ಬಿಸಿಸಿಐ ಈ ತಿಂಗಳು ಬ್ಯುಸಿಯಾಗಿದೆ. ಈ ತಿಂಗಳು ಬಿಸಿಸಿಐ ಅನೇಕ ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ. ಇದೇ ತಿಂಗಳು ಐಪಿಎಲ್ ಗೆ ಎರಡು ತಂಡಗಳ ಆಯ್ಕೆ ಅಂತಿಮಗೊಳ್ಳಲಿದೆ. ಇದ್ರ ಜೊತೆ ಲೀಗ್‌ನ ಮಾಧ್ಯಮ ಹಕ್ಕುಗಳಿಗಾಗಿ ಟೆಂಡರ್ ನೀಡಲಿದೆ.
ಬಿಸಿಸಿಐನ ಆತಿಥ್ಯದಲ್ಲಿ ಅಕ್ಟೋಬರ್ 17 ರಿಂದ ಟಿ 20 ವಿಶ್ವಕಪ್ ಆರಂಭವಾಗಲಿದೆ. ಇದ್ರ ಜೊತೆಯಲ್ಲೇ ಬಿಸಿಸಿಐ ಮತ್ತೊಂದು ಕೆಲಸ ಮಾಡಲಿದೆ. ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಜಾಗಕ್ಕೆ ಯಾರು ಬರ್ತಾರೆ ಎಂಬುದನ್ನು ಬಿಸಿಸಿಐ ನಿರ್ಧರಿಸಬೇಕಿದೆ.
ದೇಶದಲ್ಲಿ ಹೆಚ್ಚಾಗ್ತಿದೆ ಲಿಂಗ ಪರಿವರ್ತನೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ
ಬಿಸಿಸಿಐ, ಟೀಂ ಇಂಡಿಯಾದ ಹೊಸ ಕೋಚ್ ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಈ ತಿಂಗಳು ಆರಂಭಿಸಲಿದೆ. ಬಿಸಿಸಿಐ ಈ ವಾರದ ಕೊನೆಯಲ್ಲಿ ಹೊಸ ಕೋಚ್ ಮತ್ತು ಸಹಾಯಕ ಸಿಬ್ಬಂದಿ ಹುದ್ದೆಗೆ ಜಾಹೀರಾತು ನೀಡಲಿದೆ. ಈ ವಾರದ ಅಂತ್ಯದ ವೇಳೆಗೆ ಹೊಸ ಕೋಚ್‌ಗಾಗಿ ಜಾಹೀರಾತು ನೀಡುತ್ತೇವೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಟೀಮ್ ಇಂಡಿಯಾದ ಕೋಚ್‌ಗೆ ಸಂಬಂಧಿಸಿದ ಷರತ್ತುಗಳನ್ನು ಮತ್ತು ಅಗತ್ಯ ಅರ್ಹತೆಗಳನ್ನು ಬಿಸಿಸಿಐ ಈಗಾಗಲೇ ನಿರ್ಧರಿಸಿದೆ. ನವೆಂಬರ್‌ನಲ್ಲಿ ನಡೆಯುವ ನ್ಯೂಜಿಲೆಂಡ್ ಸರಣಿಗೂ ಮುನ್ನ ಹೊಸ ಕೋಚ್ ಮತ್ತು ಸಹಾಯಕ ಸಿಬ್ಬಂದಿ ಆಯ್ಕೆಯಾಗಬೇಕಿದೆ.
ತಂದೆಯನ್ನು ಪೈಲಟ್ ಆಗಿ ನೋಡಿದ ಪುತ್ರಿಯ ಖುಷಿ ಕಂಡು ನೆಟ್ಟಿಗರು ಫಿದಾ….!
ಟಿ 20 ವಿಶ್ವಕಪ್ ನಂತರ ರವಿಶಾಸ್ತ್ರಿ ಮತ್ತು ಟೀಂ ಇಂಡಿಯಾದ ಉಳಿದ ಸಹಾಯಕ ಸಿಬ್ಬಂದಿ ಅವಧಿ ಮುಗಿಯಲಿದೆ. ಈ ಹುದ್ದೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಸ್ವತಃ ಶಾಸ್ತ್ರಿ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ಹೊಸ ಕೋಚ್ ನೇಮಕ ಅನಿವಾರ್ಯವಾಗಿದೆ. ಸ್ಪರ್ಧೆಯಲ್ಲಿ ಅನೇಕ ಮಾಜಿ ಆಟಗಾರರ ಹೆಸರು ಕೇಳಿ ಬರ್ತಿದ್ದು, ಯಾರಿಗೆ ಪಟ್ಟ ಎಂಬುದನ್ನು ಕಾದು ನೋಡಬೇಕಿದೆ.