ದುರ್ಗಾ ಪೆಂಡಾಲ್ ನಲ್ಲಿ ನಟ ಸೋನು ಸೂದ್ ಮೂರ್ತಿ…! 11-10-2021 8:33AM IST / No Comments / Posted In: Featured News, Live News, Entertainment ಪಶ್ಚಿಮ ಬಂಗಾಳದಲ್ಲಿ ದಸರಾ ಸಂದರ್ಭದಲ್ಲಿ ದುರ್ಗಾ ಪೆಂಡಾಲ್ಗಳ ಸ್ಥಾಪನೆಯೇ ದೊಡ್ಡ ಸಂಭ್ರಮಾಚರಣೆ. ಇದು ಲಕ್ಷಾಂತರ ಮಂದಿಗೆ ಉದ್ಯೋಗ ಒದಗಿಸುವ ಜತೆಗೆ ದೇಶದ ಸಾಂಸ್ಕೃತಿಕ ಶ್ರೀಮಂತತೆಯ ಪ್ರತೀಕವೂ ಆಗಿದೆ. ಈ ಹಿಂದೆ ಇತಿಹಾಸ, ಪುರಾಣ, ಮಹಾಭಾರತ, ಕ್ರಾಂತಿಯ ಹೋರಾಟದ ಘಟನಾವಳಿಗಳನ್ನು ಪೆಂಡಾಲ್ನಲ್ಲಿ ಮೂರ್ತಿಗಳ ರೂಪದ ದೃಶ್ಯಾವಳಿಗಳಂತೆ ಸೃಷ್ಟಿಸಲಾಗುತ್ತಿತ್ತು. ಸದ್ಯ, ದುರ್ಗಾ ಪೆಂಡಾಲ್ನಲ್ಲಿ ಕಳೆದ ಒಂದು ವರ್ಷ ಸಾಮಾಜಿಕವಾಗಿ ಆದ ಪರಿವರ್ತನೆಯ ಪ್ರಮುಖ ಘಟನಾವಳಿಗಳನ್ನು ಇರಿಸಿಕೊಂಡು ಮೂರ್ತಿಗಳನ್ನು ಮಾಡಿ, ದೃಶ್ಯಾವಳಿಗಳನ್ನು ನಿರ್ಮಿಸಲಾಗುತ್ತಿದೆ. ‘ಆರೋಗ್ಯ’ದಾಯಕ ಕುಂಬಳಕಾಯಿ ದೋಸೆ ಕಳೆದ ಕೊರೊನಾ ಎರಡನೇ ಅಲೆಯ ಅಬ್ಬರದ ನಡುವೆ ದೇಶಾದ್ಯಂತ ಸಾವಿರಾರು ಮಂದಿಗೆ ಸಹಾಯಹಸ್ತ ಚಾಚುವ ಮೂಲಕ ’ನಿಜ ಹೀರೋ’ ಎನಿಸಿದವರು ಬಾಲಿವುಡ್ ನಟ ಸೋನು ಸೂದ್. ಬಳಿಕ ’ಯಾಸ್ ಚಂಡಮಾರುತ’ ಎದುರಿಸಿದ ಪಶ್ಚಿಮ ಬಂಗಾಳಕ್ಕೆ ತಮ್ಮ ಸ್ವಂತ ಹಣದಿಂದ ನೆರವಿಗೆ ನಿಂತವರು ಕೂಡ ಸೂದ್ ಅವರೇ. ರಾಜ್ಯ ಸರ್ಕಾರದ ಜೊತೆ ಕೈಜೋಡಿಸಿ, ತಮ್ಮ ಕೈಲಾದಷ್ಟು ಸಂತ್ರಸ್ತರಿಗೆ ಅಗತ್ಯ ದಿನಸಿ, ಹೊತ್ತಿಗೆಗಳು, ಬಟ್ಟೆಗಳನ್ನು ಪೂರೈಸಿ ’ಆಪತ್ಬಾಂಧವ’ ಎನಿಸಿದರು. ಇದರ ಸವಿನೆನಪಿಗಾಗಿ ಈ ಬಾರಿ ಕೋಲ್ಕತಾ ನಗರದಲ್ಲಿ ಪ್ರಫುಲ್ಲಾ ಕಾನನ್ ಪೂಜಾ ಸಮಿತಿಯ ದುರ್ಗಾ ಪೆಂಡಾಲ್ನಲ್ಲಿ ಮೀನುಗಾರರಿಗೆ ನೆರವಾಗುತ್ತಿರುವ ಸೋನು ಸೂದ್ ದೃಶ್ಯಾವಳಿಯ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ. ಸಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸಬೇಕೆಂದ್ರೆ ಈ ಮೂರು ವಸ್ತುಗಳನ್ನು ಮುಖ್ಯ ದ್ವಾರದಲ್ಲಿ ಇಡಬೇಡಿ ಒಂದು ಗ್ರಾಮದ ಮಾದರಿ ಸೃಷ್ಟಿಸಿ, ಅಲ್ಲಿನ ಮೀನುಗಾರರ ಮನೆಗಳಿಗೆ ಬ್ಯಾಗ್ ಮೂಲಕ ಪರಿಹಾರ ಸಾಮಗ್ರಿಗಳನ್ನು ಸೂದ್ ತಲುಪಿಸುತ್ತಿರುವಂತೆ ಮೂರ್ತಿಗಳನ್ನು ಇರಿಸಲಾಗಿದೆ. ಅಂದಹಾಗೆ ಸುಂದರ್ಬನ್ನಲ್ಲಿನ ಗ್ರಾಮಗಳು ಪ್ರತಿ ವರ್ಷ ಚಂಡಮಾರುತದಿಂದ ಉಂಟಾಗುವ ಪ್ರವಾಹದಿಂದ ತತ್ತರಿಸುತ್ತವೆ. ಕಳೆದ ವರ್ಷ ಚಂಡಮಾರುತ ಅಂಫನ್ ಹಾಗೂ ಈ ವರ್ಷಾರಂಭದಲ್ಲಿ ’ಯಾಸ್’ ಅಪ್ಪಳಿಸಿದೆ.