ಸಾಕು ನಾಯಿಗಳ ಬಗ್ಗೆ ಅನೇಕರಿಗೆ ಸ್ವಲ್ಪ ಹೆಚ್ಚು ಅನಿಸುವ ಮಟ್ಟಿಗೆ ಪ್ರೀತಿ ಇರುತ್ತದೆ. ಸುತ್ತಲಿನ ಮನುಷ್ಯರನ್ನೂ ಕೂಡ ಕಡೆಗಣಿಸಿ ನಾಯಿಗಳ ಮೇಲೆ ಪ್ರೀತಿ ತೋರುವ, ಅವುಗಳ ಸ್ಥಿತಿ, ಭಾವನೆಗಳ ಬಗ್ಗೆ ಕಲ್ಪಿಸಿಕೊಂಡು ಮರುಕಪಡುವ ’ಪ್ರಾಣಿಪ್ರಿಯರು’ ನಮ್ಮ ನಡುವೆ ಬೇಕಾದಷ್ಟು ಮಂದಿ ಇದ್ದಾರೆ.
ಬ್ರೆಜಿಲ್ನ ಸೂಪರ್ ಮಾಡೆಲ್ ’ಜೂ ಐಸೆನ್’ ಪ್ಲೇಬಾಯ್ ನಿಯತಕಾಲಿಕೆಯಲ್ಲಿ ಮಾದಕ ಫೋಟೊಗಳ ಮೂಲಕ ಜನಪ್ರಿಯರಾದವರು. ಆಕೆಯ ಸಾಕುನಾಯಿ ’ಫ್ರಾನ್ಸಿಸ್ಕೊ’ ಹೆಸರಿಗೆ ತಮ್ಮ ಆಸ್ತಿಯ 15 ಕೋಟಿ ರೂ. ನೋಂದಣಿ ಮಾಡಿಸುತ್ತಿದ್ದಾರೆ !
ಹೌದು, ಇದು ಅತಿ ಎನಿಸಿದರೂ ಸತ್ಯ. ಇಂಥವರು ಇದ್ದಾರೆ. ಜೂ ಈಗಾಗಲೇ ತನ್ನ ವಕೀಲರಿಗೆ ಸೂಚಿಸಿ, 15 ಕೋಟಿ ರೂ. ಸ್ವತ್ತಿನ ಮಾಲೀಕನಾಗಿ ’ಫ್ರಾನ್ಸಿಸ್ಕೊ’ ನಾಯಿಯನ್ನು ಮಾಡುವಂತೆ ಲಾಯರ್ ಫೀಸ್ ಕೂಡ ಕೊಟ್ಟು ಬಂದಿದ್ದಾಳಂತೆ.
‘ನಟಿಯೊಂದಿಗೆ ನಟ ಪವನ್ ಕಲ್ಯಾಣ್ ಸಂಬಂಧ’; ವಿವಾದಿತ ಹೇಳಿಕೆ ಹಿಂಪಡೆದ ವೈಎಸ್ಆರ್ಸಿ ಶಾಸಕ
ಇದಕ್ಕೆ ಕಾರಣ, ಜೂ ಈ ಜೀವನದಲ್ಲಿ ತಾಯಿಯಾಗಲು ಸಾಧ್ಯವಿಲ್ಲವಂತೆ. 35 ವರ್ಷದ ಜೂಗೆ ಆಕೆಯ ಸಾಕುನಾಯಿ ಕೊಟ್ಟಷ್ಟು ಪ್ರೀತಿ ಜನರಿಂದ ಸಿಗಲ್ಲ ಎನಿಸಿದೆಯಂತೆ. ನಾಯಿಯ ನಿಸ್ವಾರ್ಥ ಪ್ರೀತಿಯ ಋಣ ತೀರಿಸಲು ಅವರು ಸ್ವತ್ತನ್ನು ಕೊಡುಗೆಯಾಗಿ ಕೊಡುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
Good News: ಮಿಲಿಟರಿ ಶಾಲೆಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ
ಅಂದಹಾಗೆ, ಜೂಗೆ ಮತ್ತೊಂದು ವಿಚಿತ್ರ ಅಭ್ಯಾಸವಿದೆ. ಆಕೆಯು ತನ್ನ ದೇಹಕ್ಕೆ ಇದುವರೆಗೂ 50 ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾಳೆ ! ತನ್ನ ನಿಜಸ್ವರೂಪವನ್ನು ಕನ್ನಡಿಯಲ್ಲಿ ಕಾಣಿಸದಂತೆ ಮಾಡಿಕೊಂಡಿದ್ದೇನೆ ಎಂದು ಆಕೆಯೇ ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ. ಜೂನ ಆದಾಯದಲ್ಲಿ ಕೋಟ್ಯಂತರ ರೂಪಾಯಿಗಳು ಪ್ಲಾಸ್ಟಿಕ್ ಸರ್ಜರಿಗೆ ವ್ಯಯವಾಗುತ್ತಿದೆಯಂತೆ.