ದೇಶದ ಅನೇಕ ಭಾಗಗಳಲ್ಲಿ ಇಂದು ಜಿಮೇಲ್ ಸೇವೆಯಲ್ಲಿ ವ್ಯತ್ಯಯ ಕಂಡು ಬಂದಿದೆ. ಬಹುತೇಕ ಜಿ ಮೇಲ್ ಬಳಕೆದಾರರು ಇಂದು ಮೇಲ್ ಕಳುಹಿಸಲು ಹಾಗೂ ಸ್ವೀಕರಿಸುವಲ್ಲಿ ಅಡಚಣೆಯನ್ನು ಕಂಡಿದ್ದಾರೆ.
ಭಾರತದ ಜಿ ಮೇಲ್ ಬಳಕೆದಾರರಲ್ಲಿ 68 ಪ್ರತಿಶತ ಮಂದಿ ಇಂದು ಈ ವ್ಯತ್ಯಯದ ಸಂಬಂಧ ದೂರನ್ನು ನೀಡಿದ್ದಾರೆ. 18 ಪ್ರತಿಶತ ಮಂದಿ ಸರ್ವರ್ ಕನೆಕ್ಷನ್ ಸಮಸ್ಯೆಯನ್ನು ವರದಿ ಮಾಡಿದ್ದರೆ 14 ಪ್ರತಿಶತ ಮಂದಿ ಲಾಗಿನ್ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದಾರೆ.
ಭಾರತದ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳ ಜಿ ಮೇಲ್ ಬಳಕೆದಾರರು ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ಇತರೆ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ವರದಿ ಮಾಡಿದ್ದಾರೆ.
ಆದರೆ ಈ ಸಂಬಂಧ ಜಿಮೇಲ್ನಿಂದ ಯಾವುದೇ ಪ್ರತಿಕ್ರಿಯೆಗಳು ಇದುವರೆಗೂ ಲಭ್ಯವಾಗಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ವಿಶ್ವಾದ್ಯಂತ ಫೇಸ್ಬುಕ್, ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಂ ಸೇವೆಯಲ್ಲಿ ಕೂಡ ವ್ಯತ್ಯಯ ಉಂಟಾಗಿತ್ತು.