ವಯಸ್ಸು ಕೇವಲ ಸಂಖ್ಯೆಯಷ್ಟೇ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗ್ತಿದೆ. ಅಲನ್ ಕ್ಯಾಮ್ಸೆಲ್ ಎಂಬ ಫುಟ್ಬಾಲ್ ಆಟಗಾರನಿಗೆ ವಯಸ್ಸು 88 ದಾಟಿದ್ರೂ ಇನ್ನೂ ಆಡುವ ಹುಮ್ಮಸ್ಸು ನೋಡಿದ್ರೆ ಎಂಥವರಿಗೂ ಸಂತೋಷವಾಗದೆ ಇರಲಾರದು.
ಯುಕೆಯ ಅಲನ್ ಕ್ಯಾಮ್ಸೆಲ್ ಸ್ಥಳೀಯ ಫುಟ್ಬಾಲ್ ಕ್ಲಬ್ಗೆ ಇನ್ನೂ ಗೋಲ್ ಕೀಪರ್ ಆಗಿ ಆಡುತ್ತಿದ್ದಾರೆ. ಕುತೂಹಲಕಾರಿ ಅಂಶವೆಂದರೆ, ಅವರಿಗೆ 40 ವರ್ಷ ತುಂಬುವವರೆಗೂ ಈ ಆಟವನ್ನು ಅವರು ಪ್ರೀತಿಸುತ್ತಿರಲಿಲ್ಲವಂತೆ.
ನಿಮ್ಮ ಸೊಸೆ ಕಂಡರೆ ಹೊಟ್ಟೆಕಿಚ್ಚು ಎಂದು ʼಬಿಗ್ ಬಿʼ ಗೆ ಹೇಳಿದ ಕೆಬಿಸಿ ಸ್ಪರ್ಧಿ
ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ, ಕ್ಯಾಮ್ಸೆಲ್ ಅವರು ಆಟವಾಡಲು ಪ್ರಾರಂಭಿಸಿದಾಗ ಗೋಲು ಗಳಿಸಲು ಸಾಕಷ್ಟು ವೇಗವಾಗಿದ್ದರು. ಆದರೆ, ಅವರ ವಯಸ್ಸು ಮತ್ತು ಕಡಿಮೆ ಫಿಟ್ನೆಸ್ ಮಟ್ಟದಿಂದಾಗಿ ನಂತರ ಗೋಲ್ ಕೀಪರ್ ಆಗಿ ಆಡಲು ಶುರು ಮಾಡಿದ್ದಾರೆ.
88 ವರ್ಷ ವಯಸ್ಸಿನ ಅವರು, ತಂಡಕ್ಕಾಗಿ ಆಡುತ್ತಿರುವ ತಲೆಮಾರುಗಳನ್ನು ನೋಡಿರುವುದಾಗಿ ಹೇಳಿದ್ದಾರೆ. “ನಾನು ಪುರುಷರ ತಂಡದೊಂದಿಗೆ ಆಡಲು ಪ್ರಾರಂಭಿಸಿದೆ. ವರ್ಷಗಳುರುಳಿದಂತೆ ಅವರಿಗೆ ವಯಸ್ಸಾಯಿತು, ಅವರ ಮಕ್ಕಳು, ಮೊಮ್ಮಕ್ಕಳೊಂದಿಗೂ ಆಡುತ್ತಿದ್ದೆ. 30 ರ ಯುವಕರೊಂದಿಗೆ ಆಟವಾಡುತ್ತಿದ್ದೆ, ನನಗೆ ಆಗ 80 ವರ್ಷವಾಗಿತ್ತು” ಎಂದು ಹೇಳಿದ್ದಾರೆ.
IPL: ಕೊನೆಯ ಪಂದ್ಯದ ಸುಳಿವು ನೀಡಿದ ಎಂ.ಎಸ್. ಧೋನಿ, ಚೆನ್ನೈನಲ್ಲಿ ವಿದಾಯ ಪಂದ್ಯವಾಡುವ ಇಂಗಿತ
ಬ್ರಿಟನ್ನ ಹಿರಿಯ ಫುಟ್ಬಾಲ್ ಆಟಗಾರನಾಗಿ ಈಗಾಗಲೇ ಕಿರೀಟವನ್ನು ಅಲಂಕರಿಸಿರುವ ಕ್ಯಾಮ್ಸೆಲ್, ತನ್ನ ದೇಹಕ್ಕೆ ಒತ್ತಡವನ್ನುಂಟು ಮಾಡಿದರೂ ಸಕ್ರಿಯವಾಗಿರಲು ಇಷ್ಟಪಡುವುದಾಗಿ ಹೇಳಿದ್ದಾರೆ.