ಭಾರೀ ಮಳೆ ಹಾಗೂ ಪ್ರವಾಹದ ಕಾರಣ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಈ ಸಂಬಂಧ ರೆಡ್ ಅಲರ್ಟ್ ಘೋಷಿಸಲಾಗಿದೆ.
ಇದೇ ವೇಳೆ ಭಾರೀ ಮಳೆಯ ಮುನ್ಸೂಚನೆ ಇರುವ ಕಾರಣ ಮಿಕ್ಕ ಏಳು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಮತ್ತು ಎರಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
BREAKING: ‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪಬಾಬುಗೆ ಬಿಗ್ ಶಾಕ್, FIR ದಾಖಲು
ಮೃತಪಟ್ಟ ಮಹಿಳೆ ಇಡುಕ್ಕಿ ಜಿಲ್ಲೆಯ ಮೊಳಮಟ್ಟಂನವರು ಎನ್ನಲಾಗಿದೆ. ಪ್ರವಾಹಕ್ಕೆ ಸಿಲುಕಿದ ಈ ಮಹಿಳೆಯ ಕಾರು ಒಂದೂವರೆ ಕಿಮೀನಷ್ಟು ದೂರ ಕೊಚ್ಚಿ ಹೋಗಿದೆ. ಜಿಲ್ಲೆಯಲ್ಲಿ ಭೂಕುಸಿತದ ಅನೇಕ ಘಟನೆಗಳು ಜರುಗಿವೆ.
ಕೊಟ್ಟಾಯಂ ಜಿಲ್ಲೆಯ ಕೋಟಿಕಲ್ನಲ್ಲಿ 12 ಮಂದಿ ಕಾಣೆಯಾಗಿದ್ದಾರೆ. ಭೂಕುಸಿತದ ಹಿನ್ನೆಲೆಯಲ್ಲಿ ಪ್ರದೇಶವು ಜಲಾವೃತವಾಗಿದೆ. ಹೊರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿರುವ ಈ ಪ್ರದೇಶವನ್ನು ತಲುಪಲು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಆಗುತ್ತಿಲ್ಲ.
ಕೇರಳದ ಕೇಂದ್ರ ಹಾಗೂ ದಕ್ಷಿಣದ ಜಿಲ್ಲೆಗಳು ಭಾರೀ ಮಳೆ ಕಾಣುತ್ತಿವೆ.