ಸಾಮಾಜಿಕ ಜಾಲತಾಣದ ವ್ಯಾಪ್ತಿ ಎಲ್ಲೆಡೆ ಹಬ್ಬಿದ ಬಳಿಕ ಜನರು ದೊಡ್ಡಸ್ತಿಕೆ ತೋರಿಸಲು ಏನಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ದಿನಂಪ್ರತಿ ನೋಡುತ್ತಲೇ ಇದ್ದೇವೆ.
ಇಂಥದ್ದೇ ಒಂದು ನಿದರ್ಶನದಲ್ಲಿ, ಹುಟ್ಟುವ ಮಗುವಿನ ಲಿಂಗ ಬಹಿರಂಗ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದ ದುಬೈ ಮೂಲದ ದಂಪತಿ ವಿಚಿತ್ರ ತೋರಿಕೆಯೊಂದನ್ನು ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೆಂಗಳೂರಲ್ಲಿ ಆಘಾತಕಾರಿ ಘಟನೆ: ಕ್ಷುಲ್ಲಕ ಕಾರಣಕ್ಕೆ ಫೈರಿಂಗ್
ತಮ್ಮ ಮಗುವಿನ ಲಿಂಗ ಬಹಿರಂಗಗೊಳಿಸಲು ಹುಲಿಯೊಂದರಿಂದ ಬಲೂನ್ ಅನ್ನು ಒಡೆಸಿದ ಈ ದಂಪತಿ ಶೇರ್ ಮಾಡಿದ ವಿಡಿಯೋವೊಂದು ನೆಟ್ಟಿಗರ ಅಸಹನೆಗೆ ಕಾರಣವಾಗಿದೆ. ಮಾನವರ ಅರ್ಥವಿಲ್ಲದ ಶೋಕಿಗಳಿಗೆ ವನ್ಯ ಪ್ರಾಣಿಗಳನ್ನು ಹೀಗೆ ನಡೆಸಿಕೊಳ್ಳುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಕಾರ್ಲೊಟ್ಟಾ ಕವಲ್ಲಾರಿ ಹೆಸರಿನ ಬಳಕೆದಾರರೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಈ ಕ್ಲಿಪ್ ಅನ್ನು ಶೇರ್ ಮಾಡಿದ್ದಾರೆ. “ಲಿಂಗ ಬಹಿರಂಗ ಆಯ್ತು, ವೈಲ್ಡ್ ಕಂಗ್ರಾಟ್ಸ್ ಮಮ,” ಎಂದು ಪೋಸ್ಟ್‌ಗೆ ಕ್ಯಾಪ್ಷನ್ ಹಾಕಲಾಗಿದೆ.
OTT ಯಲ್ಲಿ ಈ ವಾರ ಸಖತ್ ಇಂಟ್ರೆಸ್ಟಿಂಗ್ ಸಿನಿಮಾ, ಸಿರೀಸ್ ರಿಲೀಸ್: ಇಲ್ಲಿದೆ ಮಾಹಿತಿ, ನೆಟ್ ಫ್ಲಿಕ್ಸ್ ನಲ್ಲಿ‘ಲಿಟಲ್ ಥಿಂಗ್ಸ್ ಸೀಸನ್ 4’, ತಾಪ್ಸಿ ಪನ್ನು ರ ‘ರಶ್ಮಿ ರಾಕೆಟ್’ ZEE 5 ನಲ್ಲಿ
ಈ ಕೃತ್ಯದಲ್ಲಿ ಹುಲಿಗೆ ಯಾವುದೇ ತೊಂದರೆ ಕೊಟ್ಟಿಲ್ಲ ಹಾಗೂ ಪ್ಲಾಸ್ಟಿಕ್ ಅನ್ನು ವಿಲೇವಾರಿ ಮಾಡಲಾಗಿದೆ ಎಂದು ಪೋಸ್ಟ್‌ನಲ್ಲಿ ಸಮರ್ಥನೆಯನ್ನೂ ಕೊಡಲಾಗಿದೆ.
ಕಪ್ಪು ಬಣ್ಣದ ಬಲೂನ್ ಒಂದರತ್ತ ನಡೆದು ಬಂದ ಹುಲಿ ಅದನ್ನು ಪರಚಿ ಒಡೆದು ಹಾಕುತ್ತಲೇ ಪಿಂಕ್ ಬಣ್ಣದ ಪುಡಿ ಹೊರಬಂದಿದ್ದು, ಹುಟ್ಟುವ ಮಗು ಹೆಣ್ಣು ಎಂದು ಸೂಚಿಸಿದೆ.