
ವಿವಿಧ ದಾಖಲೆಗಳೊಂದಿಗೆ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡುವುದು ಇಂದು ಅತ್ಯಗತ್ಯ. ನಿಮ್ಮ ಪಾನ್ ಕಾರ್ಡ್ ಅನ್ನು ಆಧರ್ ಜತೆ ಲಿಂಕ್ ಮಾಡಲೇಬೇಕೆಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಒಂದು ವೇಳೆ ಮಾಡದೇ ಹೋದರೆ ಪಾನ್ ಕಾರ್ಡ್ ರದ್ದಾಗಲೂಬಹುದು. ಇಪಿಎಫ್ಒ ಕೂಡ ಇದೇ ರೀತಿಯ ನಿಯಮಕ್ಕೆ ಒಳಪಟ್ಟಿದೆ. ನಿಮ್ಮ ಆಧಾರ್, ಪಾನ್ ಲಿಂಕ್ ಮಾಡುವವರೆಗೂ ಪಿಎಫ್ ಖಾತೆಗೆ ಹಣ ಜಮಾ ಮಾಡಲು ಕಂಪನಿಗಳಿಗೆ ಅವಕಾಶ ಇರುವುದಿಲ್ಲ.
BREAKING: ವಾಹನ ಪರವಾನಿಗೆ ಅವಧಿ ನವೀಕರಣ ಕುರಿತಂತೆ ಕೇಂದ್ರ ಸಾರಿಗೆ ಸಚಿವಾಲಯದಿಂದ ಮಹತ್ವದ ಮಾಹಿತಿ
ಇದೀಗ ಎಲ್ಐಸಿ ಮತ್ತು ಪಾನ್ ಲಿಂಕಿಂಗ್ ಪ್ರಕ್ರಿಯೆ ನಡೆಯುವುದು. ಎಲ್ಐಸಿ ಪ್ರಕಾರ, ಪಾನ್ ಅನ್ನು ಎಲ್ಐಸಿಗೆ ಲಿಂಕ್ ಮಾಡುವುದರಿಂದ ಹಲವು ಪ್ರಯೋಜನವಾಗಲಿದೆ. ಇದಕ್ಕಾಗಿ ನೀವು ನಿಮ್ಮ ಸೆಲ್ ಫೋನ್ ಸಂಖ್ಯೆಯನ್ನು ಸಲ್ಲಿಸಬೇಕು ಮತ್ತು ಆ ಸಂಖ್ಯೆಗೆ ಒಟಿಪಿ ಬರಲಿದೆ. ಆ ಒಟಿಪಿಯೊಂದಿಗೆ ದಾಖಲೆಗಳ ಲಿಂಕ್ ಪೂರ್ಣಗೊಳ್ಳುತ್ತದೆ. ನಮೂನೆ ಸಲ್ಲಿಸಿದ ಬಳಿಕ ನೊಂದಣಿ ಪೂರ್ಣಗೊಂಡ ಬಳಿಕ ಸಂದೇಶವೂ ಬರಲಿದೆ. ಎಲ್ಐಸಿ ವೆಬ್ ಸೈಟ್ಗೆ ಹೋಗಿ ಈ ಚಟುವಟಿಕೆಯನ್ನು ಶೀಘ್ರವಾಗಿ ಮುಗಿಸಬಹುದಾಗಿದೆ.
ನಿರಂತರ ಮಳೆಗೆ ವಾಲಿದ ಕಟ್ಟಡ, ಯಾವುದೇ ಕ್ಷಣದಲ್ಲಿ ಕುಸಿಯುವ ಆತಂಕ: ಸಚಿವ ಗೋಪಾಲಯ್ಯ ಭೇಟಿ
ಎಲ್ಐಸಿ ಇದಕ್ಕಾಗಿ ಮೂರು ಹಂತಗಳನ್ನು ನೀಡಿದ್ದು ಸಲೀಸಾಗಿ ಪಾನ್ ಎಲ್ ಐಸಿ ಪಾಲಿಸಿ ಜತೆ ಲಿಂಕ್ ಮಾಡಬಹುದಾಗಿದೆ. ಯಾವುದೇ ದಾಖಲೆಯ ಅಗತ್ಯ ಇರುವುದಿಲ್ಲ.
1. ಎಲ್ಐಸಿ ವೆಬ್ ಸೈಟ್ ನಲ್ಲಿ ನಿಮ್ಮ ಪಾನ್ ಸಂಖ್ಯೆ ಹಾಗೂ ನಿಮ್ಮ ಪಾಲಿಸಿ ಪಟ್ಟಿ ಒದಗಿಸುವುದು.
2. ನಿಮ್ಮ ಮೊಬೈಲ್ ಸಂಖ್ಯೆ ನೀಡಿದರೆ ಎಲ್ಐಸಿ ನಿಮ್ಮ ಫೋನ್ ಗೆ ಒಟಿಪಿ ಕಳಿಸಲಿದೆ. ಅದನ್ನು ನಮೂದಿಸಿ.
3. ಫಾರ್ಮ್ ಸಲ್ಲಿಸಿದ ನಂತರ ನಿಮ್ಮ ನೋಂದಣಿ ವಿನಂತಿಯು ಯಶಸ್ವಿಯಾಗಿದೆ ಎಂಬ ಸಂದೇಶ ಸ್ವೀಕರಿಸುತ್ತೀರಿ. ನಿಮ್ಮ ಪಾನ್ ಅನ್ನು ಎಲ್ಐಸಿ ಪಾಲಿಸಿಗೆ ಲಿಂಕ್ ಮಾಡಲಾಗಿದೆ ಎಂದು ಇದು ಸೂಚಿಸುತ್ತದೆ.