ಕಲಬುರಗಿ: ಕಲಬುರಗಿ ಜಿಲ್ಲೆಯ ಹಲವೆಡೆ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ಚಿಂಚೋಳಿ, ಕಾಳಗಿ ತಾಲೂಕಿನ ಹಲಚೆರಾ, ಗಡಿಕೇಶ್ವರ, ರಾಜಾಪುರ ಸೇರಿ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ.
ಬೆಳಗ್ಗೆ 6 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ್ದು, ಮನೆಯಿಂದ ಹೊರಬಂದ ಜನ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಎರಡು ದಿನದಿಂದ ಇದೇ ರೀತಿ ಭೂಮಿ ಕಂಪಿಸುತ್ತಿದೆ ಗ್ರಾಮಸ್ಥರು ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.
ನಿನ್ನೆಯಷ್ಟೇ ಬೆಳಗ್ಗೆ 5.40 ರ ಸುಮಾರಿಗೆ ಎರಡು ಸಲ ಭೂಮಿ ಕಂಪಿಸಿದ ಅನುಭವವಾಗಿತ್ತು. ಕಂಪನದಿಂದ ಆತಂಕಗೊಂಡ ಜನ ಮನೆಯಿಂದ ಹೊರಗೆ ಓಡಿಬಂದಿದ್ದರು. ಗಡಿಕೇಶ್ವರ ಗ್ರಾಮದಲ್ಲಿ ಮೂರು ದಿನಗಳಿಂದ ಕಂಪನದ ಅನುಭವವಾಗಿದೆ. ಪದೇ ಪದೇ ಕಂಪನದಿಂದ ಜನರಲ್ಲಿ ಆತಂಕ ಮೂಡಿದೆ ಎನ್ನಲಾಗಿದೆ.