಾರೆ.
4. ಪ್ರಾಯೋಗಿಕ ಪರೀಕ್ಷೆಗೆ ಭಾಗಿಯಾಗುವ ರೋಗಿಗಳಿಗೆ ಕನಿಷ್ಟ 18 ವರ್ಷ ವಯಸ್ಸಾಗಿರುವುದು ಕಡ್ಡಾಯವಾಗಿದೆ. ಜೊತೆಯಲ್ಲಿ ಪ್ರಾಯೋಗಿಕ ಪರೀಕ್ಷೆಯ 48 ಗಂಟೆಗಳ ಮುನ್ನ ನಡೆಸಲಾಗುವ ಪರೀಕ್ಷೆಯಲ್ಲಿ ಡೆಂಗ್ಯೂ ಇರುವುದು ಸಾಬೀತಾಗಿರಬೇಕು.
ಉದ್ಯೋಗದ ಹೆಸರಲ್ಲಿ ವಂಚನೆ…! ಉದ್ಯೋಗಾಕಾಂಕ್ಷಿಗಳಿಗೆ ʼಇಂಡಿಗೋʼ ವಾರ್ನಿಂಗ್
5. ರೋಗಿಗಳನ್ನು 8 ದಿನಗಳ ಕಾಲ ಆಸ್ಪತ್ರೆಯಲ್ಲಿ ಇಡಲಾಗುತ್ತದೆ. 7 ದಿನಗಳ ಕಾಲ ರೋಗಿಗೆ ಔಷಧ ನೀಡಲಾಗುತ್ತದೆ. ಔಷಧಿ ನೀಡಿದ 17 ದಿನಗಳ ಕಾಲ ರೋಗಿಯ ಮೇಲೆ ನಿಗಾ ಇಡಲಾಗುತ್ತದೆ.
6. ಡೆಂಗ್ಯೂಗೆ ಇಲ್ಲಿಯವರೆಗೂ ಯಾವುದೇ ನಿರ್ದಿಷ್ಟ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ. ರೋಗಿಯಲ್ಲಿ ಕಂಡು ಬರುವ ಲಕ್ಷಣಕ್ಕೆ ಅನುಸಾರ ಔಷಧಿಗಳನ್ನು ನೀಡಲಾಗ್ತಿದೆ.