ಸಣ್ಣ ಆಕಾರದ ಪ್ರತಿಕೃತಿಗಳನ್ನು ನಿರ್ಮಾಣ ಮಾಡುವ ಖ್ಯಾತ ಕಲಾವಿದರಾದ ಬಿಸ್ವಜೀತ್ ನಾಯಕ್ ಅವರು ಒಡಿಶಾದ ಪುರಿಯಲ್ಲಿ ನಿರ್ಮಿಸಿರುವ ’ಕೂಲ್ ದುರ್ಗೆ’ ಆಕರ್ಷಣೆಯ ಕೇಂದ್ರಬಿಂದು ಆಗಿದೆ.
ಕೆಫೆಯಲ್ಲಿ ಸಿಗುವ ಈ ಚಹಾದ ಬೆಲೆ ಕೇಳಿದ್ರೆ ದಂಗಾಗ್ತೀರಿ…..!
ಹೌದು, ಸದಾಕಾಲ ತಣ್ಣಗಿರುವ ದುರ್ಗೆ ಎಂದೇ ಈ ವಿಶೇಷ ಮೂರ್ತಿಯನ್ನು ಕರೆಯಬಹುದು. ಯಾಕೆಂದರೆ, ಈ ದುರ್ಗೆಯು ನಿರ್ಮಿಸಲ್ಪಟ್ಟಿರುವುದು ಐಸ್‌ಕ್ರೀಂ ತಿನ್ನಲಾಗುವ ಕಡ್ಡಿಗಳಿಂದ! ಹಾಗಂತ ಐಸ್‌ಕ್ರೀಂ ಕೂಡ ಕಡ್ಡಿಗಳ ಮಧ್ಯೆ ಮೆತ್ತಲಾಗಿದೆಯೇ ಎಂಬ ಬಗ್ಗೆ ಮಾತ್ರ ಇನ್ನೂ ನಿಖರ ಮಾಹಿತಿ ಸಿಕ್ಕಿಲ್ಲ.
ಒಟ್ಟು 6 ದಿನಗಳ ಪರಿಶ್ರಮದಿಂದ ’ಮಂಡಲ ಕಲೆಯ’ ವಿನ್ಯಾಸದಲ್ಲಿ ನಾಯಕ್ ಅವರು 275 ಐಸ್‌ಕ್ರೀಂ ಕಡ್ಡಿಗಳಿಂದ ಈ ದುರ್ಗೆಯ ಆಕೃತಿಯನ್ನು ನಿರ್ಮಿಸಿದ್ದಾರೆ.
ಟೀಂ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್
ಕೋವಿಡ್-19 ಮಾರ್ಗಸೂಚಿಗಳ ಅನ್ವಯ ಭುವನೇಶ್ವರ ನಗರಪಾಲಿಕೆಯು ದುರ್ಗಾ ಮೂರ್ತಿಯ ಎತ್ತರವನ್ನು 4 ಅಡಿಗಳಷ್ಟು ಎತ್ತರ ಮೀರುವಂತಿಲ್ಲ ಎಂಬ ಖಡಕ್ ನಿಯಮ ಹೇರಿತ್ತು. ದುರ್ಗೆಯ ತಯಾರಕರ ಸಂಖ್ಯೆ ಕೂಡ 7 ಮಂದಿಗೂ ಹೆಚ್ಚು ಇರಬಾರದು ಎಂದು ನಿರ್ದೇಶಿಸಲಾಗಿತ್ತು. ಹೊರಾಂಗಣದಲ್ಲಿ ದುರ್ಗಾ ಪೆಂಡಾಲ್ ಮತ್ತು ಪೂಜೆಗೆ ಬಹಳ ನಿರ್ಬಂಧಗಳಿದ್ದ ಕಾರಣ, ಬಹುತೇಕರು ಮನೆಗಳಲ್ಲೇ ದುರ್ಗೆಯನ್ನು ಸ್ಥಾಪಿಸಿ ಪೂಜಿಸಿದ್ದಾರೆ.
ಬಿಡುಗಡೆ ತಡವಾಗಿದ್ದಕ್ಕೆ ಮಹತ್ವದ ನಿರ್ಧಾರ ಕೈಗೊಂಡ ‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪಬಾಬು
ಅದೇ ಸಾಲಿಗೆ ನಾಯಕ್ ಕೂಡ ಸೇರ್ಪಡೆಯಾಗಿದ್ದಾರೆ. ಐಸ್‌ಕ್ರೀಂ ಕಡ್ಡಿಗಳಿಗೆ ಕೆಂಪು, ಕಪ್ಪು, ನೀಲಿ ಬಣ್ಣಗಳನ್ನು ಬಳಿದು ದುರ್ಗಾ ಮುಖವಾಡ, ಅದಕ್ಕೆ ಕಿರೀಟ, ಕಿವಿಯೋಲೆಗಳನ್ನು ನಾಯಕ್ ಮಾಡಿರುವುದು ವಿಶೇಷ. ಅಲ್ಲಲ್ಲಿ ಐಸ್‌ಕ್ರೀಂ ಕೂಡ ಮೆತ್ತಿದ್ದಾರೆ ಎಂದು ಸ್ಥಳೀಯರು ಹೇಳಿಕೊಂಡು ತಿರುಗಾಡುತ್ತಿದ್ದಾರಂತೆ. ಆ ನೆಪದಲ್ಲಾದರೂ ಐಸ್‌ಕ್ರೀಂ ಅಂಗಡಿ ನೆನಪಿಸಿಕೊಂಡು ಐಸ್‌ಕ್ರೀಂ ಸವಿಯುವ ಖಯಾಲಿ ಇವರದ್ದು.