ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಪಾಲಿಗೆ ಮನೆಯ ಮಗಳನ್ನು ಮದುವೆ ಮಾಡೋದು ಅಂದರೆ ಸಾಮಾನ್ಯವಾದ ಮಾತಲ್ಲ. ಅದರಲ್ಲೂ ಬೆಳೆಯನ್ನೇ ನಂಬಿ ಬದುಕುವ ರೈತಾಪಿ ಕುಟುಂಬಗಳ ಪಾಡಂತೂ ಹೇಳ ತೀರದು.
BIG NEWS: ಬಾದಾಮಿಯಿಂದ ಚಾಮರಾಜಪೇಟೆಗೆ ವಲಸೆ ಹೋಗಲು ಸಿದ್ಧತೆ; ಕಿಸ್ ಕಾ ಸಾತ್ ಕಿಸ್ ಕಾ ವಿಕಾಸ್ ’ಬುರುಡೆರಾಮಯ್ಯ’…..?; ವಿಪಕ್ಷ ನಾಯಕನ ವಿರುದ್ಧ ಚಾಟಿ ಬೀಸಿದ BJP
ಈಗಂತೂ ಮಾನ್ಸೂನ್ ಮಳೆಯು ಮುಗಿಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಇದರಿಂದ ರೈತರು ಬೆಳೆದ ಬೆಳೆಗಳೆಲ್ಲ ನಾಶವಾಗಿದೆ.
ಹೀಗಾಗಿ ಮಹಾರಾಷ್ಟ್ರದ ವಿಹಮಂದ್ವಾ ಪ್ರದೇಶದ ರೈತರು ತಮ್ಮ ಮಕ್ಕಳ ಮದುವೆಯನ್ನು ಮುಂದಕ್ಕೆ ಹಾಕಿದ್ದಾರೆ.
ಸುಮಾರು ಹದಿನೈದು ದಿನಗಳಿಂದ ಈ ಭಾಗದಲ್ಲಿ ಈ ಮಳೆ ಕಡಿಮೆಯಾಗಿದೆ. ಆದರೂ ಸಹ ರೈತರಿಗೆ ಇನ್ನೂ ತಮ್ಮ ಮುಳುಗಡೆಯಾದ ಹೊಲಗಳಿಗೆ ಪ್ರವೇಶ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ಆತಂಕದಲ್ಲಿದ್ದಾರೆ.
ತನ್ನ ಇಚ್ಛೆ ವಿರುದ್ಧ ಮದುವೆಯಾಗಿದ್ದ ಪುತ್ರಿಯ ಬಾಳಿಗೆ ಕೊಳ್ಳಿ ಇಟ್ಟ ಪಾಪಿ ತಂದೆ..!
ಇಲ್ಲಿಯವರೆಗೆ ಬರಪೀಡಿತ ಪ್ರದೇಶವಾಗಿದ್ದ ಗೋದಾವರಿ ನದಿಯ ಉತ್ತರ ಭಾಗದಲ್ಲಿರುವ ಔರಂಗಾಬಾದ್ ಜಿಲ್ಲಾ ಕೇಂದ್ರದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ವಿಹಮಂದ್ವಾದಲ್ಲಿ ಈ ಬಾರಿ 241.9 ಪ್ರತಿಶತ ಮಳೆಯಾಗಿದೆ.
ಸೋಯಾಬೀನ್, ಹತ್ತಿ ಹಾಗೂ ಬಟಾಣಿ ಬೆಳೆಗಳನ್ನು ಬೆಳೆದಿದ್ದ ಈ ಭಾಗದ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ತಿಂಗಳಿನಿಂದ ಸುರಿದ ಭಾರೀ ಮಳೆಯಿಂದಾಗಿ ರೈತರಿಗೆ ಸಂಕಷ್ಟ ಎದುರಾಗಿದೆ.