ತಿರುವನಂತಪುರಂ: ಕೇರಳ ಸರ್ಕಾರವು ಮೂರು ವರ್ಷಗಳ ಕಾಲ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ 5,000 ರೂ. ಹೆಚ್ಚುವರಿ ಆರ್ಥಿಕ ನೆರವು ನೀಡಲಿದೆ. ಕೋವಿಡ್ ನಿಂದ ಮೃತಪಟ್ಟವರಿಗೆ ನೆರವು ನೀಡಲಾಗುವುದು.
ಕೇರಳ ರಾಜ್ಯದಲ್ಲಿ ಕೋವಿಡ್ -19 ನಿಂದ ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬಗಳಿಗೆ ಕೇರಳ ಸರ್ಕಾರವು ತಿಂಗಳಿಗೆ 5,000 ರೂಪಾಯಿಗಳ ಹೆಚ್ಚುವರಿ ಆರ್ಥಿಕ ಪರಿಹಾರವನ್ನು ನೀಡಲು ನಿರ್ಧರಿಸಿದೆ. ಈ ಸಹಾಯವನ್ನು ಮೂರು ವರ್ಷಗಳವರೆಗೆ ನೀಡಲಾಗುವುದು ಮತ್ತು ಇದು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಮಾತ್ರ ಅನ್ವಯವಾಗುತ್ತದೆ.
ಕೇರಳದಲ್ಲಿ ಕೋವಿಡ್ ಸಂತ್ರಸ್ತರ ಬಿಪಿಎಲ್ ಕುಟುಂಬಗಳು 3 ವರ್ಷಗಳವರೆಗೆ ತಿಂಗಳಿಗೆ 5000 ರೂ.ಪಡೆಯಲಿವೆ. ವಿಶೇಷ ಹಣಕಾಸಿನ ನೆರವಿನೊಂದಿಗೆ 50,000 ರೂ. ಒಂದು ಬಾರಿ ನೀಡಲಾಗುವುದು ಎಂದು ಕೇರಳ ಸಚಿವ ಥಾಮಸ್ ಐಸಾಕ್ ಟ್ವೀಟ್ ಮಾಡಿದ್ದಾರೆ.