ಗ್ರಾಮಿ ಪ್ರಶಸ್ತಿ ವಿಜೇತೆ ಅಮಿ ವೈನ್ ಹೌಸ್ಗೆ ಸೇರಿದ ನೂರಾರು ವಸ್ತುಗಳು, ತನ್ನ ಕೊನೆಯ ಕನ್ಸರ್ಟ್ಗೆಂದು ಧರಿಸಿದ ಬಟ್ಟೆಯೂ ಸೇರಿ, ಅಮೆರಿಕದಲ್ಲಿ ಹರಾಜಿಗೆ ಬೀಳಲಿವೆ.
ಜೂಲಿಯನ್ಸ್ ಹೆಸರಿನ ಹರಾಜು ಸಂಸ್ಥೆ ಅಮಿಯ ಶೂಗಳು, ಶಾರ್ಟ್ಗಳು, ಬ್ರಾ, ಪುಸ್ತಕಗಳು ಮತ್ತು ದಾಖಲೆಗಳನ್ನು ಹರಾಜಿಗೆ ಇಡಲಿದೆ. ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ನಲ್ಲಿ ನವೆಂಬರ್ 6 ಮತ್ತು 7ರಂದು ಈ ವಸ್ತುಗಳ ಹರಾಜು ನಡೆಯಲಿದೆ.
ಮತ್ತೆ ಎಲ್ಲರ ಮನ ಗೆಲ್ಲುವ ಕೆಲಸ ಮಾಡಿದ ಧೋನಿ
ಸೋಮವಾರ ನ್ಯೂಯಾರ್ಕ್ನಲ್ಲಿ ಪ್ರದರ್ಶನಕ್ಕೊಳಪಟ್ಟ ಈ ವಸ್ತುಗಳು ಹರಾಜಿನಲ್ಲಿ $2 ದಶಲಕ್ಷ (15 ಕೋಟಿ ರೂ.ಗಳು) ಪಡೆಯುವ ಅಂದಾಜಿದೆ. ಹರಾಜಿನಲ್ಲಿ ಬರುವ ದುಡ್ಡು ಅಮಿ ವೈನ್ಹೌಸ್ ಪ್ರತಿಷ್ಠಾನಕ್ಕೆ ಸಂದಾಯವಾಗಲಿದೆ. ದುಶ್ಚಟಗಳಿಗೆ ತುತ್ತಾಗಿರುವ ಯುವಕರು ಚಟದಿಂದ ಹೊರ ಬರಲು ಈ ಪ್ರತಿಷ್ಠಾನ ಸಹಾಯ ಮಾಡುತ್ತಿದೆ.
ಮದ್ಯದಲ್ಲಿ ವಿಷ ಬೆರೆತ ಕಾರಣ ಜುಲೈ 23, 2011ರಲ್ಲಿ ಅಮಿ ತಮ್ಮ 27ನೇ ವಯಸ್ಸಿನಲ್ಲೇ ಮೃತಪಟ್ಟರು.
ಕುಟುಂಬದೊಂದಿಗೆ ದುರ್ಗಾ ಪೂಜೆಯ ಮಹಾಸಪ್ತಮಿ ಆಚರಿಸಿದ ನಟಿ ಕಾಜೊಲ್ ದೇವಗನ್
“ಮೃತಪಟ್ಟವರ ಹೆತ್ತವರೊಂದಿಗೆ ಕೆಲಸ ಮಾಡುತ್ತಿರುವ ವೇಳೆ ಈ ರೀತಿ ಹರಾಜು ಕಾರ್ಯಕ್ರಮ ಇಟ್ಟುಕೊಳ್ಳುವುದು ಬಹಳ ಕಷ್ಟವಾಗುತ್ತದೆ,” ಎಂದು ಜೂಲಿಯನ್ಸ್ನ ವ್ಯವಸ್ಥಾಪಕ ನಿದೇರ್ಶಕ ಮಾರ್ಟಿನ್ ನೋಲನ್ ತಿಳಿಸಿದ್ದಾರೆ.
ತಂದೆ ಕಮಲ್ ಹಾಸನ್ ಜೊತೆ ಶ್ರುತಿ ಹಾಸನ್ ಸಹೋದರಿ ಅಕ್ಷರಾ ಹುಟ್ಟುಹಬ್ಬ ಆಚರಣೆ
“ಬ್ಲಾಕ್ ಟು ಬ್ಲಾಕ್’ ಹೆಸರಿನ ತಮ್ಮ ಆಲ್ಬಂಗಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದಿರುವ ವೈನ್ಹೌಸ್ ಖುದ್ದು ಮದ್ಯಪಾನ ಹಾಗೂ ಮಾದಕ ದ್ರವ್ಯದ ಚಟದಿಂದ ಹೊರಬರಲು ಪರದಾಡುತ್ತಿದ್ದರು. ಬೆಲ್ಗ್ರೇಡ್ನಲ್ಲಿ ತಮ್ಮ ಕೊನೆಯ ಕನ್ಸರ್ಟ್ನಲ್ಲಿ ನೈಜ ಪ್ರದರ್ಶನ ನೀಡಲು ಪರದಾಡುತ್ತಿದ್ದ ಅಮಿರನ್ನು ಆ ವೇಳೆ ಪ್ರೇಕ್ಷಕರು ಹೀಗಳೆದಿದ್ದರು. ಆಕೆಯ ಪ್ರವಾಸ ರದ್ದಾದ ತಿಂಗಳ ಬಳಿಕ ಅಮಿ ಮೃತಪಟ್ಟರು.