ಕೊರೊನಾ ನಿಯಂತ್ರಣಕ್ಕೆ ದೊಡ್ಡ ಅಸ್ತ್ರ ಕೊರೊನಾ ಲಸಿಕೆ. ಭಾರತದಲ್ಲಿ ಈವರೆಗೆ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿತ್ತು. ಕೊರೊನಾ ಮೂರನೇ ಅಲೆ ಮಕ್ಕಳಿಗೆ ಕಾಡಲಿದೆ ಎಂಬ ಭಯವಿದೆ. ಮಕ್ಕಳಿಗೆ ಲಸಿಕೆ ಬಂದಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಾಗೂ ಹೊರಗೆ ಬಿಡಲು ಪಾಲಕರು ಭಯಪಡುತ್ತಿದ್ದರು. ಆದ್ರೆ ಇಂದು ಪಾಲಕರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಭಾರತ್ ಬಯೋಟಿಕ್ ಸಂಸ್ಥೆ ತಯಾರಿಸಿದ ಕೋವ್ಯಾಕ್ಸಿನ್ ಲಸಿಕೆಯನ್ನು ಎರಡರಿಂದ 18 ವರ್ಷದೊಳಗಿನ ಮಕ್ಕಳಿಗೆ ಹಾಕಲು ಡಿಜಿಜಿಐ ತುರ್ತು ಅನುಮತಿ ನೀಡಿದೆ.
ತಂದೆಯನ್ನು ಪೈಲಟ್ ಆಗಿ ನೋಡಿದ ಪುತ್ರಿಯ ಖುಷಿ ಕಂಡು ನೆಟ್ಟಿಗರು ಫಿದಾ….!
ಈ ಅನುಮತಿ ನಂತ್ರ ಪಾಲಕರಲ್ಲಿ ಮತ್ತೊಂದಿಷ್ಟು ಗೊಂದಲ ಶುರುವಾಗಿದೆ. ಯಾವಾಗ ಲಸಿಕೆ ಹಾಕಲಾಗುತ್ತದೆ ಎಂಬುದು ಸೇರಿದಂತೆ ಲಸಿಕೆ ಎಷ್ಟು ಸೇಫ್ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ.
ಭಾರತ್ ಬಯೋಟಿಕ್ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಮಾಡಿತ್ತು. ಮಕ್ಕಳಿಗೆ 28 ದಿನಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ಹಾಕಿತ್ತು. ಲಸಿಕೆ ಮಕ್ಕಳ ಮೇಲೆ ಹೆಚ್ಚು ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಮಕ್ಕಳಲ್ಲಿ ಯಾವುದೇ ಅಡ್ಡಪರಿಣಾಮ ಕೂಡ ಕಾಣಿಸಿಲ್ಲ. ಆದ್ರೆ ಮಕ್ಕಳಿಗೆ ಎಂದಿನಿಂದ ಕೊರೊನಾ ಲಸಿಕೆ ಹಾಕಲಾಗುವುದು ಎಂಬ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಲಭ್ಯವಾಗಿಲ್ಲ.
ಪ್ರತಿಯೊಬ್ಬ ಭಾರತೀಯರಿಗೆ ಸಿಗಲಿದೆ ಆರೋಗ್ಯ ವಿಮೆ: ಸರ್ಕಾರ ರೂಪಿಸಿದೆ ಹೊಸ ಯೋಜನೆ
ಮಕ್ಕಳಿಗಾಗಿ ಕೊರೊನಾ ಲಸಿಕೆ ಮಾರ್ಗಸೂಚಿ ಸಿದ್ಧವಾಗ್ತಿದೆ. ಎಲ್ಲ ಮಕ್ಕಳಿಗೂ ಒಂದೇ ಬಾರಿ ನೀಡುವಷ್ಟು ಲಸಿಕೆ ನಮ್ಮಲ್ಲಿಲ್ಲ. ಹಾಗಾಗಿ ಮೊದಲು ಗಂಭೀರ ಅನಾರೋಗ್ಯದಿಂದ ಬಳಲುವ ಮಕ್ಕಳಿಗೆ ಸರ್ಕಾರ ಲಸಿಕೆ ನೀಡಲಿದೆ. ಕ್ಯಾನ್ಸರ್, ಅಸ್ತಮಾ ಸೇರಿದಂತೆ ಬೇರೆ ಖಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಮೊದಲ ಆಧ್ಯತೆ ಸಿಗಲಿದೆ.
ಕೊರೊನಾ ಲಸಿಕೆ ಪಡೆದ ಮಕ್ಕಳು ಯಾವುದೇ ಭಯವಿಲ್ಲದೆ ಶಾಲೆಗೆ ಹೋಗಬಹುದೆಂದು ತಜ್ಞರು ಹೇಳಿದ್ದಾರೆ.
ಮಕ್ಕಳಿಗೆ ಕೊರೊನಾ ಲಸಿಕೆ ಹಾಕಿದ್ರೆ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಲಾಭವಾಗಲಿದೆ. ಮೂರನೇ ಅಲೆ ಮಕ್ಕಳಿಂದ ದೊಡ್ಡವರಿಗೆ ಬರಲಿದೆ ಎಂಬ ಭಯವಿತ್ತು. ಮಕ್ಕಳಿಗೆ ಲಸಿಕೆ ಬಿದ್ದಲ್ಲಿ ಅಪಾಯ ಕಡಿಮೆಯಾಗುತ್ತದೆ.
ಸಕಲ ಸಮೃದ್ಧಿ ಪ್ರಾಪ್ತಿಗಾಗಿ ನವರಾತ್ರಿಯಲ್ಲಿ ಪೂಜಿಸಿ ದುರ್ಗಾ ಮಾತೆಯ ಒಂಬತ್ತು ರೂಪ…!
ಮಕ್ಕಳ ಕೊರೊನಾ ಲಸಿಕೆಗೆ ಸರ್ಕಾರ ಎಷ್ಟು ಬೆಲೆ ನಿಗದಿಪಡಿಸಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದೊಡ್ಡವರಿಗೆ ನೀಡಲಾದ ಬೆಲೆಯಲ್ಲಿಯೇ ಮಕ್ಕಳ ಲಸಿಕೆ ಲಭ್ಯವಾಗಲಿದೆ ಎಂಬ ಮಾತುಗಳು ಕೇಳಿ ಬರ್ತಿವೆ.
ಇನ್ನೆರಡು ತಿಂಗಳಲ್ಲಿ ಮಕ್ಕಳ ಕೊರೊನಾ ಲಸಿಕೆ ಅಭಿಯಾನ ಶುರುವಾಗಲಿದೆ ಎನ್ನಲಾಗ್ತಿದೆ.