ವಿಶ್ವದಲ್ಲೇ ಅತಿಹೆಚ್ಚು ದಿನಗಳ ಲಾಕ್‌ಡೌನ್ ಕಂಡ ನಗರವೊಂದು ಇದೀಗ ತಾನೇ ನಿರ್ಬಂಧಗಳನ್ನು ಸಡಿಲಿಸಿಕೊಂಡು ಸಹಜ ಸ್ಥಿತಿಯತ್ತ ಮರಳುತ್ತಿದೆ. ಒಟ್ಟು ಆರು ಬಾರಿ ಲಾಕ್‌ಡೌನ್, ಅಂದರೆ 262 ದಿನಗಳು ಸಂಚಾರ ನಿರ್ಬಂಧ ಹೇರಿಕೊಂಡು ಕೊರೊನಾ ವಿರುದ್ಧ ಹೋರಾಡಿದೆ ಈ ನಗರ.
50 ಲಕ್ಷ ಜನಸಂಖ್ಯೆ ಇರುವ ನಗರದಲ್ಲಿ ಕೊರೊನಾ ಹತ್ತಿಕ್ಕಲು ಪೂರ್ಣ ನಗರವನ್ನೇ 100 ದಿನಗಳಿಗೂ ಅಧಿಕ ಕಾಲ ವ್ಯಾಪಾರ-ಸಂಚಾರ-ಸುತ್ತಾಟದಿಂದ ಮುಕ್ತಗೊಳಿಸಿ ’ಶಟ್‌ಡೌನ್’ ಮಾಡಲಾಗಿತ್ತು.
ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ʼಚಿಕನ್ʼ ಸರಿಯಿಲ್ಲವೆಂದ ಭೂಪ…!
ಅಂದಹಾಗೇ, ಕೊರೊನಾ ವಿರುದ್ಧ ಇಂಥ ದೀರ್ಘಾವಧಿ ಹೋರಾಟ ನಡೆಸಿ ಗೆದ್ದಿರುವ ನಗರ ಯಾವುದು ಎಂದರೆ, ಆಸ್ಪ್ರೇಲಿಯಾದ ’ ಮೆಲ್ಬರ್ನ್ ’ ನಗರ.
ಈ ನಗರದಲ್ಲಿನ ಶೇ. 80ರಷ್ಟು ಜನರು ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಆ ಧೈರ್ಯದ ಮೇಲೆ ಕೊರೊನಾ ಸ್ಫೋಟವು ಸಂಭವಿಸಲ್ಲ ಎಂದು ಸರ್ಕಾರವು ತಜ್ಞವೈದ್ಯರಿಂದ ಸಲಹೆ ಪಡೆದುಕೊಂಡು ನಿರ್ಬಂಧ ಸಡಿಲಿಕೆಗೆ ಮುಂದಾಗುತ್ತಿದೆ. ನೆರೆಯ ನ್ಯೂಜಿಲ್ಯಾಂಡ್ ಮತ್ತು ಸಿಂಗಾಪುರದ ಜತೆಗೆ ಮಾತುಕತೆ ನಡೆಸಿರುವ ಆಸ್ಪ್ರೇಲಿಯಾ ಸರ್ಕಾರವು ಶೀಘ್ರವೇ ಕ್ವಾರಂಟೈನ್ ಮುಕ್ತ ವಿಮಾನ ಪ್ರಯಾಣವನ್ನು ಆರಂಭಿಸಲು ಮುಂದಾಗಿದೆ.
ನ್ಯೂಜಿಲ್ಯಾಂಡ್‌ನಲ್ಲಿ ಭಾನುವಾರದಂದು 51 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಆ ಪೈಕಿ 47 ಪ್ರಕರಣಗಳು ಪ್ರಮುಖ ನಗರ ಎನಿಸಿಕೊಂಡಿರುವ ಆಕ್‌ಲ್ಯಾಂಡ್‌ನಲ್ಲಿವೆ.