ಸ್ಕೂಬಾ ಡೈವರ್ ಬೆನ್ ಬುರ್ವಿಲ್ಲೆಗೆ ಆಳದ ಸಾಗರಕ್ಕೆ ಇಳಿಯುವುದು ಎಂದರೆ ಪಂಚಪ್ರಾಣ. ಆತನ ಈ ಉತ್ಕಟ ಇಚ್ಛೆಯೇ ಕಳೆದ 20 ವರ್ಷಗಳಿಂದ ಸಾಗರದಾಳದ ವಿಸ್ಮಯದ ಅನ್ವೇಷಣೆಗೆ ನೆರವಾಗುತ್ತಿದೆ. ಅಟ್ಲಾಂಟಿಕ್ ಸಾಗರದ ಭಾಗವಾದ ನಾರ್ತ್ ಸಮುದ್ರ ವಲಯದಲ್ಲಿ ಸ್ಕೂಬಾ ಡೈವರ್ಗಳ ಪೈಕಿ ಬೆನ್ ಹೆಸರು ಬಹಳ ಜನಪ್ರಿಯ.
ಹೀಗಿದ್ದ ಬೆನ್ಗೆ ಕಳೆದ ವಾರ ಸ್ಕೂಬಾ ಡೈವ್ ವೇಳೆ ಭಾರಿ ಅಚ್ಚರಿಯೊಂದು ಕಾದಿತ್ತು. ನಾರ್ತ್ ಸಾಗರದಲ್ಲಿ ಈಜುತ್ತಲೇ ಸಾಗಿದ್ದ ಬೆನ್ ಕೆಲಕಾಲ ಒಂದು ಬಂಡೆಯ ಬಳಿ ನಿಂತರು.
ಟಿ20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆದ CSK ನಾಯಕ ಧೋನಿ, 300 ಪಂದ್ಯಗಳಲ್ಲಿ ನಾಯಕನಾದ ಮೊದಲಿಗ
ಆಗ ಅವರ ಎದುರಿಗೆ ಬೂದು ಬಣ್ಣದ ಅಪರೂಪದ ನೀರು ನಾಯಿಯೊಂದು ಪ್ರತ್ಯಕ್ಷವಾಯಿತು. ಈ ‘ಸೀಲ್’ ಅಥವಾ ನೀರುನಾಯಿ ಹಾನಿಕಾರಕ ಜಲಜೀವಿ ಅಲ್ಲ. ಡಾಲ್ಫಿನ್ಗಳಂತೆ ಮನುಷ್ಯರನ್ನು ಕಂಡರೆ ಬಹಳ ಇಷ್ಟಪಡುವ ಪೈಕಿಯದ್ದು.
ನೋಡನೋಡುತ್ತಿದ್ದಂತೆ ಡೈವರ್ ಬೆನ್ ಹತ್ತಿರಕ್ಕೆ ಬಂದು ತನ್ನ ಬಾಲದಿಂದ ಆತನಿಗೆ ಸವರುತ್ತಾ ಮುದ್ದು ಮಾಡುವಂತೆ ಸನ್ನೆ ಮಾಡಿದ ಸೀಲ್, ಕೊನೆಗೆ ಬೆನ್ಗೆ ಒಂದು ಅಪ್ಪುಗೆಯನ್ನು ಕೂಡ ಕೊಟ್ಟಿತು.
ವೃತ್ತಿಯಲ್ಲಿ ವೈದ್ಯರಾಗಿರುವ ಬೆನ್ಗೆ ಇಂಥದ್ದೊಂದು ಅನುಭವವೇ ಆಗಿರಲಿಲ್ಲವಂತೆ. ಪ್ರಾಣಿಯೊಂದು ಆತ್ಮೀಯತೆಯಿಂದ ಅಪ್ಪಿಕೊಂಡು ಅತಿಥಿ ಸತ್ಕಾರ ಮಾಡಿದೆ. ನನ್ನ ನಿರೀಕ್ಷೆಯಲ್ಲಿ ಇಷ್ಟು ದಿನ ಕಳೆದಿತ್ತು ಎಂಬಂತೆ ಭಾಸವಾಯಿತು ಎಂದು ಬೆನ್ ಅವರು ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ವಿಡಿಯೊ ಟ್ವಿಟರ್ನಲ್ಲಿ ಭಾರಿ ವೈರಲ್ ಆಗಿದ್ದು, ಮನುಷ್ಯನಂತೆಯೇ ಜಲರಾಶಿಗಳು ಪ್ರೀತಿಗಾಗಿ, ಆರೈಕೆಗಾಗಿ ಹಾತೊರೆಯುತ್ತವೆ ಎಂದು ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.