ಹತ್ತಿಯಿಂದ ತಯಾರಾದ ಯಾವುದೇ ಬಟ್ಟೆಗಳನ್ನು ಧರಿಸಿದರೂ ಸಹ ಅದು ಹಿತಕರ ಎಂದೆನಿಸುತ್ತದೆ. ವಿಶ್ವದ 75 ರಾಷ್ಟ್ರಗಳಲ್ಲಿ 28.67 ಮಿಲಿಯನ್ ಬೆಳೆಗಾರರು ಹತ್ತಿಯನ್ನು ಬೆಳೆಯುತ್ತಾರೆ. ಹೀಗಾಗಿ ಮಿಲಿಯನ್ಗಟ್ಟಲೇ ಜನರಿಗೆ ಹತ್ತಿ ಬೆಳೆಯು ಜೀವನೋಪಾಯದ ಮಾರ್ಗವಾಗಿದೆ. ಅಲ್ಲದೇ ಇದು ಅನೇಕ ಬಡ ಕುಟುಂಬಗಳಿಗೆ ಉದ್ಯೋಗವನ್ನೂ ಒದಗಿಸಿದೆ.
ಆಫ್ರಿಕಾದಲ್ಲಿ ಮಕ್ಕಳ ರಕ್ಷಣೆಗೆ ಮಹತ್ವದ ಕ್ರಮ, ಮಲೇರಿಯಾ ಲಸಿಕೆಗೆ ಐತಿಹಾಸಿಕ ಅನುಮೋದನೆ ನೀಡಿದ WHO
ಪ್ರತಿವರ್ಷ ಅಕ್ಟೋಬರ್ 7ರಂದು ವಿಶ್ವ ಹತ್ತಿ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಹತ್ತಿಯ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುವುದಾಗಿದೆ. ಈ ಮೂಲಕ ಆರ್ಥಿಕ ಅಭಿವೃದ್ಧಿ ಹಾಗೂ ಬಡತನ ನಿವಾರಣೆಯಲ್ಲಿ ಸುಧಾರಣೆ ತರುವ ಉದ್ದೇಶವನ್ನು ಹೊಂದಲಾಗಿದೆ.
2021ರ ಹತ್ತಿ ದಿನದ ಸಾರಾಂಶ
ಈ ವರ್ಷ ಒಳ್ಳೆಯದಕ್ಕಾಗಿ ಹತ್ತಿ(Cotton for Good) ಎಂಬ ಘೋಷ ವಾಕ್ಯವನ್ನು ಆಯ್ಕೆ ಮಾಡಲಾಗಿದೆ. ಹತ್ತಿ ಬೆಳೆಯು ಉದ್ಯೋಗತನ ಹೆಚ್ಚಿಸುವುದರ ಜೊತೆಗೆ ಪರಿಸರ ರಕ್ಷಣೆಯನ್ನೂ ಮಾಡುತ್ತದೆ.
ಕಷ್ಟದಲ್ಲಿದ್ದರೂ ಅಪರಿಚಿತನ ಸಹಾಯಕ್ಕೆಮುಂದಾದ ಮಹಿಳೆ…! ಭಾವುಕರನ್ನಾಗಿಸುತ್ತೆ ಈ ವಿಡಿಯೋ
ವಿಶ್ವ ಹತ್ತಿ ದಿನದ ಇತಿಹಾಸ
ಆಫ್ರಿಕಾದ ಹತ್ತಿ ಉತ್ಪಾದಿಸುವ ರಾಜ್ಯಗಳಾದ ಬೆನಿನ್, ಬುರ್ಕಿನಾ ಫಾಸೋ, ಚಾಡ್ ಹಾಗೂ ಮಾಲಿಯಲ್ಲಿ ಪ್ರಾಯೋಗಿಕ ಹಂತವಾಗಿ ವಿಶ್ವ ವಾಣಿಜ್ಯ ಸಂಸ್ಥೆಯು 2009ರಲ್ಲಿ ವಿಶ್ವ ಹತ್ತಿ ದಿನದ ಆಚರಣೆಯನ್ನು ಆರಂಭಿಸಿತು. ಈ ದಿನದಲ್ಲಿ ಹತ್ತಿಯ ಕುರಿತಂತೆ ಹೆಚ್ಚಿನ ಜ್ಞಾನ ಪಸರಿಸುವುದು ಹಾಗೂ ಹತ್ತಿ ಸಂಬಂಧಿ ಚಟುವಟಿಕೆಗಳನ್ನು ಪ್ರದರ್ಶಿಸುವ ಕಾರ್ಯ ಮಾಡಲಾಯ್ತು.
ಮೃದುವಾದ, ಗುಲಾಬಿ ಬಣ್ಣದ ತುಟಿ ಪಡೆಯಲು ಸಾಕು ಮನೆಯಲ್ಲೇ ಇರುವ ಈ ಒಂದು ವಸ್ತು
ಅಂತಾರಾಷ್ಟ್ರೀಯ ಹತ್ತಿ ಸಲಹಾ ಸಮಿತಿ ನೀಡಿರುವ ಮಾಹಿತಿಯ ಪ್ರಕಾರ, ಹತ್ತಿಯಿಂದ ಸಿಗುವ ವಾರ್ಷಿಕ ಆದಾಯ 41.2 ಬಿಲಿಯನ್ ಡಾಲರ್ ಆಗಿದೆ. ಪ್ರತಿ ವರ್ಷ 18 ಬಿಲಿಯನ್ ಡಾಲರ್ ಮೌಲ್ಯದ ಹತ್ತಿ ವ್ಯಾಪಾರವಾಗುತ್ತದೆ. ಹತ್ತಿಯನ್ನು ಯಾವುದೇ ವಾತಾವರಣದಲ್ಲಿ ಬೆಳೆಯಬಹುದಾಗಿದೆ. ಇದು ಒಣ ಹಾಗೂ ಶುಷ್ಕ ವಲಯಗಳೆರಡರಲ್ಲೂ ಬೆಳೆಯಬಹುದು. ಪ್ರಪಂಚದಲ್ಲಿ ಕೇವಲ 2.1 ಪ್ರತಿಶತ ಭೂಮಿಯಲ್ಲಿ ಮಾತ್ರ ಹತ್ತಿ ಬೆಳೆಯಿದೆ.