alex Certify ಡೆಂಗ್ಯೂ ನಿವಾರಣೆಗೆ ಮದ್ದು ಕಂಡು ಹಿಡಿದ ವಿಜ್ಞಾನಿಗಳು – ಇದರ ಬಗ್ಗೆ ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಂಗ್ಯೂ ನಿವಾರಣೆಗೆ ಮದ್ದು ಕಂಡು ಹಿಡಿದ ವಿಜ್ಞಾನಿಗಳು – ಇದರ ಬಗ್ಗೆ ನಿಮಗೆ ತಿಳಿದಿರಲಿ ಈ ಮಾಹಿತಿ

ಲಕ್ನೋ ಮೂಲದ ಕೇಂದ್ರ ಔಷಧ ಸಂಶೋಧನಾ ಸಂಸ್ಥೆಯು ಡೆಂಗ್ಯೂ ಜ್ವರಕ್ಕೆ ಔಷಧಿಯೊಂದನ್ನು ಕಂಡು ಹಿಡಿದಿದೆ. ವರದಿಗಳ ಪ್ರಕಾರ ಮುಂಬೈ ಮೂಲದ ಔಷಧ ತಯಾರಕ ಕಂಪನಿಯು ಈ ಡೆಂಗ್ಯೂ ಔಷಧಿಗಳ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಡಿಸಿಜಿಐನಿಂದ ಅನುಮತಿ ಪಡೆದಿದೆ ಎಂದು ತಿಳಿದುಬಂದಿದೆ. ದೇಶದ 20 ನಗರಗಳಲ್ಲಿ ಈ ಔಷಧಿಯ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.

ಆಗಾಗ ಮಕ್ಕಳನ್ನು ಕಾಡುವ ತಲೆನೋವಿನ ಬಗ್ಗೆ ನಿರ್ಲಕ್ಷ್ಯ ಬೇಡ

ಡೆಂಗ್ಯೂ ಔಷಧಿಯ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ

1. ಸಸ್ಯಗಳಿಂದ ಪಡೆದ AQCH ಎಂಬ ಹೆಸರಿನ ಔಷಧಿಯು ವೈರಸ್​ ವಿರೋಧಿ ಗುಣವನ್ನು ಹೊಂದಿದೆ. ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಯಶಸ್ವಿ ಪರೀಕ್ಷೆಯನ್ನು ಕಂಡಿದೆ.

2. ಕಾನ್ಪುರ, ಲಕ್ನೋ, ಆಗ್ರಾ, ಮುಂಬೈ, ಥಾಣೆ, ಪುಣೆ, ಔರಂಗಾಬಾದ್​, ಅಹಮದಾಬಾದ್​, ಕೋಲ್ಕತ್ತಾ, ಬೆಂಗಳೂರು, ಮಂಗಳೂರು, ಬೆಳಗಾವಿ, ಚೆನ್ನೈ, ಜೈಪುರ, ಚಂಡೀಗಢ, ವಿಶಾಖಪಟ್ಟಣ, ಕಟಕ್, ಕುದ್ರಾ ಹಾಗೂ ನಾಥದ್ವಾರದ ಒಂದೊಂದು ಪ್ರಯೋಗಾಲಯದಲ್ಲಿ ಈ ಔಷಧಿಯ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.

ಮಹಿಳಾ ಬಾಸ್ ಮನೆಯಲ್ಲಿ ವಾಸ ಶುರು ಮಾಡಿದ್ದ ಪತ್ನಿ….! ಬೇಸರಗೊಂಡ ಪತಿ ಮಾಡಿದ್ದೇನು….?

3. ಕಾನ್ಪುರದ ಗಣೇಶ ಶಂಕರ ವಿದ್ಯಾರ್ಥಿ ಮೆಮೋರಿಯಲ್​ ಮೆಡಿಕಲ್​ ಕಾಲೇಜು, ಲಕ್ನೋದ ಕಿಂಗ್​ ಜಾರ್ಜ್​ ಮೆಡಿಕಲ್​ ಯೂನಿವರ್ಸಿಟಿ ಹಾಗೂ ಆಗ್ರಾ ಮೂಲದ ಸರೋಜಿನಿ ನಾಯ್ಡು ಮೆಡಿಕಲ್​ ಕಾಲೇಜು ಉತ್ತರ ಪ್ರದೇಶವನ್ನು ಪ್ರತಿನಿಧಿಸಲಿವೆ. ಪ್ರತಿಯೊಂದು ಕೇಂದ್ರದಲ್ಲೂ ಒಟ್ಟು 100 ಮಂದಿ ರೋಗಿಗಳು ಈ ಔಷಧಿಯನ್ನು ಸ್ವೀಕರಿಸಲಿದ್ದಾರೆ.

4. ಪ್ರಾಯೋಗಿಕ ಪರೀಕ್ಷೆಗೆ ಭಾಗಿಯಾಗುವ ರೋಗಿಗಳಿಗೆ ಕನಿಷ್ಟ 18 ವರ್ಷ ವಯಸ್ಸಾಗಿರುವುದು ಕಡ್ಡಾಯವಾಗಿದೆ. ಜೊತೆಯಲ್ಲಿ ಪ್ರಾಯೋಗಿಕ ಪರೀಕ್ಷೆಯ 48 ಗಂಟೆಗಳ ಮುನ್ನ ನಡೆಸಲಾಗುವ ಪರೀಕ್ಷೆಯಲ್ಲಿ ಡೆಂಗ್ಯೂ ಇರುವುದು ಸಾಬೀತಾಗಿರಬೇಕು.

ಉದ್ಯೋಗದ ಹೆಸರಲ್ಲಿ ವಂಚನೆ…! ಉದ್ಯೋಗಾಕಾಂಕ್ಷಿಗಳಿಗೆ ‌ʼಇಂಡಿಗೋʼ ವಾರ್ನಿಂಗ್

5. ರೋಗಿಗಳನ್ನು 8 ದಿನಗಳ ಕಾಲ ಆಸ್ಪತ್ರೆಯಲ್ಲಿ ಇಡಲಾಗುತ್ತದೆ. 7 ದಿನಗಳ ಕಾಲ ರೋಗಿಗೆ ಔಷಧ ನೀಡಲಾಗುತ್ತದೆ. ಔಷಧಿ ನೀಡಿದ 17 ದಿನಗಳ ಕಾಲ ರೋಗಿಯ ಮೇಲೆ ನಿಗಾ ಇಡಲಾಗುತ್ತದೆ.

6. ಡೆಂಗ್ಯೂಗೆ ಇಲ್ಲಿಯವರೆಗೂ ಯಾವುದೇ ನಿರ್ದಿಷ್ಟ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ. ರೋಗಿಯಲ್ಲಿ ಕಂಡು ಬರುವ ಲಕ್ಷಣಕ್ಕೆ ಅನುಸಾರ ಔಷಧಿಗಳನ್ನು ನೀಡಲಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...