ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಕೆಲವು ಇಂಟ್ರೆಸ್ಟಿಂಗ್ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಶ್ವಾನವೊಂದರ ಉಲ್ಲಾಸದ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಇದನ್ನು ಮೊದಲು ಕ್ಲೇಟನ್ ಕ್ಯುಬಿಟ್ ಎಂಬ ಕಲಾವಿದ ಹಂಚಿಕೊಂಡಿದ್ದರು.
BIG NEWS: ಮಕ್ಕಳಿಗೆ ಎಂದಿನಿಂದ ಸಿಗಲಿದೆ ಕೊರೊನಾ ಲಸಿಕೆ…? ಮೊದಲು ಯಾರಿಗೆ ಸಿಗಲಿದೆ ಡೋಸ್….? ಬೆಲೆ ಎಷ್ಟು….? ಇಲ್ಲಿದೆ ವಿವರ
ಒಂದು ಸಣ್ಣ ವಿಡಿಯೋ ಕ್ಲಿಪ್ ನಲ್ಲಿ, ಒಂದು ಗಾಜು ಇಲ್ಲದ ಮರದ ಬಾಗಿಲಿನ ಚೌಕಟ್ಟಿನ ಹಿಂದೆ ನಾಯಿ ನಿಂತಿದೆ. ಗಾಜು ಇರದಿದ್ದರೂ, ಇನ್ನೂ ಇದೆ ಅಂತಾ ನಾಯಿ ಭಾವಿಸುತ್ತದೆ. ಅಲ್ಲದೆ ಇದನ್ನು ಪರೀಕ್ಷಿಸಲು ಶ್ವಾನವು ಹಲವಾರು ಬಾರಿ ತನ್ನ ಕೈಯನ್ನು ಮುಂದೆ ಚಾಚುತ್ತದೆ. ಆದರೂ ಕೂಡ ಗಾಜು ಇಲ್ಲ ಎಂಬುದು ಅದರ ಅರಿವಿಗೆ ಬಂದಿಲ್ಲ. ಕೊನೆಗೆ ಮರದ ಬಾಗಿಲನ್ನು ತೆರೆದ ಮೇಲೆ ಅದು ಹೊರಗೆ ಬಂದಿದೆ. ಈ ವಿಡಿಯೋವನ್ನು ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾಕ್ಕೆ ಎಂದು ಸಿಗಲಿದ್ದಾರೆ ಹೊಸ ಕೋಚ್…..? ಬಿಸಿಸಿಐ ನೀಡಿದೆ ಉತ್ತರ
ಆನಂದ್ ಮಹೀಂದ್ರ ಕೇವಲ ಹಾಸ್ಯಕ್ಕಾಗಿ ಈ ವಿಡಿಯೋವನ್ನು ಹಂಚಿಕೊಂಡಿಲ್ಲ. ಅವರು ನಾಯಿಯ ಚಟುವಟಿಕೆಯನ್ನು ವ್ಯಾಪಾರದ ಅಭ್ಯಾಸಕ್ಕೆ ಹೋಲಿಸಿದ್ದಾರೆ ಮತ್ತು ಯುವ ಉದ್ಯಮಿಗಳಿಗೆ ಮತ್ತು ಅನುಭವಿ ವ್ಯಾಪಾರಿಗಳಿಗೆ ಅನುಸರಿಸುವಂತಹ ಅಮೂಲ್ಯವಾದ ಸಲಹೆ ನೀಡಿದ್ದಾರೆ.
“ನಮ್ಮ ಅಭ್ಯಾಸದ ಚಟವನ್ನು ವಿವರಿಸಲು ಇದಕ್ಕಿಂತ ಉತ್ತಮವಾದ ಮಾರ್ಗವಿಲ್ಲ. ಇಂದು ವ್ಯವಹಾರದಲ್ಲಿ ಅತ್ಯಮೂಲ್ಯವಾದ ಕೌಶಲ್ಯವೆಂದರೆ ಹೇಗೆ ಮುಕ್ತರಾಗುವುದು ಎಂದು ತಿಳಿಯುವುದು” ಎಂದು ಆನಂದ್ ಮಹೀಂದ್ರಾ ಅವರು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಟ್ವಿಟ್ಟರ್ ಬಳಕೆದಾರರು ಆನಂದ್ ಮಹೀಂದ್ರಾ ಅವರ ಅಭಿಪ್ರಾಯಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.
https://twitter.com/claytoncubitt/status/1447294037791318022?ref_src=twsrc%5Etfw%7Ctwcamp%5Etweetembed%7Ctwterm%5E1447777283385683973%7Ctwgr%5E%7Ctwcon%5Es3_&ref_url=https%3A%2F%2Fwww.timesnownews.com%2Fthe-buzz%2Farticle%2Four-addiction-to-habit-anand-mahindra-shares-business-tip-with-a-hilarious-dog-video-watch%2F822870