ಹಾನಗಲ್: ಹಾನಗಲ್, ಸಿಂಧಗಿ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರ ಜೋರಾಗಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಹಾನಗಲ್ ನಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿರುವ ಕಾಂಗ್ರೆಸ್ ನಾಯಕರು ಬಿಜೆಪಿ, ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ ಬಾರಿ ಬಿಜೆಪಿ ಬರಬಾರದು ಎಂಬ ಕಾರಣಕ್ಕೆ ಜೆಡಿಎಸ್ ಗೆ ಬೆಂಬಲ ನೀಡಿ ಮೈತ್ರಿ ಸರ್ಕಾರ ರಚನೆ ಮಾಡಿದೆವು. ಆದರೆ ಆ ಪುಣ್ಯಾತ್ಮ ಮೈತ್ರಿ ಸರ್ಕಾರ ಉಳಿಸಿಕೊಳ್ಳಬೇಕಲ್ಲ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
‘ರೆನೋ ಡಸ್ಟರ್ʼ ಖರೀದಿ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್
ಈ ಗಿರಾಕಿ ಯಡಿಯೂರಪ್ಪ ಸುಮ್ಮನಿರಬೇಕಲ್ಲಾ ? ನಮ್ಮ ಶಾಸಕರನ್ನು ಕರೆದುಕೊಂಡು ಸಿಎಂ ಆದರು. ಮೈತ್ರಿ ಸರ್ಕಾರ ಉರುಳಿಸಿ, ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಸಿಎಂ ಆದ ಯಡಿಯೂರಪ್ಪ ಈಗ ಅಧಿಕಾರದಲ್ಲಿದ್ದಾರಾ ? ಯಡಿಯೂರಪ್ಪನವರನ್ನೇ ಕೆಳಗಿಳಿಸಿ, ಬೊಮ್ಮಾಯಿ ಅವರನ್ನು ಸಿಎಂ ಮಾಡಿದರು. ಯಡಿಯೂರಪ್ಪ ಈಗ ಓಟ್ ಕೇಳಲು ಬಂದರೂ ಬರಬಹುದು. ಬೊಮ್ಮಾಯಿ ಗೋಗರೆದು ಕರೆದಿದ್ದಾರೆ ಅದಕ್ಕೆ ಓಟ್ ಕೇಳಲು ಬರ್ತಾರೆ ಎಂದು ಲೇವಡಿ ಮಾಡಿದರು.
ನೆಟ್ಟಿಗರ ಮನಸೂರೆಗೊಂಡ ಪ್ರಾಣಿಗಳ ಫನ್ನಿ ಫೋಟೋಸ್
ಬಡ ಜನರು ಹಸಿವಿನಿಂದ ಇರಬಾರದೆಂದು ನಾನು ಅನ್ನಭಾಗ್ಯ ಯೋಜನೆ ಜಾರಿಗೆ ತಂದೆ. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ 7 ಕೆಜಿ ಅಕ್ಕಿ ವಿತರಿಸಿದರೆ ಇವರ ಗಂಟೇನು ಹೋಗುತ್ತಿತ್ತು ? ನರೇಂದ್ರ ಮೋದಿ ಅಚ್ಚೇ ದಿನ್ ತರುತ್ತೇನೆ ಎಂದು ಸುಳ್ಳು ಹೇಳಿ ಪ್ರಧಾನಿಯಾದರು. ಆದರೆ ದೇಶದ ಸ್ಥಿತಿ ಏನಾಯಿತು ? ಪೆಟ್ರೋಲ್ ಡೀಸೆಲ್ ನಿಂದ ಹಿಡಿದು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದರು. ಮೋದಿ ಹೇಳಿದ ಅಚ್ಛೇ ದಿನ್ ಇದೇನಾ ? ಈ ಬಗ್ಗೆ ಜನರು ಪ್ರಶ್ನೆ ಮಾಡಬೇಕು ಎಂದು ಹೇಳಿದರು.