ನಿಮ್ಮೆಲ್ಲಾ ಮಹತ್ವದ ದಾಖಲೆಗಳನ್ನು ಸುರಕ್ಷಿತವಾಗಿಡಲು ಡಿಜಿಲಾಕರ್ ನೆರವಾಗಲಿದೆ.
ರಕ್ಷಣಾ ಸಚಿವಾಲಯದ ಮಾಜಿ ಯೋಧರ ಕಲ್ಯಾಣ ಇಲಾಖೆಯು ರಕ್ಷಣಾ ಖಾತೆಗಳ ಪ್ರಧಾನ ನಿಯಂತ್ರಕರಿಂದ ಸೃಷ್ಟಿಸಲ್ಪಟ್ಟ ಇಪಿಪಿಓಅನ್ನು ಡಿಜಿಲಾಕರ್‌ನೊಂದಿಗೆ ಸಮಗ್ರಗೊಳಿಸಿದೆ. ಈ ಕ್ರಮದಿಂದಾಗಿ ದೇಶಾದ್ಯಂತ ಇರುವ 23 ಲಕ್ಷದಷ್ಟು ಪಿಂಚಣಿದಾರರಿಗೆ ಅನುಕೂಲವಾಗಲಿದ್ದು, ಡಿಜಿಲಾಕರ್ ಅಪ್ಲಿಕೇಶನ್ ಮೂಲಕ ಪಿಪಿಓನ ಪ್ರತಿಗಳನ್ನು ಪಡೆಯಬಹುದಾಗಿದೆ.
ಈ ರಾಶಿಯವರಿಗೆ ಇಂದು ಹರಿದು ಬರಲಿದೆ ವಿವಿಧ ಮೂಲಗಳಿಂದ ಧನ ಸಂಪತ್ತು
ಪಿಪಿಓನ ಎಲ್ಲ ದಾಖಲೆಗಳನ್ನು ಡಿಜಿಲಾಕರ್‌ನಲ್ಲಿ ಶಾಶ್ವತವಾಗಿ ಸಂಗ್ರಹಿಸಲಾಗುವುದು, ಇದೀಗ ಪಿಂಚಣಿದಾರರು ಪಿಪಿಓನ ದೈಹಿಕ ಪ್ರತಿ ಪಡೆಯಲು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ.
ಅಲಹಾಬಾದ್‌ನ ಪಿಸಿಡಿಎಅನ್ನು ಇಪಿಪಿಓಗಳಿಗೆ ಸೇವೆ ಒದಗಿಸಲು ನೇಮಿಸಲಾಗಿದೆ. ಇಪಿಪಿಓ ದಾಖಲೆಗಳನ್ನು ಎಲ್ಲಿಂದ ಬೇಕಾದರೂ ಪಿಂಚಣಿದಾರರು ಈಗ ಅಕ್ಸೆಸ್ ಮಾಡಬಹುದಾಗಿದೆ.