ಬೆಂಗಳೂರು ನಿವಾಸಿ ವಿದ್ಯುನ್ ಆರ್. ಹೆಬ್ಬಾರ್ 2021ನೇ ಸಾಲಿನ ಯಂಗ್ ವೈಲ್ಡ್ಲೈಫ್ ಫೋಟೋಗ್ರಾಫರ್ ಪ್ರಶಸ್ತಿಗೆ ಭಾಜನನಾಗಿದ್ದಾನೆ. ಬಲೆಯಲ್ಲಿರುವ ಜೇಡರ ಹುಳುವಿನ ಫೋಟೋವನ್ನು ವಿದ್ಯುನ್ ಸೆರೆಹಿಡಿದಿದ್ದರು. 10 ವರ್ಷ ವಯಸ್ಸಿನ ವಿದ್ಯುನ್ನ ಈ ಅತ್ಯದ್ಭುತ ಫೋಟೋಗೆ ಭರ್ಜರಿ ಗೌರವ ಸಂದಂತಾಗಿದೆ.
ನಿರ್ಣಾಯಕರ ಪೈಕಿ ಒಬ್ಬರಾದ ರೋಜ್ ಕಿಡ್ಮನ್ ಈ ವಿಚಾರವಾಗಿ ಮಾತನಾಡಿದ್ದು, ಜೇಡರ ಹುಳುವನ್ನು ಈ ರೀತಿ ಸೆರೆ ಹಿಡಿಯಬೇಕು ಅನ್ನೋದು ಅನೇಕರ ಕಲ್ಪನೆಯಲ್ಲಿದೆ. ಈ ಚಿತ್ರವು ಫರ್ಫೆಕ್ಟ್ ಆಗಿದೆ. ಸರಿಯಾದ ಜಾಗದಲ್ಲಿ ಬಾಲಕ ಫೋಕಸ್ ಮಾಡಿದ್ದಾನೆ. ಗಾಡಿಯ ಚಲನೆಯಿಂದ ಬರುತ್ತಿದ್ದ ಬೆಳಕು ಕೂಡ ಈ ಚಿತ್ರವನ್ನು ಸಂಪೂರ್ಣವಾಗಿಸಿದೆ ಎಂದು ಹೇಳಿದ್ರು.
ಪ್ರಶಸ್ತಿಗೆ ಭಾಜನನಾದ ಬಳಿಕ ಮಾತನಾಡಿದ ವಿದ್ಯುನ್ ಹೆಬ್ಬಾರ್, ಗಾಡಿಗಳು ಪದೇ ಪದೇ ಸಂಚರಿಸುತ್ತಲೇ ಇದ್ದವು. ಅಲ್ಲದೇ ಜೇಡರ ಬಲೆ ಅಲುಗಾಡುತ್ತಲೇ ಇತ್ತು. ಹೀಗಾಗಿ ನನಗೆ ಈ ಫೋಟೋವನ್ನು ಕ್ಲಿಕ್ಕಿಸುವುದು ದೊಡ್ಡ ಚಾಲೆಂಜ್ ಆಗಿತ್ತು ಎಂದು ಹೇಳಿದ್ದಾನೆ.
1965ರಿಂದ ಪ್ರತಿ ವರ್ಷ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಈ ವರ್ಷವು ಲಂಡನ್ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ವತಿಯಿಂದ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ವಿಶ್ವಾದ್ಯಂತ 50 ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಭಾಗಿಯಾಗಿದ್ದರು.