alex Certify ‌ʼಆಧಾರ್ʼ ಅಪ್ಡೇಟ್‌ಗೆ ಸೆಲ್ಫ್ ಸರ್ವೀಸ್: ಪರಿಷ್ಕರಣೆ ಶುಲ್ಕದ ಕುರಿತು ಇಲ್ಲಿದೆ ಡೀಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಆಧಾರ್ʼ ಅಪ್ಡೇಟ್‌ಗೆ ಸೆಲ್ಫ್ ಸರ್ವೀಸ್: ಪರಿಷ್ಕರಣೆ ಶುಲ್ಕದ ಕುರಿತು ಇಲ್ಲಿದೆ ಡೀಟೇಲ್ಸ್

ಸರ್ಕಾರ ಆಧಾರ್ ಮೇಲೆ ಅವಲಂಬನೆ ಹೆಚ್ಚಿಸಿದೆ. ಅದೇ ಪ್ರಕಾರ ಜನ ಸಾಮಾನ್ಯರಿಗೂ ಸಹ ಆಧಾರ್ ಆಧಾರದಲ್ಲಿ ತಮ್ಮ ಕೆಲಸಗಳನ್ನು ಸಲೀಸಾಗಿ ಮಾಡಿಕೊಳ್ಳಲು ಅವಕಾಶವಾಗುತ್ತಿದೆ. ಇದೀಗ ಆಧಾರ್ ಪರಿಷ್ಕರಣೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.

BIG NEWS: HDK ’ಪುಟಗೋಸಿ’ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು; ಮೈತ್ರಿ ಸರ್ಕಾರ ಪತನಕ್ಕೆ ಕುಮಾರಸ್ವಾಮಿಯೇ ಕಾರಣ; ವಿಪಕ್ಷ ನಾಯಕನ ವಾಗ್ದಾಳಿ

ಆಧಾರ್ ಕಾರ್ಡ್‌ಗೆ ಎಂದೋ ನೋಡಿದ ಮಾಹಿತಿ ಇಂದಿಗೆ ಸರಿ ಹೊಂದದೇ ಇದ್ದಾಗ ಅದನ್ನು ಪರಿಷ್ಕರಿಸಲು ಅಥವಾ ತಪ್ಪಾದ ಮಾಹಿತಿ ಇದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಆಧಾರ್ ಸೆಲ್ಫ್ ಸರ್ವೀಸ್ ಪೋರ್ಟಲ್ ಮೂಲ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಮತ್ತು ಭಾಷೆಯನ್ನು ಆನ್ ಲೈನ್ ಮೂಲಕವೇ ಅಪ್‌ಡೇಟ್ ಮಾಡಿಕೊಳ್ಳಲು ಯುಐಡಿಎಐ ಅವಕಾಶ ಮಾಡಿಕೊಟ್ಟಿದೆ.

ʼನವರಾತ್ರಿʼಯಲ್ಲಿ ಉಪವಾಸ ವೃತ ದೋಷವಾದ್ರೆ ಏನು ಮಾಡ್ಬೇಕು…..?

ಈ ರೀತಿ ಪರಿಷ್ಕರಣೆಗೆ ಶುಲ್ಕ ನಿಗದಿಮಾಡಲಾಗಿದೆ. ಪ್ರತಿ ಅಪ್ ಡೆಟ್ ಮಾಡಿಕೊಳ್ಳಲು 50 ರೂ. ಪಾವತಿಸಬೇಕಾಗುತ್ತದೆ. ಒಂದು ಸಮಯದಲ್ಲಿ ಒಂದು ಕ್ಷೇತ್ರದ ಅಪ್‌ಡೇಟ್ ಮಾತ್ರ ಪರಿಗಣನೆಯಾಗುತ್ತದೆ ಎಂಬುದು ವಿಶೇಷ ಸಂಗತಿ.

ಅಪ್ ಡೇಟ್ ಗೆ ಯಾವೆಲ್ಲ ದಾಖಲೆ ಬೇಕು?

ಹೆಸರು ಬದಲಾಣೆಗೆ: ಐಡೆಂಟಿಟಿ ಕಾರ್ಡ್ (ಪಿಒಐ) ಸ್ಕ್ಯಾನ್ ಕಾಪಿ
ಹುಟ್ಟಿದ ದಿನ ಬದಲಾವಣೆಗೆ: ಡೇಟ್ ಆಫ್ ಬರ್ತ್ ದಾಖಲೆಯ ಸ್ಕ್ಯಾನ್ ಕಾಪಿ
ಲಿಂಗ ಬದಲಾವಣೆಗೆ: ಅಧಿಕೃತ ಮೊಬೈಲ್ಗೆ ಬರುವ ಒಟಿಪಿ
ವಿಳಾಸ ಬದಲಾವಣೆಗೆ: ಅಡ್ರೆಸ್ ಪ್ರೂಫ್ ನ (ಪಿಒಐ) ಸ್ಕ್ಯಾನ್ ಕಾಪಿ

BIG BREAKING: ದೇಶದಲ್ಲಿ ತಗ್ಗಿದ ಕೊರೊನಾ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 15,823 ಜನರಲ್ಲಿ ಸೋಂಕು ಪತ್ತೆ

https://ssup.uidai.gov.in/ssup/ ಕ್ಲಿಕ್ ಮಾಡಿ ಮಾಹಿತಿ ಅಪ್ ಡೇಟ್ ಮಾಡಿಕೊಳ್ಳಬಹುದಾಗಿದೆ. ಮಹತ್ವದ ವಿಚಾರವೇನೆಂದರೆ, ಈ ಆನ್ ಲೈನ್ ಪ್ರಕ್ರಿಯೆ ಆರಂಭಿಸುವ ಮುನ್ನ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆ ಮ್ಯಾಂಡೇಟರಿ. ಏಕೆಂದರೆ ಅಲ್ಲಿಗೆ ಒಟಿಪಿ ಬರಲಿದೆ. ಅದನ್ನು ನಮೂದಿಸಿದರಷ್ಟೇ ಪರಿಷ್ಕರಣೆಗೆ ಅವಕಾಶ ಸಿಗಲಿದೆ.

ಉಳಿದಂತೆ ಕುಟುಂಬ, ಪೋಷಕರ ವಿವರಣೆ, ಬಯೋ ಮೆಟ್ರಿಕ್ ಅಪ್ ಡೇಟ್ ಮಾಡಿಕೊಳ್ಳಲು ಸಮೀಪದ ಆಧಾರ್ ಸೇವಾ ಕೇಂದ್ರಕ್ಕೆ ತೆರಳಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...