‘ಮಹಾರಾಜ’ನ ಸಾರಥ್ಯವನ್ನು ಯಾರು ವಹಿಸುತ್ತಾರೆ..? ಬಹುಶಃ ಈ ಪ್ರಶ್ನೆಗೆ ನಾಳೆ ಸರಿಯಾದ ಉತ್ತರ ಸಿಗುವ ಸಾಧ್ಯತೆ ದಟ್ಟವಾಗಿದೆ. ಕೇಂದ್ರ ಸರ್ಕಾರದ ಪಾಲಿಗೆ ಬಿಳಿಯಾನೆಯಂತಾಗಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಬಿಡ್ನಲ್ಲಿ ವಿಜೇತರ ಹೆಸರನ್ನು ನಾಳೆ ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆಫ್ರಿಕಾದಲ್ಲಿ ಮಕ್ಕಳ ರಕ್ಷಣೆಗೆ ಮಹತ್ವದ ಕ್ರಮ, ಮಲೇರಿಯಾ ಲಸಿಕೆಗೆ ಐತಿಹಾಸಿಕ ಅನುಮೋದನೆ ನೀಡಿದ WHO
ಬರೋಬ್ಬರಿ 68 ವರ್ಷಗಳ ಬಳಿಕ ಏರ್ ಇಂಡಿಯಾ ಪುನಃ ತನ್ನ ಸ್ಥಾಪಕರ ಮಡಿಲಿಗೆ ಸೇರಲಿದೆ ಎಂದು ಹೇಳಲಾಗ್ತಿದೆ. ಟಾಟಾ ಸನ್ಸ್ ವರ್ಷಾಂತ್ಯದ ಒಳಗಾಗಿ ಮಹಾರಾಜನ ಉಸ್ತುವಾರಿಯನ್ನು ವಹಿಸಿಕೊಳ್ಳಲಿದೆ ಎಂದು ಈಗಾಗಲೇ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದನ್ನು ತಪ್ಪು ಎಂದಿದ್ದ ಕೇಂದ್ರ ಸರ್ಕಾರ ಬಿಡ್ನ ಫಲಿತಾಂಶವನ್ನು ಸರ್ಕಾರವೇ ಮಾಧ್ಯಮಗಳಿಗೆ ತಿಳಿಸಲಿದೆ ಎಂದು ಹೇಳಿತ್ತು.
ಏರ್ ಇಂಡಿಯಾ ಖರೀದಿಗೆ ಸರ್ಕಾರವು ಬಿಡ್ಗೆ ಆಹ್ವಾನಿಸಿದಾಗಿನಿಂದ ಮಹಾರಾಜನ ಮಾಲೀಕತ್ವವನ್ನು ವಹಿಸಿಕೊಳ್ಳಲು ಅನೇಕ ಕಾರ್ಪೋರೇಟ್ ಕಂಪನಿಗಳು ಆಸಕ್ತಿ ತೋರಿದ್ದವು. ಇಷ್ಟೊಂದು ದೊಡ್ಡ ಮೊತ್ತದ ಸಾಲವನ್ನು ಹೊಂದಿರುವ ಏರ್ ಇಂಡಿಯಾ ಖರೀದಿಗೆ ಕಾರ್ಪೋರೇಟ್ ಕಂಪನಿಗಳು ಆಸಕ್ತಿ ತೋರಿದ್ದಾದರೂ ಏಕೆ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುವುದು ಸಹಜ.
ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಹುಡುಗನ ಬೊಂಬಾಟ್ ಡಾನ್ಸ್
ಆದರೆ ಈ ಪ್ರಶ್ನೆಗೆ ಸಂಖ್ಯೆಯ ರೂಪದಲ್ಲಿ ಉತ್ತರ ನೀಡಬಹುದಾಗಿದೆ. ಯಾರು ಏರ್ ಇಂಡಿಯಾದ ಮಾಲೀಕತ್ವವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೋ ಅವರು ಸ್ವಯಂಚಾಲಿತವಾಗಿ 400 ದೇಶೀಯ ಮತ್ತು 1,800 ಅಂತರಾಷ್ಟ್ರೀಯ ಲ್ಯಾಂಡಿಂಗ್ ಮತ್ತು ದೇಶೀಯ ವಿಮಾನ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸ್ಲಾಟ್‌ಗಳು ಮತ್ತು ಸಾಗರೋತ್ತರ ವಿಮಾನ ನಿಲ್ದಾಣಗಳಲ್ಲಿ 900 ಸ್ಲಾಟ್‌ಗಳ ನಿಯಂತ್ರಣವನ್ನೂ ಪಡೆಯಲಿದ್ದಾರೆ.
ಬಿಜೆಪಿಯಿಂದ ಅಚ್ಚರಿ ನಿರ್ಧಾರ, ಉದಾಸಿ ಕುಟುಂಬಕ್ಕೆ ಬಿಗ್ ಶಾಕ್ – ಬೈಎಲೆಕ್ಷನ್ ನಲ್ಲಿ ಹೊಸ ಪ್ರಯೋಗಕ್ಕಿಳಿದ ಹೈಕಮಾಂಡ್
ಇದಾದ ಬಳಿಕ ಕಾಡುವ ಇನ್ನೊಂದು ಪ್ರಶ್ನೆಯೆಂದರೆ ಏರ್ ಇಂಡಿಯಾದ ಖಾಸಗೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲು ಎಷ್ಟು ಸಮಯ ಹಿಡಿಯಬಹುದು ಎಂಬುದಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಏರ್ ಇಂಡಿಯಾ 2022ರ ಆರ್ಥಿಕ ವರ್ಷದಲ್ಲಿ ಸಂಪೂರ್ಣ ಖಾಸಗೀಕರಣಗೊಳ್ಳಲಿದೆ. ಅಂತಿಮ ಬಿಡ್ ಸಲ್ಲಿಸಲು ಸೆಪ್ಟೆಂಬರ್ 15ರವರೆಗೆ ಅವಕಾಶ ನೀಡಲಾಗಿತ್ತು.