ಹಾಗೆಯೇ ತಮಿಳುನಾಡಿನ ಕುಟುಂಬವೊಂದು ತಮ್ಮ ಮುದ್ದಿನ ಶ್ವಾನಕ್ಕೆ ಸೀಮಂತ ಕಾರ್ಯ ನೆರವೇರಿಸಿದ್ದು, ಈ ಫೋಟೋಗಳು ಸದ್ಯ ಭಾರಿ ವೈರಲ್ ಆಗಿವೆ.
ತಮಿಳುನಾಡಿನ ತೇನಿ ಜಿಲ್ಲೆಯ ಉಪ್ಪುಕೋಟೈ ನಿವಾಸಿಯಾಗಿರುವ ಕುಮಾರೇಶನ್ ಕುಟುಂಬದ ಭಾಗವಾಗಿರುವ ಸಾಕು ನಾಯಿಗೆ ಸೀಮಂತ ಕಾರ್ಯ ನೆರವೇರಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ, ನಾಯಿಯನ್ನು ತನ್ನ ಕುಟುಂಬ ಸದಸ್ಯರು ಸುತ್ತುವರಿದಿದ್ದು ಮತ್ತು ಅವಳ ಸುತ್ತಲೂ ಕೆಂಪು ಬಟ್ಟೆ ಸುತ್ತಿಕೊಂಡಿರುವುದನ್ನು ಫೋಟೋದಲ್ಲಿ ಕಾಣಬಹುದು. ಜೊತೆಗೆ ಶ್ವಾನದ ಕುತ್ತಿಗೆಗೆ ಮಾಲೆಯನ್ನೂ ಹಾಕಲಾಗಿದೆ.
ಪತ್ನಿ ಇಷ್ಟದಂತೆ ಮನೆ ನಿರ್ಮಿಸಿದ 72 ವರ್ಷದ ಪತಿ
ಕುಮಾರೇಶನ್ ಅವರಿಗೆ ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ. ಅವರು ಚಿಕ್ಕವರಿದ್ದಾಗ ನಾಯಿಮರಿ ಸಿಕ್ಕಿದ್ದು, ಅದನ್ನು ಸಾಕತೊಡಗಿದ್ದರು. ಸಮಯ ಕಳೆದಂತೆ ಅವರು ಹೆಚ್ಚು ಹೆಚ್ಚು ನಾಯಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಈಗ ಅವರು ಒಟ್ಟು 10 ನಾಯಿಗಳನ್ನು ಹೊಂದಿದ್ದಾರೆ.
ಇದೀಗ ಸೀಮಂತ ಕಾರ್ಯ ನೆರವೇರಿಸಿದ ಶ್ವಾನವನ್ನು ಮೂರು ವರ್ಷಗಳ ಹಿಂದೆ ಮನೆಗೆ ಕರೆ ತರಲಾಗಿತ್ತು. ಇದಕ್ಕೆ ರೇಷ್ಮೆ ಎಂದು ಹೆಸರಿಡಲಾಗಿದೆ. ಇದೀಗ ರೇಷ್ಮೆ ಗರ್ಭಿಣಿ ಎಂದು ತಿಳಿದಾಗ ಕುಟುಂಬವು ಅದಕ್ಕಾಗಿ ಸೀಮಂತ ಕಾರ್ಯ ನಡೆಸಲು ನಿರ್ಧರಿಸಿತ್ತು. ಜೊತೆಗೆ ಸಂಬಂಧಿಕರನ್ನೂ ಕೂಡ ಈ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಈ ಭವ್ಯವಾದ ಸಮಾರಂಭ ನೋಡಿ ನೆರೆಹೊರೆಯವರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಏಕೆಂದರೆ ರೇಷ್ಮೆಯನ್ನು ಹೊಸ ಬಟ್ಟೆಗಳಲ್ಲಿ ಅಲಂಕರಿಸಲಾಗಿತ್ತು. ಐದು ಬಗೆಯ ಅಕ್ಕಿಯನ್ನು ತಿನ್ನಿಸಲಾಯಿತು. ಬಳೆಗಳನ್ನು ಕೂಡ ತೊಡಿಸಲಾಯಿತು.