ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಮೈದಾನದಲ್ಲಿ ಮಾತ್ರವಲ್ಲ ಮೈದಾನದ ಹೊರಗೂ ಸುದ್ದಿಯಲ್ಲಿರುತ್ತಾರೆ. ಧೋನಿ ಮಾಡುವ ಅನೇಕ ಕೆಲಸಗಳು ಯುವಕರಿಗೆ ಸ್ಫೂರ್ತಿದಾಯಕವಾಗಿರುತ್ತವೆ. ಈಗ ಮತ್ತೊಂದು ಕೆಲಸದ ಮೂಲಕ ಧೋನಿ ಎಲ್ಲರಿಂದ ಭೇಷ್ ಎನ್ನಿಸಿಕೊಂಡಿದ್ದಾರೆ.
ತಂದೆ ಕಮಲ್ ಹಾಸನ್ ಜೊತೆ ಶ್ರುತಿ ಹಾಸನ್ ಸಹೋದರಿ ಅಕ್ಷರಾ ಹುಟ್ಟುಹಬ್ಬ ಆಚರಣೆ
ಅಷ್ಟಕ್ಕೂ ಧೋನಿ ಮಾಡಿದ್ದೇನು ಗೊತ್ತಾ ? ಧೋನಿ, ಟೀಂ ಇಂಡಿಯಾದ ಮೆಂಟರ್ ಆಗಿ ಕೆಲಸ ಮಾಡಲಿದ್ದಾರೆ. ಟಿ-20 ವಿಶ್ವಕಪ್ ವೇಳೆ ಧೋನಿ ತಂಡದ ಮೆಂಟರ್ ಆಗಿರಲಿದ್ದಾರೆ. ಧೋನಿ ಈ ಕೆಲಸಕ್ಕೆ ಒಂದು ರೂಪಾಯಿ ಕೂಡ ಸಂಭಾವನೆ ಪಡೆಯುವುದಿಲ್ಲವಂತೆ.
ಈ ವಿಷ್ಯವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಹಿರಂಗಪಡಿಸಿದ್ದಾರೆ. ಧೋನಿ, ಟಿ-20 ತಂಡದ ಮಾರ್ಗದರ್ಶಕರಾಗಿ ಆಗಿ ಕೆಲಸ ಮಾಡಲಿದ್ದಾರೆ. ಆದ್ರೆ ಒಂದು ರೂಪಾಯಿ ಕೂಡ ಅವರು ಸಂಭಾವನೆ ಪಡೆಯುವುದಿಲ್ಲವೆಂದು ಶಾ ಹೇಳಿದ್ದಾರೆ.
ಟೀಂ ಇಂಡಿಯಾಕ್ಕೆ ಎಂದು ಸಿಗಲಿದ್ದಾರೆ ಹೊಸ ಕೋಚ್…..? ಬಿಸಿಸಿಐ ನೀಡಿದೆ ಉತ್ತರ
ಐಪಿಎಲ್ ಮುಗಿದ ತಕ್ಷಣ ಟಿ-20 ವಿಶ್ವಕಪ್ ನಡೆಯಲಿದೆ. ಅಕ್ಟೋಬರ್ 17ರಿಂದ ವಿಶ್ವಕಪ್ ಶುರುವಾಗಲಿದೆ. ಐಪಿಎಲ್ ಫೈನಲ್ ಪಂದ್ಯ ಅಕ್ಟೋಬರ್ 15ರಂದು ನಡೆಯಲಿದೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಟೀ ಇಂಡಿಯಾ ಅನೇಕ ಪ್ರಶಸ್ತಿಗಳನ್ನು ತಂದಿದೆ.
ಪ್ರತಿಯೊಬ್ಬ ಭಾರತೀಯರಿಗೆ ಸಿಗಲಿದೆ ಆರೋಗ್ಯ ವಿಮೆ: ಸರ್ಕಾರ ರೂಪಿಸಿದೆ ಹೊಸ ಯೋಜನೆ
2007 ರಲ್ಲಿ ಆಡಿದ ಮೊದಲ ಟಿ 20 ವಿಶ್ವಕಪ್ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ, ಗೆಲುವು ಸಾಧಿಸಿತ್ತು. 2007ರ ನಂತ್ರ ಟಿ-20 ವಿಶ್ವಕಪ್ ಭಾರತದ ಕೈ ಸೇರಿಲ್ಲ. ಈ ಬಾರಿ ಧೋನಿ ಮಾರ್ಗದರ್ಶನದಲ್ಲಿ ಭಾರತ ಮತ್ತೆ ಕಪ್ ಎತ್ತಿ ಹಿಡಿಯಲಿದೆ ಎಂಬ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ.