ಭಾರತೀಯರ ಎತ್ತರದ ಬಗ್ಗೆ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. ಅಧ್ಯಯನವೊಂದರ ಪ್ರಕಾರ, ಕಳೆದ 10 ವರ್ಷಗಳಲ್ಲಿ, ಭಾರತದ ಪುರುಷರು ಮತ್ತು ಮಹಿಳೆಯರ ಎತ್ತರವು 1.10 ಸೆಂಟಿಮೀಟರ್ ಕಡಿಮೆಯಾಗಿದೆ.
ಯಸ್, ಭಾರತೀಯರ ಎತ್ತರ ಕುರಿತು 1998 ರಿಂದ 2015 ರ ವರೆಗೆ ಅಧ್ಯಯನ ನಡೆಸಲಾಗಿದೆ. ಭಾರತದಲ್ಲಿ ವಯಸ್ಕರ ಎತ್ತರದ ಪ್ರವೃತ್ತಿಗಳು: ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ ಎಂಬ ಹೆಸರಿನ ಅಧ್ಯಯನ ನಡೆದಿದೆ. 1998-99ರ ವೇಳೆಗೆ ಭಾರತದಲ್ಲಿ ಜನರ ಎತ್ತರದಲ್ಲಿ ಏರಿಕೆಯಾಗಿತ್ತು. 2005-06 ರಿಂದ 2015-16ರವರೆಗೆ ವಯಸ್ಕ ಪುರುಷರು ಮತ್ತು ಮಹಿಳೆಯರ ಸರಾಸರಿ ಎತ್ತರ ಕುಸಿಯಲಾರಂಭಿಸಿತು. ಬಡ ಮಹಿಳೆಯರು ಮತ್ತು ಬುಡಕಟ್ಟು ಮಹಿಳೆಯರ ಎತ್ತರದಲ್ಲಿ ಹೆಚ್ಚಿನ ಇಳಿಕೆ ಕಂಡು ಬಂದಿದೆ.
ನೆಟ್ಟಿಗರ ಕುತೂಹಲಕ್ಕೆ ಕಾರಣವಾದ ನಿಗೂಢ ದ್ವೀಪ
ಮಹಿಳೆಯರು ಮತ್ತು ಪುರುಷರ ಸರಾಸರಿ ಎತ್ತರವು 15 ರಿಂದ 25 ವರ್ಷ ವಯಸ್ಸಿನವರಲ್ಲಿ ಕಡಿಮೆಯಾಗುತ್ತಿದೆ. ಮಹಿಳೆಯರ ಸರಾಸರಿ ಎತ್ತರವು ಸುಮಾರು 0.42 ಸೆಂಟಿಮೀಟರ್ ಕಡಿಮೆಯಾಗಿದೆ. ಭಾರತೀಯ ಪುರುಷರ ಸರಾಸರಿ ಎತ್ತರ 1.10 ಸೆಂಟಿಮೀಟರ್ ಇಳಿದಿದೆ.
ಭಾರತೀಯರ ಎತ್ತರ ಕಡಿಮೆಯಾಗಲು ಕಾರಣವೇನು ಎಂಬುದನ್ನೂ ಇದ್ರಲ್ಲಿ ಹೇಳಲಾಗಿದೆ. ಎತ್ತರ ಕಡಿಮೆಯಿರುವವರ ಮಕ್ಕಳ ಎತ್ತರ ಕೂಡ ಕಡಿಮೆಯಾಗ್ತಿದೆ. ಇದಲ್ಲದೆ, ಜೀವನಶೈಲಿ, ಪಾಲನೆ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳು ಕೂಡ ಇದಕ್ಕೆ ಕಾರಣವೆಂದು ಅಧ್ಯಯನದಲ್ಲಿ ಹೇಳಲಾಗಿದೆ. ಶೇಕಡಾ 60-80 ರಷ್ಟು ಎತ್ತರ ಕಡಿಮೆಯಾಗಲು ಆನುವಂಶಿಕ ಸಮಸ್ಯೆ ಕೂಡ ಕಾರಣವೆಂಬುದು ಪತ್ತೆಯಾಗಿದೆ.
ಸಲ್ಮಾನ್ ಖಾನ್ ಮನೆ ಬಾಡಿಗೆ ಕೇಳಿದ್ರೆ ತಲೆ ಸುತ್ತುತ್ತೆ….!
ವಿದೇಶದಲ್ಲಿ ನಡೆದ ಕೆಲ ಅಧ್ಯಯನದಲ್ಲಿ, ವಿದೇಶಿಯರ ಎತ್ತರ ಹೆಚ್ಚಾಗುತ್ತಿರುವುದು ಪತ್ತೆಯಾಗಿದೆ. ಆದ್ರೆ ಭಾರತೀಯರಲ್ಲಿ ಎತ್ತರ ಕಡಿಮೆಯಾಗ್ತಿದ್ದು, ಇದು ಅಪಾಯದ ಸಂಕೇತವೆಂದು ಪರಿಗಣಿಸಲಾಗಿದೆ. ಸರ್ಕಾರ ಈ ಬಗ್ಗೆ ತನಿಖೆ ನಡೆಸಬೇಕೆಂದು ಸಂಶೋಧಕರು ಕೋರಿದ್ದಾರೆ. ಹಾಗೆ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.